For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಸುದ್ದಿ ಕೊಡದೇ ಬ್ಯಾಂಕಾಕ್‌ಗೆ ಹಾರಿದ ನಟಿ ರಮ್ಯಾ!

  |

  ಮೋಹಕ ತಾರೆ ನಟಿ ರಮ್ಯಾ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚಿತ್ರರಂಗಕ್ಕೆ ಸಂಬಂಧ ಪಟ್ಟ ಚಟುವಟಿಕೆಗಳಲ್ಲಿ ಭಾಗಿ ಆಗುತ್ತಿದ್ದಾರೆ. ರಮ್ಯಾ ಸಿನಿಮಾರಂಗದಲ್ಲಿ ಸಕ್ರಿಯ ಆಗುತ್ತಿದ್ದ ಹಾಗೆ ರಮ್ಯಾ ಮತ್ತೆ ಸಿನಿಮಾ ಮಾಡುತ್ತಾರೆ. ಕಮ್ ಬ್ಯಾಕ್ ಮಾಡುತ್ತಾರೆ ಎನ್ನುವ ನಿರೀಕ್ಷೆ ಹೆಚ್ಚಾಗಿತ್ತು.

  ಸಿನಿಮಾಗೆ ಕಂಬ್ಯಾಕ್ ಮಾಡಲು ತೆರೆಮರೆಯಲ್ಲಿ ಸಖತ್ ಕಸರತ್ತು ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಈಗ ಸ್ನೇಹಿತೆಯರೊಂದಿಗೆ ನಟಿ ರಮ್ಯಾ ಬ್ಯಾಂಕಾಕ್‌ಗೆ ಹಾರಿದ್ದಾರೆ. ರಮ್ಯಾ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.

  ಮೋದಿಗೆ ಕನ್ನಡ ಸಿನಿಮಾ ಟ್ರೈಲರ್ ನೋಡಿ ಎಂದ ರಮ್ಯಾಮೋದಿಗೆ ಕನ್ನಡ ಸಿನಿಮಾ ಟ್ರೈಲರ್ ನೋಡಿ ಎಂದ ರಮ್ಯಾ

  ಇತ್ತೀಚೆಗೆಷ್ಟೇ ನಟಿ ಕಾವ್ಯಾ ಮತ್ತು ವರುಣ್ ಗೌಡ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಕೊಂಚ ಬ್ರೇಕ್ ತೆಗೆದುಕೊಂಡು ಬ್ಯಾಂಕಾಕ್‌ಗೆ ಹಾರಿದ್ದಾರೆ. ತಮ್ಮ ಚೆಂದದ ಫೋಟೊವೊಂದು ಶೇರ್ ಮಾಡಿದ್ದಾರೆ. ರಮ್ಯಾ ಲುಕ್ ನೋಡಿ ಅಯ್ಯೋ ದೃಷ್ಟಿ ತೆಗೆಸಿಕೊಳ್ಳಿ ಅಂತಾ ಕಾಮೆಂಟ್ ಮಾಡ್ತಿದ್ದಾರೆ.

  ಇದೀಗ ಮತ್ತೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿರುವ ರಮ್ಯಾ, ಭಿನ್ನ ಕಥೆಯ ಮೂಲಕ ಕಮ್‌ಬ್ಯಾಕ್ ಆಗಲು ರೆಡಿಯಾಗಿದ್ದಾರೆ. ಇನ್ನು ಸಿನಿಮಾ ಮಾಡಲು ಕಥೆಗಳನ್ನು ಕೇಳುತ್ತಿದ್ದೇನೆ ಎಂದು ರಮ್ಯಾ ರಿವೀಲ್ ಮಾಡಿದ್ದರು. ಹಾಗಾಗಿ ರಮ್ಯಾ ಕಮ್‌ಬ್ಯಾಕ್‌ ಬಗ್ಗೆ ಸಾಕಷ್ಟು ಕುತೂಹಲ ಹೆಚ್ಚಿದೆ. ಮುಂದಿನ ಸಿನಿಮಾವನ್ನು ಸದ್ಯದಲ್ಲೇ ಅನೌನ್ಸ್ ಕೂಡ ಮಾಡಲಿದ್ದಾರೆ.

  Actress Ramya Fly To Bangkok, Without Giving Hint Of Her Comeback

  'ಅಭಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ರಮ್ಯಾ, ಸಾಕಷ್ಟು ಹಿಟ್ ಸಿನಿಮಾಗಳ ಮೂಲಕ ಕಮಾಲ್ ಮಾಡಿದ್ದರು. ಕಡೆಯದಾಗಿ 'ನಾಗರಹಾವು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರಾಜಕೀಯದಲ್ಲಿ ಬ್ಯುಸಿಯಾದರು. ಇನ್ನು ಕೆಲದಿನ ಸಿನಿಮಾ ಮತ್ತು ರಾಜಕೀಯ ಎರಡು ರಂಗದಿಂದಲೂ ಅಂತರ ಕಾಯ್ದುಕೊಂಡು ಸೈಲೆಂಟ್ ಆಗಿದ್ದರು. ಈಗ ಮತ್ತೆ ರಮ್ಯಾ ಚೈತ್ರ ಕಾಲ ಶುರುವಾಗಿದೆ. ಸಿನಿಮಾ ಸಮಾರಂಭಗಳಿಗೆ ಕಾಣಿಸಿಕೊಳ್ಳುತ್ತಾ ಹೊಸ ತಂಡಕ್ಕೆ ಸಾಥ್ ನೀಡುತ್ತಿರುತ್ತಾರೆ.

  English summary
  Actress Ramya Fly To Bangkok, Without Giving Hint Of Her Comeback, Know More,
  Monday, July 4, 2022, 23:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X