ಕಿಶನ್ ನೋಡಿ 'ಎಕ್ಸ್‌ಕ್ಯೂಸ್‌ ಮಿ' ಡೈಲಾಗ್ ಹೊಡೆದ ರಮ್ಯಾ; ವೀಡಿಯೋ ವೈರಲ್

ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣ ಮದುವೆ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಅರಮನೆ ಮೈದಾನದಲ್ಲಿ ಮದುವೆ ಶಾಸ್ತ್ರಗಳು ನಡೆದಿತ್ತು. ಮರುದಿನ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು ಭಾಗಿ ಆಗಿ ನವ ವಧುವರರಿಗೆ ಶುಭ ಹಾರೈಸಿದರು.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಬಂದಿದ್ದರು. ನಟಿಯರಾದ ರಮ್ಯಾ, ರಾಧಿಕಾ ಕುಮಾರಸ್ವಾಮಿ, ವಸಿಷ್ಠ ಸಿಂಹ, ಧ್ರುವ ಸರ್ಜಾ ದಂಪತಿ ಸೇರಿ ಸಾಕಷ್ಟು ಜನ ಚಿತ್ರರಂಗದ ತಾರೆಯರು ರಾಣಾ- ರಕ್ಷಿತಾ ಮದುವೆ ಆರತಕ್ಷತೆ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಕಪ್ಪು ಬಣ್ಣದ ಸೀರೆಯಲ್ಲಿ ಮೋಹಕತಾರೆ ರಮ್ಯಾ ಕಾಣಿಸಿಕೊಂಡು ಹುಬ್ಬೇರಿಸಿದರು. ವಯಸ್ಸು 40 ದಾಟಿದರೂ ಆಕೆಯ ಅಂದ ಚೆಂದ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

Actress Ramya and Master Kishan Recreated Scene From 2003 Film Excuse me

ರಮ್ಯಾ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಫೋಟೊಗಳು, ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಒಂದ್ಕಾಲದಲ್ಲಿ ರಕ್ಷಿತಾ ಹಾಗೂ ರಮ್ಯಾ ನಡುವೆ ಭಾರೀ ಪೈಪೋಟಿ ಇತ್ತು. ಇಬ್ಬರ ನಡುವೆ ಸಣ್ಣ ಮುನಿಸು ಇತ್ತು. ಬಳಿಕ ಎಲ್ಲಾ ಮರೆತು ಒಂದಾಗಿದ್ದರು. ಒಂದೇ ಚಿತ್ರದಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು. ಸಹೋದರನ ಮದುವೆಗೆ ಸ್ನೇಹಿತೆಯನ್ನು ರಕ್ಷಿತಾ ಆಹ್ವಾನಿಸಿದ್ದರು. ರಮ್ಯಾ ಕೂಡ ಸಡಗರ ಸಂಭ್ರಮದಿಂದಲೇ ಮದುವೆ ಮನೆಯಲ್ಲಿ ಕಂಡರು. ಅಭಿಮಾನಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು.

ಮಾಸ್ಟರ್ ಕಿಶನ್ ಕೂಡ ರಾಣಾ- ರಕ್ಷಿತಾ ಆರತಕ್ಷತೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ರಮ್ಯಾ ನಾಯಕಿಯಾಗಿ ನಟಿಸಿದ್ದ 'ಎಕ್ಸ್‌ಕ್ಯೂಸ್‌ಮಿ' ಚಿತ್ರದಲ್ಲಿ ಬಾಲ ನಟನಾಗಿ ಕಿಶನ್ ಮಿಂಚಿದ್ದರು. ಬಹಳ ವರ್ಷಗಳ ಬಳಿಕ ರಾಣಾ ಆರಕ್ಷತೆ ಸಮಾರಂಭದಲ್ಲಿ ರಮ್ಯಾ- ಕಿಶನ್ ಭೇಟಿ ಆಗಿದ್ದರು. ಈ ಇಬ್ಬರು ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. 'ಎಕ್ಸ್‌ಕ್ಯೂಸ್‌ಮಿ' ರಮ್ಯಾ ಹಾಗೂ ಕಿಶನ್ ನಡುವಿನ ಸನ್ನಿವೇಶವೊಂದರ ಸಂಭಾಷಣೆ ಆಗ ಸದ್ದು ಮಾಡಿತ್ತು. ಆ ಸನ್ನಿವೇಶವನ್ನು 23 ವರ್ಷಗಳ ಬಳಿಕ ರೀ-ಕ್ರಿಯೇಟ್ ಮಾಡಿದ್ದಾರೆ.

ಸ್ಕೂಟಿ ಕೆಟ್ಟೋಗಿದೆ ಎಂದು ರಮ್ಯಾ ಹೇಳಿದಾಗ ಈ ಮನೆ ಮುಂದೆನೇ ಕೆಟ್ಟೋಗ್‌ಬೇಕಾ ಎಂದು ಕಿಶನ್ ಹೇಳಿದ್ದ. ಚೋಟುದ್ದ ಇದ್ದೀಯಾ ಎಷ್ಟು ಮಾತಾಡ್ತಿಯೋ ಎಂದು ರಮ್ಯಾ ಪ್ರತ್ಯುತ್ತರ ನೀಡುವ ಸನ್ನಿವೇಶ ಅದು. ಸದ್ಯ ಎರಡೂ ವೀಡಿಯೋಗಳನ್ನು ಎಡಿಟ್ ಮಾಡಿ ತೇಲಿ ಬಿಡಲಾಗಿದೆ. ಅದು ಸಖತ್ ಸದ್ದು ಮಾಡ್ತಿದೆ.

ಮೋಹಕ ತಾರೆ ನಟಿ ರಮ್ಯಾ ಇತ್ತೀಚೆಗೆ ಚಿತ್ರರಂಗ ಹಾಗೂ ರಾಜಕೀಯರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಎರಡು ವರ್ಷದ ಹಿಂದೆ ಕಂಬ್ಯಾಕ್ ಮಾಡುವ ಸುಳಿವು ಕೊಟ್ಟಿದ್ದರು. 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರ ನಿರ್ಮಿಸಿ ನಟಿಸುತ್ತಿರುವುದಾಗಿ ಹೇಳಿದ್ದರು. ಆದರೆ ಬಳಿಕ ಯಾಕೋ ಆ ಪಾತ್ರ ಮಾಡಲ್ಲ ಎಂದು ಬಿಟ್ಟರು. ಇದು ಅಭಿಮಾನಿಗಳಿಗೆ ಬೇಸರ ತರಿಸಿತ್ತು.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಅತಿಥಿ ಪಾತ್ರದಲ್ಲಿ ರಮ್ಯಾ ನಟಿಸಿದ್ದರು. ಬಳಿಕ ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸ್ವತಃ ತಾವೇ ಒಪ್ಪಿ ಚಿತ್ರದಲ್ಲಿ ನಟಿಸಿ, ಬಳಿಕ ತಮ್ಮ ದೃಶ್ಯಗಳನ್ನು ಬಳಸಿಕೊಳ್ಳಬೇಡಿ ಎಂದು ಚಿತ್ರತಂಡಕ್ಕೆ ಹೇಳಿದ್ದರು. ಆದರೆ ಚಿತ್ರತಂಡ ಟ್ರೈಲರ್‌ನಲ್ಲಿ ಆ ದೃಶ್ಯ ಬಳಸಿಕೊಂಡಿತ್ತು. ಹಾಗಾಗಿ ಸಿನಿಮಾ ರಿಲೀಸ್ ತಡೆ ಕೋರಿ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಆಗಿತ್ತು.

ಪ್ರಕರಣ ಇನ್ನು ಅಂತ್ಯವಾಗಿಲ್ಲ. ಪ್ರಕರಣದ ವಿಚಾರಣೆ ಸಂಬಂಧ ತಿಂಗಳ ಹಿಂದೆ ಕೂಡ ರಮ್ಯಾ ನಗರದ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದರು. ರಮ್ಯಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಮ್ಮಿ ಆಗಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಆಕೆಯನ್ನು ಮತ್ತೆ ಸಿನಿಮಾಗಳಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
When Ramya and Master Kishan Recreated super scean from Excuse me in Rana-rakshitha wedding reception;
Read more about: ramya rakshita master kishan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X