3ನೇ ಮಗುವಿಗೆ ತಾಯಿಯಾದ ರಂಭಾ: ಅದ್ಧೂರಿಯಾಗಿತ್ತು ಸೀಮಂತ ಶಾಸ್ತ್ರ
Recommended Video

ದಕ್ಷಿಣ ಭಾರತದ ರಂಭೆಯಂತಿದ್ದ ನಟಿ ರಂಭಾ ಸದ್ಯ ಸಿನಿಮಾ ಇಂಡಸ್ಟ್ರಿಯಿಂದ ದೂರವಿದ್ದಾರೆ. ತಮಿಳು, ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ನಟಿಸಿದ್ದ ರಂಭಾ ಈಗ ಮೂರನೇ ಮಗುವಿಗೆ ತಾಯಿಯಾಗಿದ್ದಾರೆ. ಮೂರನೇ ಕಂದಮ್ಮನಿಗೆ ಜನ್ಮ ನೀಡುತ್ತಿರುವ ರಂಭಾ ಅವರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಸೀಮಂತ ಶಾಸ್ತ್ರ ಮಾಡಲಾಯಿತು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
2010ರಲ್ಲಿ ಇಂದ್ರಕುಮಾರ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಂಭಾ ನಂತರ ನ್ಯೂಯಾರ್ಕ್ ನ ಟೊರೊಂಟಿದಲ್ಲಿ ನೆಲೆಸಿದ್ದರು. ವರ್ಷಗಳು ಕಳೆದಂತೆ ರಂಭಾ ಸಂಸಾರದಲ್ಲಿ ಮನಸ್ತಾಪ ಉಂಟಾಗಿ ಗಂಡ ಮತ್ತು ಹೆಂಡತಿಯ ಮಧ್ಯೆ ಕಲಹ ಉಂಟಾಯಿತು.
ಟೊರೊಂಟಾದಿಂದ ಭಾರತಕ್ಕೆ ವಾಪಸ್ ಬಂದ ರಂಭಾ ಕೋರ್ಟ್ ಪತಿಬೇಕು ಎಂದು ಹೇಳಿ ಮೆಟ್ಟಿಲೇರಿದ್ದರು. ನಂತರ ಒಂದಾದ ದಂಪತಿಯ ಬಾಳಲ್ಲಿ ಈಗ ಮತ್ತೊಂದು ಪುಟ್ಟ ಜೀವ ಬರುತ್ತಿದೆ. ಹೀಗೆ ಏಳು-ಬೀಳು ಕಂಡ ರಂಭಾ ಜೀವನದ ಸಂತೋಷದ ಕ್ಷಣ ಈ ಸೀಮಂತ ಕಾರ್ಯಕ್ರಮ. ಫೋಟೋಗಳ ಸಮೇತ ನೋಡಿ. ಮುಂದೆ ಓದಿ.....

ಅದ್ಧೂರಿಯಾಗಿ ನಡೆದ ಸೀಮಂತ
ಟೊರೊಂಟಾದಲ್ಲಿರುವ ತಮ್ಮ ನಿವಾಸದಲ್ಲಿ ರಂಭಾ ಅವರ ಸೀಮಂತ ಕಾರ್ಯಕ್ರಮ ಸಂಪ್ರದಾಯವಾಗಿ, ಅದ್ಧೂರಿಯಾಗಿ ನಡೆದಿದೆ. ಈ ಫೋಟೋಗಳನ್ನ ಖುದ್ದು ರಂಭಾ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಗಂಡ-ಮಕ್ಕಳು ಹಾಗೂ ಬಂಧು-ಬಳಗದವರು ಈ ಕಾಯಕ್ರಮದಲ್ಲಿ ಭಾಗಿಯಾಗಿದ್ದರು.

ಡ್ಯಾನ್ಸ್ ಮಾಡಿ ಗಮನ ಸೆಳೆದ ನಟಿ
ಗರ್ಭೀಣಿಯಾಗಿದ್ದರೂ ಸಂಬಂಧಿಕರ ಜೊತೆಯಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ನಟಿ ರಂಭಾ. ತೆರೆಯಿಂದ ಮರೆಯಾಗಿ ವರ್ಷಗಳ ಕಾಲ ಆಗಿದೆ. ರಂಭಾ ಅವರ ನಟನೆ, ಡ್ಯಾನ್ಸ್ ಎಲ್ಲವನ್ನ ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರಂಭಾ ಅವರ ಈ ಫೋಟೋಗಳು ಅವರ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ.

ರಂಭಾ ಮುದ್ದು ಸಂಸಾರ
ರಂಭಾ ಅವರ ಸೀಮಂತ ಕಾರ್ಯಕ್ರಮದಲ್ಲಿ ಅವರ ಪತಿ ಇಂದ್ರಕುಮಾರ್ ಮತ್ತು ಇಬ್ಬರು ಮಕ್ಕಳು ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ರಂಭಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 7 ವರ್ಷದ ಲಾನ್ಯ ಮತ್ತು 3 ವರ್ಷದ ಸಾಶಾ ತಮ್ಮ ತಂದೆ-ತಾಯಿಯ ಜೊತೆ ಮಿಂಚಿದರು.

ವಿಚ್ಛೇದನ ಸುದ್ದಿಯಾಗಿತ್ತು
2015ರ ಸಮಯದಲ್ಲಿ ರಂಭಾ ಸಂಸಾರದಲ್ಲಿ ಎಲ್ಲವೂ ಸರಿಯಿರಲಿಲ್ಲ. ಪತಿ ಮನೆಯವರು ಮತ್ತು ರಂಭಾ ಮಧ್ಯೆ ಮನಸ್ತಾಪ ಉಂಟಾಗಿತ್ತು. ಟೊರೊಂಟಾದಿಂದ ರಂಭಾ ಭಾರತಕ್ಕೆ ವಾಪಸ್ ಬಂದಿದ್ದರು. ಇಬ್ಬರು ಡಿವೋರ್ಸ್ ಪಡೆಯುತ್ತಾರೆ ಎಂಬ ಸುದ್ದಿಯಾಗಿತ್ತು. ಆದ್ರೆ, ನಾನು ಪತಿಯೊಂದಿಗೆ ಜೀವಿಸಬೇಕು ಎಂದು ರಂಭಾ ಕೋರ್ಟ್ ಮೆಟ್ಟಿಲೇರಿದ್ದರು. ನಂತರ ಇಂದ್ರಕುಮಾರ್ ಮತ್ತು ರಂಭಾ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದರು. ಇದರ ಪರಿಣಾಮ ಈಗ ಸಂತೋಷದ ದಾಂಪತ್ಯ ಸಾಗಿಸುತ್ತಿದ್ದಾರೆ.

ರಂಭಾ ಅವರ ಕೊನೆಯ ಚಿತ್ರ
ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸಿನಿಮಾದಲ್ಲಿ ರಂಭಾ ನಟಿಸಿದ್ದರು. 1993ರಲ್ಲಿ 'ಸರ್ವರ್ ಸೋಮಣ್ಣ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ರಂಭಾ 'ಕೆಂಪಯ್ಯ ಐಪಿಎಸ್', 'ಓ ಪ್ರೇಮವೇ', ಬಾವ ಬಾಮೈದ, ಸಾಹುಕಾರ, ಪಾಂಡುರಂಗವಿಠಲ, ಗಂಡುಗಲಿ ಕುಮಾರ ರಾಮ, ಹಾಗೂ ಕೊನೆಯದಾಗಿ ಅನಾಥರು ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











