For Quick Alerts
  ALLOW NOTIFICATIONS  
  For Daily Alerts

  'ಅವನೇ ಶ್ರೀಮನ್ನಾರಾಯಣ'ನಿಗೆ ಫಿದಾ ಆದ ಮೋಹಕ ತಾರೆ

  By Bharath Kumar
  |

  ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದೆ.

  ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ 'ಅವನೇ ಶ್ರೀಮನ್ನಾರಾಯಣ' ಟೀಸರ್ ನಾಲ್ಕು ದಿನಗಳು ಕಳೆದರೂ ಯೂಟ್ಯೂಬ್ ನಲ್ಲಿ ನಂಬರ್ ವನ್ ಸ್ಥಾನದಲ್ಲಿದೆ. ಇಲ್ಲಿಯವರೆಗೂ ಸುಮಾರು 9.7 ಲಕ್ಷ ಮಂದಿ ಟೀಸರ್ ನೋಡಿದ್ದಾರೆ.

  ಇಷ್ಟೆಲ್ಲಾ ಕ್ರೇಜ್ ಹುಟ್ಟುಹಾಕಿರುವ ಈ ಚಿತ್ರದ ಟೀಸರ್ ನೋಡಿ ಮೋಹಕ ತಾರೆ ಮಾಜಿ ಸಂಸದೆ ನಟಿ ರಮ್ಯಾ ಫಿದಾ ಆಗಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ಈ ಟೀಸರ್ ನ್ನ ಹಾಡಿ ಹೊಗಳಿದ್ದಾರೆ.

  ರಕ್ಷಿತ್ ಗೆ ರಮ್ಯಾ ಕೊಟ್ಟ ಬ್ರೇಕಿಂಗ್: 2019ರಲ್ಲಿ ಸಿನಿಮಾಗೆ ಕಮ್ ಬ್ಯಾಕ್.!

  ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ ''ನಾನು ನಿಮ್ಮ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಕನ್ನಡ ಸಿನಿಮಾಗಳಿಗೆ ನೀವು ಸರಿಯಾದ ವ್ಯಕ್ತಿ. ಹೊಸ ಹೊಸ ಸಿನಿಮಾಗಳನ್ನು ಕನ್ನಡ ಜನತೆಗೆ ನೀಡುವ ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ನಿಮ್ಮ ಸಿನಿಮಾಗೆ ಶುಭವಾಗಲಿ' ಎಂದಿದ್ದಾರೆ.

  ಇನ್ನು ರಮ್ಯಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ, ''ನಮ್ಮ ಚಿತ್ರತಂಡಕ್ಕೆ ಶುಭ ಕೋರಿದ್ದಕ್ಕೆ ಧನ್ಯವಾದಗಳು. ನೀವು ಯಾವಾಗಲೂ ಸ್ಯಾಂಡಲ್ ವುಡ್‍ನ ಕ್ವೀನ್. ಮತ್ತೆ ನಿಮ್ಮನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಇಷ್ಟಪಡುತ್ತೇವೆ' ಎಂದು ಉತ್ತರಿಸಿದ್ದರು. ಇದಕ್ಕೆ ರಮ್ಯಾ ಉತ್ತರಿಸಿದ್ದು ''2019ರ ನಂತರ'' ಎಂದು ಸುಮ್ಮನಾಗಿದ್ದಾರೆ.

  2016ರಲ್ಲಿ ತೆರೆಕಂಡಿದ್ದ ನಾಗರಹಾವು ರಮ್ಯಾ ಕಾಣಿಸಿಕೊಂಡ ಕೊನೆಯ ಸಿನಿಮಾ. ಇನ್ನು 'ಅವನೆ ಶ್ರೀಮನ್ನಾರಾಯಣ' ಚಿತ್ರವನ್ನ ಸಚಿನ್ ನಿರ್ದೇಶನ ಮಾಡುತ್ತಿದ್ದು, ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿದ್ದಾರೆ.

  English summary
  Kannada actress ramya appreciate to rakshit shetty starrer avne srimannarayana movie teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X