ರಾಧಿಕಾ ಪಂಡಿತ್ ಫೋಟೋ ನೋಡಿ ಮೋಹಕ ತಾರೆ ರಮ್ಯಾ ಹೇಳಿದ್ದೇನು?
ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಇಬ್ಬರು ಮುದ್ದಾದ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾದಿಂದ ಕೊಂಚ ಬ್ರೇಕ್ ಪಡೆದಿರುವ ರಾಧಿಕಾ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
Recommended Video
ಇತ್ತೀಚಿಗೆ ರಾಧಿಕಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋವನ್ನು ಶೇರ್ ಮಾಡಿದ್ದರು. ಜೊತೆಗೆ 'ನೀವು ನೀವಾಗಿರಿ' ಎಂದು ಕ್ಯಾಪ್ಷನ್ ನೀಡಿದ್ದರು. ವಿಶೇಷ ಅಂದರೆ ರಾಧಿಕಾ ಪಂಡಿತ್ ಫೋಟೋ ನೋಡಿ ಮೋಹಕ ತಾರೆ ಕಾಮೆಂಟ್ ಮಾಡಿದ್ದಾರೆ. ಮೊದಲ ಬಾರಿಗೆ ರಮ್ಯಾ ರಾಧಿಕಾ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಇತ್ತೀಚಿಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿದ್ದಾರೆ. ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಅಲ್ಲದೆ ಸಾಕಷ್ಟು ಮಂದಿಗೆ ಸಾಮಾಜಿಕ ಜಾಲತಾಣದಲ್ಲಿಯೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ರಾಧಿಕಾ ಫೋಸ್ಟ್ ಗೆ ಮೊದಲ ಬಾರಿಗೆ ರಮ್ಯಾ ಕಾಮೆಂಟ್ ಮಾಡಿದ್ದಾರೆ.
ರಾಧಿಕಾ ಫೋಟೋಗೆ ಲೈಕ್ ಮಾಡಿರುವ ರಮ್ಯಾ 'ತುಂಬಾ ಮುದ್ದಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ರಮ್ಯಾ ಕಾಮೆಂಟ್ ಗೆ ರಾದಿಕಾ ಪಂಡಿತ್ ಸಹ ಉತ್ತರ ನೀಡಿದ್ದಾರೆ. 'ನಿಮ್ಮಷ್ಟು ಮುದ್ದಾಗಿಲ್ಲ. ಯಾವಾಗಲು ನಿಮ್ಮನ್ನು ಆರಾಧಿಸುತ್ತೀನಿ' ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಮತ್ತು ರಮ್ಯಾ ಅವರ ಚಾಟ್ ವೈರಲ್ ಆಗಿದೆ. ಇಬ್ಬರ ಕಾಮೆಂಟ್ ಗೆ ಅಭಿಮಾನಿಗಳು ಲೈಕ್ಸ್ ಒತ್ತುತ್ತಿದ್ದಾರೆ. ಮೊದಲ ಬಾರಿಗೆ ರಾಧಿಕಾ ಪೋಸ್ಟ್ ಗೆ ರಮ್ಯಾ ಕಾಮೆಂಟ್ ಮಾಡಿರುವುದು ನೋಡಿ ಅನೇಕರು ಅಚ್ಚರಿಪಟ್ಟುಕೊಳ್ಳುತ್ತಿದ್ದಾರೆ.

ಇನ್ನೂ ಸಾಕಷ್ಟು ಮಂದಿ ರಮ್ಯಾಗೆ ಎಲ್ಲಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಆಕ್ವೀಟ್ ಆಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳನ್ನು ಫಾಲೋ ಮಾಡಿ, ಕಾಮೆಂಟ್ಸ್ ಮಾಡುತ್ತಿವುದನ್ನು ನೋಡುತ್ತಿದ್ದರೆ ಮತ್ತೆ ರಮ್ಯಾ ಬಣ್ಣದ ಲೋಕಕ್ಕೆ ಮರಳುವುದರಲ್ಲಿ ಯಾವುದೆ ಅನುಮಾನ ಇಲ್ಲ ಎನಿಸುತ್ತಿದೆ. ಆದರೆ ಯಾವಾಗ ಎಂಟ್ರಿ ಕೊಡಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











