For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನಲ್ಲಿ ಅಸಮಾನತೆ ಭೂತ: ಧ್ವನಿ ಎತ್ತಿದ ರಮ್ಯಾ, ಆಶಿಕಾ, ಮಾನ್ವಿತಾ, ಅಮೃತಾ!

  |

  ಸಿನಿಮಾರಂಗ ಮಾತ್ರ ಅಲ್ಲ ಎಲ್ಲಾ ಕಡೆಗಳಲ್ಲೂ ಲಿಂಗ ತಾರತಮ್ಯದ ಬಗ್ಗೆ ಆಗಗ ಕೇಳಿ ಬರುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಸದಾ ಒಂದಲ್ಲ ಒಂದು ಹೋರಾಟ ನಡೆಯುತ್ತಲೇ ಇರುತ್ತದೆ. ಆದರೆ ಸಿನಿಮಾರಂಗ ಬಣ್ಣದ ಲೋಕ, ಇಲ್ಲಿ ಎಲ್ಲವನ್ನು ಗ್ಲಾಮರ್‌ನಿಂದಲೇ ಅಳೆಯಲಾಗುತ್ತದೆ. ಹಾಗಾಗಿ ಇಲ್ಲಿ ಮಹಿಳೆಯರಿಗೆ ಸವಾಲು ಹೆಚ್ಚೆ.

  ಸಿನಿಮಾ ನಟಿಯರು, ನಟನೆ ಮಾಡುವ ಮಹಿಳೆಯರು ಸಿನಿಮಾರಂಗದಲ್ಲಿ ನಡೆಯುವ ಹಲವಾರು ಚಟುವಟಿಕೆಗಳ ಬಗ್ಗೆ ಧ್ವನಿ ಎತ್ತುತ್ತಲೇ ಇರುತ್ತಾರೆ. ಆದರೆ ಅದೆಲ್ಲದಕ್ಕೂ ತಾರ್ಕಿಕ ಅಂತ್ಯ ಸಿಗುವುದು ಮಾತ್ರ ತೀರ ಕಡಿಮೆ. ಇದೇ ರೀತಿಯಲ್ಲಿ ಬೆಳಕಿಗೆ ಬಂದಿದ್ದು ಮೀಟೂ ಪ್ರಕರಣ. ಮೀಟೂ ಅಭಿಯಾನ ಶುರುವಾಗಿದ್ದೇ ಆಗದ್ದು, ಬಹಳಷ್ಟು ನಟಿಯರು ಇದರಲ್ಲಿ ಭಾಗಿ ಆಗಿ ತಮ್ಮ ಅಳಲು ತೋಡಿಕೊಂಡಿದ್ದರು.

  ಸಿನಿಮಾರಂಗದಲ್ಲಿ ಲಿಂಗ ತಾರತಮ್ಯ: ಕರಾಳ ಮುಖ ಬಿಚ್ಚಿಟ್ಟ ನಟಿ ರಮ್ಯಾ!ಸಿನಿಮಾರಂಗದಲ್ಲಿ ಲಿಂಗ ತಾರತಮ್ಯ: ಕರಾಳ ಮುಖ ಬಿಚ್ಚಿಟ್ಟ ನಟಿ ರಮ್ಯಾ!

  ಆದರೆ ಈಗ ಕಿರುತೆಗೆ ನಟಿ ಚೇತನಾ ರಾಜ್ ಸಾವಿನ ಬಳಿಕ ಮತ್ತೊಂದು ವಿಚಾತ ಸದ್ದು ಮಾಡುತ್ತಾ ಇದೆ. ಸಿನಿಮಾರಂಗದಲ್ಲಿರುವ ಲಿಂಗ ಭೇದ, ನಟಿಯರನ್ನು ಅಳೆಯುವ ಮಾನದಂಡಗಳ ವಿರುದ್ಧ ಕೂಗು ಕೇಳಿ ಬರುತ್ತಿದೆ. ಈ ವಿಚಾರವಾಗಿ ಮೊದಲು ಧ್ವನಿ ಎತ್ತಿರುವುದು ನಟಿ ರಮ್ಯಾ. ರಮ್ಯಾ ಮಾತನ್ನು ಎತ್ತಿಹಿಡಿದಿರುವ ಹಲವು ನಟಿಯರು, ಇದು ಸತ್ಯ ಎನ್ನುತ್ತಿದ್ದಾರೆ.

  ನಟರು ಹೇಗೆ ಇದ್ದರೂ ಹೀರೋ ಆಗಬಹುದಾ: ರಮ್ಯಾ ಪ್ರಶ್ನೆ?

  ನಟರು ಹೇಗೆ ಇದ್ದರೂ ಹೀರೋ ಆಗಬಹುದಾ: ರಮ್ಯಾ ಪ್ರಶ್ನೆ?

  ನಟಿ ರಮ್ಯಾ ಸಿನಿಮಾರಂಗದಲ್ಲಿ ಇರುವ ಅಸಮಾನತೆಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಸಿನಿಮಾರಂಗದಲ್ಲಿ ನಟಿಯರಯನ್ನು ಅಳೆಯುವ ಮಾನದಂಡ ಇರಬಾರದು ಎಂದು ಪೋಸ್ಟ್ ಮೂಲಕ ಕಿಡಿ ಕಾರಿದ್ದರು. "ಪುರುಷನಾದವನು ಸಂಪೂರ್ಣವಾಗಿ ತಲೆಕೂದಲು ಕಳೆದುಕೊಂಡು ವಿಗ್ ಹಾಕಿಕೊಂಡರೂ ಪರವಾಗಿಲ್ಲ. ಮುಖದಲ್ಲಿನ ಒಂದೊಂದು ಗಲ್ಲವೂ 5 ಕೆಜಿ ಇದ್ದರೂ ಪರವಾಗಿಲ್ಲ. 65 ವರ್ಷವಾಗಿದ್ದರೂ ಆತ ಹೀರೋ ಆಗಿಯೇ ನಟಿಸುತ್ತಾನೆ. ಆದರೆ ನಟಿ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯಲಾಗುತ್ತದೆ" ಎಂದು ರಮ್ಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

  ರಮ್ಯಾ ಜೊತೆ ಸೆಲ್ಫಿಯಲ್ಲಿ ಇದ್ದ ಆ ಹುಡುಗ ಯಾರೆಂದು ಹೇಳಿದ ನಟಿ!ರಮ್ಯಾ ಜೊತೆ ಸೆಲ್ಫಿಯಲ್ಲಿ ಇದ್ದ ಆ ಹುಡುಗ ಯಾರೆಂದು ಹೇಳಿದ ನಟಿ!

  ಚಿತ್ರರಂಗದಲ್ಲಿ ಅಸಮಾನತೆ: ಆಶಿಕಾ ರಂಗನಾಥ್!

  ಚಿತ್ರರಂಗದಲ್ಲಿ ಅಸಮಾನತೆ: ಆಶಿಕಾ ರಂಗನಾಥ್!

  ನಟಿ ರಮ್ಯಾ ಈ ರೀತಿಯಾಗಿ ಪೋಸ್ಟ್ ಹಾಕುತ್ತಿದ್ದ ಹಾಗೆ, ಕನ್ನಡದ ನಟಿ ಮಣಿಯರು ರಮ್ಯಾ ಮಾತಿಗೆ ದನಿ ಗೂಡಿಸಿದ್ದಾರೆ. ನಟಿ ರಮ್ಯಾ ಹೇಳುತ್ತಿರುವುದು ಸರಿ. ಸಿನಿಮಾರಂಗದಲ್ಲಿ ಇರುವ ಅಸಮಾನತೆ ವಿರುದ್ಧ ಹೋರಾಡಬೇಕು ಎಂದಿದ್ದಾರೆ. ನಟಿ ಆಶಿಕಾ ರಂಗನಾಥ್ ರಮ್ಯಾ ಪೋಸ್ಟ್ ಹಂಚಿಕೊಂಡು "ಇದಕ್ಕಿಂತ ಹೆಚ್ಚಿದನ್ನು ಹೇಳಲಾಗುವುದಿಲ್ಲ. ಈ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ ರಮ್ಯಾ ಅವರಿಗೆ ಧನ್ಯವಾದಗಳು, ನಟಿಯರು ಲುಕ್ ಮತ್ತು ಕೆಲವು ವಿಚಾರಗಳಿಂದ ಅಳೆಯಲಾಗುತ್ತದೆ. ಆದರೆ ನಾವು ನಮ್ಮನ್ನು ಪ್ರೀತಿಸುವುದನ್ನು ಮರೆಯಬಾರದು" ಎಂದು ಪೋಸ್ಟ್ ಹಾಕಿದ್ದಾರೆ.

  ರಮ್ಯಾ ಮಾತು ಒಪ್ಪಿದ ಅಮೃತಾ ಅಯ್ಯರ್, ಮಾನ್ವಿತಾ ಕಾಮತ್!

  ರಮ್ಯಾ ಮಾತು ಒಪ್ಪಿದ ಅಮೃತಾ ಅಯ್ಯರ್, ಮಾನ್ವಿತಾ ಕಾಮತ್!

  ಆಶಿಕಾ ರಂನಾಥ್ ಮಾತ್ರ ಅಲ್ಲ. ಕನ್ನಡದ ನಟಿಯರಾದ ಅಮೃತಾ ಅಯ್ಯರ್, ರಮ್ಯಾ ಹೇಳಿರುವ ಮಾತು ನೂರಕ್ಕೆ, ನೂರು ಸತ್ಯ ಎಂದಿದ್ದಾರೆ. ಇನ್ನು ನಟಿ ಮಾನ್ವಿತಾ ಕಮಾತ್ ಕೂಡ ರಮ್ಯಾ ಪೋಸ್ಟ್ ಹಂಚಿಕೊಂಡು "ನೀವು ಹೇಳಿರುವುದು ಸರಿಯಾಗಿ ಇದೆ." ಎಂದಿದ್ದಾರೆ. ಹೀಗೆ ರಮ್ಯಾ ಸಿನಿಮಾರಂಗದ ಸಮಾನತೆ ಬಗ್ಗೆ ಮಾತನಾಡುತ್ತಲೆ, ಹಲವು ನಟಿಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.

  ನಟಿ ರಮ್ಯಾ 19 ವರ್ಷದ ಸಿನಿ ಪಯಣ: ಸದ್ಯದಲ್ಲೇ ಪದ್ಮಾವತಿ ಹೊಸ ಚಿತ್ರ!ನಟಿ ರಮ್ಯಾ 19 ವರ್ಷದ ಸಿನಿ ಪಯಣ: ಸದ್ಯದಲ್ಲೇ ಪದ್ಮಾವತಿ ಹೊಸ ಚಿತ್ರ!

  ಅಸಮಾನತೆ ವಿರುದ್ಧ ನಡೆಯುತ್ತಾ ಅಭಿಯಾನ!

  ಅಸಮಾನತೆ ವಿರುದ್ಧ ನಡೆಯುತ್ತಾ ಅಭಿಯಾನ!

  ಕನ್ನಡದ ನಟಿಯರು ಈ ರೀತಿಯಾಗಿ ಸಿನಿಮಾರಂಗದಲ್ಲಿರುವ ಅಸಮಾನತೆ ಬಗ್ಗೆ ಮಾತನಾಡುತ್ತಾ ಇದ್ದು ಇದಕ್ಕೆ ಮತ್ತಷ್ಟು ನಟಿಯರು ದನಿಗೂಡಿಸುವ ಸಾಧ್ಯತೆ ಇದೆ. ಇನ್ನು ಕನ್ನಡದ ಹಲವು ನಟಿಯರು ಅಸಮಾನತೆ ಬಗ್ಗೆ ಮಾತನಾಡಿದ್ದು, ಸ್ಯಾಂಡಲ್‌ವುಡ್ ಕೂಡ ಈ ರೀತಿಯ ಆಚರಣೆ ಅಭ್ಯಾಸಗಳಿಂದ ಹೊರತಲ್ಲ ಎನ್ನುವುದ ತಿಳಿದು ಬರುತ್ತದೆ. ಮೀಟೂ ಮಾದರಿಯಲ್ಲಿ ಈ ಇದು ಕೂಡ ದೊಟ್ಟ ಮಟ್ಟದಲ್ಲಿ ಅಭಿಯಾನ ಆದರೆ ಬಹುಶಃ ಒಂದಷ್ಟು ಪರಿಣಾಮ ಕಾಣಬಹುದು.

  English summary
  Actress Ramya, Ashika Ranganath, Manvitha, Amrutha Iyengar Raise Voice Against Gender inequality in film industry, Know More,
  Wednesday, May 18, 2022, 16:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X