»   » ವಿಷ್ಣು ಅವರ 3D ಪೋಸ್ಟರ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಆಕರ್ಷಕ ಬಹುಮಾನ ಗೆಲ್ಲಿ

ವಿಷ್ಣು ಅವರ 3D ಪೋಸ್ಟರ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಆಕರ್ಷಕ ಬಹುಮಾನ ಗೆಲ್ಲಿ

Posted By:
Subscribe to Filmibeat Kannada

ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡುತ್ತಿರುವ 'ನಾಗರಹಾವು' ಚಿತ್ರತಂಡದವರು ಮೊನ್ನೆ ಮೊನ್ನೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೆಡ್ ನಲ್ಲಿ ನಡೆದ ಸಮಾರಂಭದಲ್ಲಿ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಇರುವ 3D ಸ್ಟ್ಯಾಂಡಿ ಬಿಡುಗಡೆ ಮಾಡಲಾಗಿತ್ತು.

ಇದೀಗ 'ನಾಗರಹಾವು' ಚಿತ್ರತಂಡದವರು ವಿಷ್ಣು ಅವರ ಅಭಿಮಾನಿಗಳಿಗೆ ಹೊಸ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದಾರೆ. ಈಗಿನ ಯುವಜನತೆಗೆ ಇಷ್ಟವಾಗುವ ರೀತಿಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.[ಡಾ.ವಿಷ್ಣು ಅವರ ನಾಗರಹಾವು ಚಿತ್ರದ 3D ಪೋಸ್ಟರ್ ಅನಾವರಣ]

ಹೌದು ಇತ್ತೀಚಿಗಿನ ಸೆಲ್ಫಿ ಜಮಾನದಲ್ಲಿ ಅಭಿಮಾನಿಗಳಿಗೆ 'ಸೆಲ್ಫಿ ಕ್ಲಿಕ್ಕಿಸುವ' ಸ್ಪರ್ಧೆ ಏರ್ಪಡಿಸಿದ್ದಾರೆ. ಮೊನ್ನೆ ಬಿಡುಗಡೆ ಆದ ಡಾ.ವಿಷ್ಣು ಅವರ 3D ಸ್ಟ್ಯಾಂಡಿ ಇನ್ನೂ ಗೋಪಾಲನ್ ಆರ್ಕೆಡ್ ಮಾಲ್ ನಲ್ಲಿದ್ದು, ಅದರ ಮುಂದೆ ನಿಂತು ಸ್ಟೈಲ್ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು.

Actress Ramya and Diganth starrer 'Nagarahavu' Selfie contest

ತದನಂತರ ಆ ಸೆಲ್ಫಿಯನ್ನು 8277127001 ಫೋನ್ ನಂಬರ್ ಗೆ ವ್ಯಾಟ್ಸಾಪ್ ಮೂಲಕ ಕಳುಹಿಸಿ ಕೊಡಬೇಕು. ಯಾರ ಸೆಲ್ಫಿ ಬಹಳ ಅತ್ಯುತ್ತಮವಾಗಿರುತ್ತದೋ ಅವರಿಗೆ ಅತ್ಯಾಕರ್ಷಕ ಬಹುಮಾನ ನೀಡಲು ಚಿತ್ರದ ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.

ಸ್ಪರ್ಧಾರ್ಥಿಗಳಿಗೆ ಇದೇ ತಿಂಗಳು 15ನೇ ತಾರೀಖು ಕೊನೆಯ ದಿನ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಚಿತ್ರದ ನಟ ದೂದ್ ಪೇಡಾ ದಿಗಂತ್ ಮತ್ತು ನಟಿ ಲಕ್ಕಿ ಸ್ಟಾರ್ ರಮ್ಯಾ ಅವರಿಂದ ಪ್ರಶಸ್ತಿ ಸ್ವೀಕರಿಸಿ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಪೂರ್ವ ಅವಕಾಶ ಒದಗಿ ಬರಲಿದೆ.[ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ 'ನಾಗರಹಾವು'!]

ಸುಮಾರು 4 ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾವನ್ನು ನಿರ್ದೇಶಕ ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡಿದ್ದು, ಪೆನ್ ಮೂವೀಸ್ ಬಂಡವಾಳ ಹೂಡಿದೆ. ನಟ ದೂದ್ ಪೇಡಾ ದಿಗಂತ್ ಮತ್ತು ನಟಿ ರಮ್ಯಾ ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಡಾ.ವಿಷ್ಣು ಅವರೂ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಮಿಂಚಿದ್ದು, ಅವರ ಸಿನಿ ಜೀವನದಲ್ಲಿ ಇದು 201ನೇ ಸಿನಿಮಾವಾಗಲಿದೆ. ಈ ಹಿಂದೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ದ ನಾಗರಹಾವು ಸಿನಿಮಾ ಸೂಪರ್ ಹಿಟ್ ಆಗಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿ ಎಲ್ಲರ ಮನಗೆದ್ದಿತ್ತು.[ಸಾಹಸಸಿಂಹ ಡಾ.ವಿಷ್ಣುವರ್ಧನ್ ಬರೆದ ಒಂದು ಪತ್ರ]

ಯಾರೆಲ್ಲಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಇನ್ನೂ ಹೋಗಿಲ್ಲವೋ ಈಗಲೇ ಗೋಪಾಲನ್ ಆರ್ಕೆಡ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಕ್ಕೆ ಭೇಟಿ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳಿ ಆಕರ್ಷಕ ಬಹುಮಾನ ನಿಮ್ಮದಾಗಿಸಿಕೊಳ್ಳಿ.

-
-
-
-
-
-
-
-
-
-
-
English summary
The team of Nagarahavu has opened a contest. Nagarahavu 3D standies are are placed in Multiplex theaters. Producers have invited the fans to click the Selfie photo in front of the Nagarahavu standie and send it to Whatsup no. 8277127001 and win attractive prizes. Last date for sending the photos is 15-5-2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada