For Quick Alerts
  ALLOW NOTIFICATIONS  
  For Daily Alerts

  ಭರ್ಜರಿ ಸಿಹಿ ಸುದ್ದಿ ಕೊಟ್ಟ ನಟಿ ರಮ್ಯಾ, ಖಚಿತವಾಯ್ತು ಕಮ್‌ಬ್ಯಾಕ್!

  |

  ನಟಿ ಮೋಹಕ ತಾರೆ ರಮ್ಯಾ ಇತ್ತೀಚೆಗೆ ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಇಷ್ಟು ದಿನ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ರಮ್ಯಾ ಇದೀಗ ಸಿನಿಮಾ ವಿಚಾರಕ್ಕೆ ಸಂಬಂಧಪಟ್ಟ ವಿಷಯಗಳ ಮೂಕಲ ಸುದ್ದಿ ಆಗುತ್ತಾ ಇದ್ದಾರೆ.

  ಒಂದಷ್ಟು ಸಿನಿಮಾ ವಿಚಾರಗಳಿಗೆ ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡುತ್ತಾ ಇರುತ್ತಾರೆ. ಅಷ್ಟೇ ಅಲ್ಲ ಜೊತೆಗೆ ಒಂದಷ್ಟು ಕನ್ನಡ ಸಿನಿಮಾಗಳ ಪೋಸ್ಟರ್, ಹಾಡುಗಳನ್ನು ಹಂಚಿಕೊಳ್ಳುವ ಮೂಲಕ ರಮ್ಯಾ ಆ ಚಿತ್ರಗಳಿಗೆ ಸಾಥ್ ನೀಡುತ್ತಲಿರುತ್ತಾರೆ.

  ನಟಿ ಶೃತಿ ಹರಿಹರನ್ ಖಾತೆ ಹ್ಯಾಕ್: ಈ ಎಡವಟ್ಟು ಮಾಡಬೇಡಿ ಅಂತಿದ್ದಾರೆ!ನಟಿ ಶೃತಿ ಹರಿಹರನ್ ಖಾತೆ ಹ್ಯಾಕ್: ಈ ಎಡವಟ್ಟು ಮಾಡಬೇಡಿ ಅಂತಿದ್ದಾರೆ!

  ಹಾಗಾಗಿ ಸದಾ ಎಲ್ಲರನ್ನು ಕಾಡುತ್ತಿದ್ದುದು, ರಮ್ಯಾ ಕಮ್‌ಬ್ಯಾಕ್ ಯಾವಾಗ ಎನ್ನುವುದು. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ. ಅಂತೂ ಇಂತೂ ನಟಿ ರಮ್ಯಾ ತಮ್ಮ ಕಮ್ ಬ್ಯಾಕ್ ಬಗ್ಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ಹಬ್ಬದ ಪ್ರಯುಕ್ತ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

  ನಿರ್ಮಾಪಕಿಯಾದ ರಮ್ಯಾ!

  ನಿರ್ಮಾಪಕಿಯಾದ ರಮ್ಯಾ!

  ಹಬ್ಬದ ಪ್ರಯುಕ್ತ ಸಿಹಿ ಕೊಟ್ಟಿದ್ದಾರೆ ನಟಿ ರಮ್ಯಾ. ಅವರು ಹಂಚಿಕೊಂಡ ಪೋಸ್ಟರ್‌ನಲ್ಲಿ ಏನಿದೆ ಎನ್ನುವುದನ್ನು ಮುಂದೆ ಓದಿ. "ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಸಿಹಿ ಸುದ್ದಿಯ ಕುರಿತು ನಿಮ್ಮೆಲ್ಲರ ಊಹೆ ಸರಿಯಾಗಿದೆ. ಹೌದು ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದಾರೆ. ಆದರೆ ಈ ಬಾರಿ ನನ್ನ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋ ಮೂಲಕ ನಿರ್ಮಾಪಕಿಯಾಗಲಿದ್ದೇನೆ ಎನ್ನುವುದು ವಿಶೇಷ". ಎಂದು ರಮ್ಯಾ ಬರೆದುಕೊಂಡಿದ್ದಾರೆ.

  ಕೆಲ ದಿನ ತಾಳ್ಮೆ ಇಂದಿರಿ: ಕಮ್‌ ಬ್ಯಾಕ್‌ ಬಗ್ಗೆ ರಮ್ಯಾ ಮಾತುಕೆಲ ದಿನ ತಾಳ್ಮೆ ಇಂದಿರಿ: ಕಮ್‌ ಬ್ಯಾಕ್‌ ಬಗ್ಗೆ ರಮ್ಯಾ ಮಾತು

  ರಮ್ಯಾ 'ಆಪಲ್ ಬಾಕ್‌' ನಿರ್ಮಾಣ ಸಂಸ್ಥೆ!

  ರಮ್ಯಾ 'ಆಪಲ್ ಬಾಕ್‌' ನಿರ್ಮಾಣ ಸಂಸ್ಥೆ!

  "ಏನಿದು ಆಪಲ್ ಬಾಕ್ಸ್ ಅದೊಂದು ಸಾಧಾರಣವಾದ, ಆದರೆ ಅಷ್ಟೇ ಉಪಯುಕ್ತವಾದ ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲ್ ಬಾಕ್ಸ್ ಜೊತೆಗಿದೆ. ಸೆಟ್ಟಿನಲ್ಲಿ ಕೂರಲು ಕುರ್ಚಿ ಗಳಿಲ್ಲದೆ ಇದ್ದಾಗ ಅಥವಾ ಕ್ಯಾಮರಾ, ಇಲ್ಲವೇ ನಟರ ಎತ್ತರ ಹೆಚ್ಚಿಸಬೇಕಾದ ದಾಗ ಆಪಲ್ ಬಾಕ್ಸ್ ನೆರವಿಗೆ ಬಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸದಾ ಸ್ಪೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ".

  ರಮ್ಯಾ 2 ಚಿತ್ರಗಳ ನಿರ್ಮಾಣ!

  ರಮ್ಯಾ 2 ಚಿತ್ರಗಳ ನಿರ್ಮಾಣ!

  "ಪ್ರಸ್ತುತ ಆಪಲ್ ಬಾಕ್ಸ್ ಸಂಸ್ಥೆ ಎರಡು ಚಿತ್ರಗಳನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಹೇಳುವಲ್ಲಿ ನನಗೆ ಸಂತಸವಿದೆ. ಈ ಎರಡು ಚಿತ್ರಗಳು ಕೆ ಆರ್ ಜಿ ಸಂಸ್ಥೆಯ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಅದರ ಜೊತೆಯಲ್ಲೇ ಓಟಿಪಿ ಪ್ಲಾಟ್ ಫಾರಂ ಗಳಿಗಾಗಿ ಸಿನಿಮಾ ಹಾಗೂ ವೆಬ್ ಸೀರೀಸ್ ನಿರ್ಮಾಣ ಮಾಡಲು ಆಪಲ್ ಬಾಕ್ಸ್ ಸ್ಟುಡಿಯೋ ಸಿದ್ಧವಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಹೊಸ ವಿವರಗಳನ್ನು ಆಪಲ್ ಬಾಕ್ಸ್‌ನ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿಸಿ.".

  ಫ್ಯಾನ್ಸ್‌ಗೆ ರಮ್ಯಾ ಧನ್ಯವಾದ!

  ಫ್ಯಾನ್ಸ್‌ಗೆ ರಮ್ಯಾ ಧನ್ಯವಾದ!

  "ನನ್ನೆಲ್ಲಾ ಪ್ರಯತ್ನಗಳನ್ನು ನಿರಂತರವಾಗಿ ಜೊತೆಗಿರುವ ನನ್ನ ಕುಟುಂಬ ಸ್ನೇಹಿತರು ಹಿತೈಷಿಗಳು ಸಿನಿಮಾ ವರ್ಗದವರು ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಪ್ರೀತಿಯ ಅಭಿಮಾನಿಗಳಿಗೆ ಹೃತ್ಪೂರ್ವಕ ವಂದನೆಗಳು ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೆಲೆಕಟ್ಟಲಾಗದು. ಇದರ ಜೊತೆಗೆ ವಿಜಯ್ ಕಿರಗಂದೂರು ಜಯಣ್ಣ ಯೋಗಿಜೀ ರಾಜ್ ಮತ್ತು ಕಾರ್ತಿಕ್ ಗೌಡ ಅವರಿಗೆ ವಿಶೇಷ ಧನ್ಯವಾದಗಳು. ಹೊಸ ಆರಂಭ ದತ್ತ ಹೆಜ್ಜೆಯಿಡುತ್ತಾ ಕೃತಜ್ಞತೆಗಳು ಒಂದಿಗೆ ರಮ್ಯ" ಎಂದು ರಮ್ಯಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

  English summary
  Actress Ramya Announces New Film On the Day Of Ganesh Festival, Know More,
  Thursday, September 1, 2022, 10:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X