ವರ್ಷದ ಬಳಿಕ ಫೇಸ್ ಬುಕ್ ನಲ್ಲಿ ರಮ್ಯಾ ಪ್ರತ್ಯಕ್ಷ: ಏನಂತ ಪೋಸ್ಟ್ ಮಾಡಿದ್ದಾರೆ ನೋಡಿ
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮತ್ತು ರಾಜಕಾರಣಿ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಇಷ್ಟು ದಿನ ಎಲ್ಲಿಗೆ ಹೋಗಿದ್ದರು? ಈಗೆಲ್ಲಿ ಇದ್ದಾರೆ? ಎನ್ನುವುದು ಯಾರಿಗೂ ಗೊತ್ತಿಲ್ಲ. ಆದ್ರೆ ಆಕ್ವೀಟ್ ಆಗಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಸಾಕ್ಷಿ.
ಕಳೆದ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಮ್ಯಾ ಅವರು ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದರು. ತಮ್ಮ ಟ್ವಿಟ್ಟರ್ ಖಾತೆಯೂ ಸೇರಿದ್ದಂತೆ ಎಲ್ಲಾ ಸಾಮಾಜಿಕ ಜಾಲತಾಣವನ್ನು ಡಿ-ಆಕ್ಟಿವೇಟ್ ಮಾಡಿ, ಅಜ್ಞಾತಕ್ಕೆ ತೆರಳಿದ್ದರು.
ಇತ್ತೀಚಿಗೆ ಟ್ವಿಟ್ಟರ್ ಖಾತೆ ಆಕ್ವೀಟ್ ಮಾಡಿದ್ದ ರಮ್ಯಾ ಈಗ ಫೇಸ್ ಬುಕ್ ನಲ್ಲಿಯೂ ಆಕ್ವೀಟ್ ಆಗಿದ್ದಾರೆ. ಕಳೆದ ವರ್ಷ 2019 ಮೇನಲ್ಲಿ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡಿದ್ದ ರಮ್ಯಾ ನಂತರ ಮತ್ತೆ ಕಾಣಿಸಿಕೊಂಡಿರಲಿಲ್ಲ. ಆದರೀಗ ಗರ್ಭಿಣಿ ಆನೆಯ ಹತ್ಯೆ ಖಂಡಿಸಿ ಪೋಸ್ಟ್ ಮಾಡಿದ್ದಾರೆ.

"ನೀವೆಲ್ಲರುೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಮತ್ತು ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ" ಎಂದು ಕೇಳುತ್ತ ಆನೆಯ ಹತ್ಯೆ ಖಂಡಿಸಿ ನ್ಯಾಯಕ್ಕಾಗಿ ನಡೆಯುತ್ತಿರುವ ಅಭಿಯಾನದಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ.
ರಮ್ಯಾ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಿದ್ದೀರಿ, ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿ ಎನ್ನುವ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದ ರಮ್ಯಾ ಬಣ್ಣದ ಲೋಕಕ್ಕೆ ಬರ್ತಾರಾ ಎನ್ನುವುದನ್ನು ಅಭಿಮಾನಿಗಳ ಕುತೂಹಲ.


Click it and Unblock the Notifications











