ಬರೀ ಶರ್ಟ್‌ನಲ್ಲಿ ಪೋಸ್ ಕೊಟ್ಟು DK ಎಂದ ಮೋಹಕ ತಾರೆ ರಮ್ಯಾ: "ಅಕ್ಕ ಪ್ಯಾಂಟ್ ಎಲ್ಲಿ" ಎಂದು ಟ್ರೋಲ್
ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದ ನಟಿ ರಮ್ಯಾ 'ಉತ್ತರಕಾಂಡ' ಚಿತ್ರಕ್ಕೆ ನಾಯಕಿಯಾಗಿಯೂ ಆಯ್ಕೆ ಆಗಿದ್ದರು. ಆದರೆ ಯಾಕೋ ಸಿನಿಮಾ ಶೂಟಿಂಗ್ ಶುರುವಾಗಲೇ ಇಲ್ಲ. ಈ ನಡುವೆ ರಮ್ಯಾ ದಿಢೀರನೇ ವಿದೇಶದ ಫ್ಲೈಟ್ ಏರಿದ್ದರು. ತೂಕ ಇಳಿಸುವ ಟ್ರೀಟ್‌ಮೆಂಟ್‌ಗಾಗಿ ಆಕೆ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು. ಅಲ್ಲಿಂದಲೇ ರಮ್ಯಾ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಗಮನ ಸೆಳೆಯುತ್ತಿದ್ದಾರೆ.
ಮಾಜಿ ಸಂಸದೆ, ನಟಿ ರಮ್ಯಾರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 'ಉತ್ತರಕಾಂಡ' ಸಿನಿಮಾ ಚಿತ್ರೀಕರಣಕ್ಕೂ ಮುನ್ನ ನೈಸರ್ಗಿಕ ಚಿಕಿತ್ಸೆಗಾಗಿ ರಮ್ಯಾ ಡೆನ್ಮಾರ್ಕ್ ದೇಶಕ್ಕೆ ಹೋಗಿದ್ದಾರೆ. ಅಲ್ಲಿನ ಸುಂದರ ತಾಣಗಳಲ್ಲಿ ಬೀಡುಬಿಟ್ಟಿದ್ದಾರೆ. ಸಿನಿಮಾಗಳಿಂದ ದೂರಾಗಿದ್ದ ರಮ್ಯಾ ಕೊಂಚ ದಪ್ಪಗಾಗಿದ್ದರು. ಹಾಗಾಗಿ ಮತ್ತೆ ಹಳೇ ಪಿಜಿಕ್‌ನಲ್ಲಿ ಮತ್ತೆ ಗ್ಲಾಮರಸ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲು ರಮ್ಯಾ ಮನಸ್ಸು ಮಾಡಿದಂತೆ ಕಾಣುತ್ತಿದೆ.

ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರಾಗಿದ್ದ ಚೆಲುವೆ ತಮ್ಮ ದೇಹಾಕೃತಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಬಣ್ಣ ಹಚ್ಚಲು ನಿರ್ಧರಿಸಿರುವುದರಿಂದ ಕೊಂಚ ತೂಕ ಇಳಿಸಿ ಮತ್ತೆ ಬಳಕುವ ಬಳ್ಳಿಯಂತಾಗಲೂ ಮುಂದಾಗಿದ್ದಾರೆ. ಜೊತೆಗೆ ಕೊಂಚ ರಿಲ್ಯಾಕ್ಸ್ ಆಗಲು ವಿದೇಶದಲ್ಲಿ ನೈಸರ್ಗಿಕ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬರೀ ಶರ್ಟ್‌ನಲ್ಲಿ ರಮ್ಯಾ ಪೋಸ್?
ನಟಿ ರಮ್ಯಾ ಇದ್ದಕ್ಕಿದಂತೆ DK ಎಂದು ಬರೆದು ಒಂದಷ್ಟು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾವು ಉಳಿದುಕೊಂಡಿರುವ ಕೋಪನ್ ಹ್ಯಾಗನ್ ನಗರದ ಒಂದಷ್ಟು ಫೋಟೊಗಳನ್ನು ತೇಲಿ ಬಿಟ್ಟಿದ್ದಾರೆ. ಅದರಲ್ಲಿ ಒಂದು ಫೋಟೊ ಎಲ್ಲರ ಗಮನ ಸೆಳೆದಿದೆ. ರಮ್ಯಾ ಪ್ಯಾಂಟ್ ಕಾಣದಂತೆ ಬರೀ ಶರ್ಟ್ ತೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವಂತೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ರಮ್ಯಾ ಚಿಕಿತ್ಸೆ ಪಡೆಯುತ್ತಿರುವ ಸ್ಪಾದ ಸಿಬ್ಬಂದಿ ಕೂಡ ಕಾಣಿಸಿಕೊಂಡಿದ್ದಾರೆ. ಸನ್‌ಗ್ಲಾಸ್ ತೊಟ್ಟು ಸ್ಟೈಲಿಶ್ ಲುಕ್‌ನಲ್ಲಿ ರಮ್ಯಾ ಮಿಂಚಿದ್ದಾರೆ.
ಸ್ಲಿಮ್ ರಮ್ಯಾ ನೋಡಿ ಫ್ಯಾನ್ಸ್ ಫಿದಾ
ಫೋಟೊದಲ್ಲಿ ಮೋಹಕ ತಾರೆ ಸಿಕ್ಕಾಪಟ್ಟೆ ಸ್ಲಿಮ್ ಆಗಿರುವಂತೆ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. "ಫೋಟೊ ಬೆಂಕಿ" ಎಂದು ಒಬ್ಬರು, ಬೆಂಗಳೂರಿನಲ್ಲಿ ಚಳಿ ಈಗ, ಈ ಫೋಟೊ ನೋಡಿದ ಮೇಲೆ ಫ್ಯಾನ್ಸ್ ಎದೆಯಲ್ಲಿ ಕಿಚ್ಚು ಹಚ್ಚಿದಂತಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ. ಇನ್ನು ರಮ್ಯಾ ಡೆನ್ಮಾರ್ಕ್‌ನಲ್ಲಿ ಇರುವುದರಿಂದ DK ಎಂದು ಶಾರ್ಟ್ ಆಗಿ ಕ್ಯಾಪ್ಷನ್ ಕೊಟ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

'ಉತ್ತರಕಾಂಡ'ದಿಂದ ರಮ್ಯಾ ಹೊರಬಂದ್ರಾ?
ಕೆಲ ದಿನಗಳ ಹಿಂದೆ 'ಉತ್ತರಕಾಂಡ' ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಟಿ ರಮ್ಯಾ ಕಾಣಿಸಿಕೊಂಡಿದ್ದರು. ನಂತರ ಆ ಸಿನಿಮಾ ಸುದ್ದಿನೇ ಇಲ್ಲ. ಇನ್ನು ರಮ್ಯಾ ಇದಕ್ಕು ಮುನ್ನ 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾ ನಿರ್ಮಿಸಿ ನಟಿಸುತ್ತಿರುವುದಾಗಿ ಘೋಷಿಸಿದ್ದರು. ಆದರೆ ನಂತರ ನಟಿಸೋಕೆ ಒಲ್ಲೆ ಎಂದಿದ್ದರು. ಬರೀ ನಿರ್ಮಾಪಕಿಯಾಗಿ ಮುಂದುವರೆದಿದ್ದರು. 'ಉತ್ತರಕಾಂಡ' ಶೂಟಿಂಗ್ ಶುರುವಾಗದೇ ಇರುವುದನ್ನು ನೋಡಿ ಚಿತ್ರತಂಡ ಕಥೆಯನ್ನು ಮತ್ತಷ್ಟು ತಿದ್ದಿ ತೀಡುತ್ತಿದೆ. ಅದಕ್ಕೆ ಶೂಟಿಂಗ್ ತಡವಾಗುತ್ತಿದೆ ಎನ್ನಲಾಗ್ತಿದೆ. ಇದರ ನಡುವೆ ರಮ್ಯಾ ಚಿತ್ರದಿಂದ ಹೊರಬಂದಿದ್ದಾರೆ ಎನ್ನುವ ಗುಸುಗುಸು ಕೂಡ ಶುರುವಾಗಿದೆ.
ಮತ್ತೆ ಪಾಲಿಟಿಕ್ಸ್‌ಗೆ ರಮ್ಯಾ?
ಚಿತ್ರರಂಗದಲ್ಲಿ ಸಿಕ್ಕ ಯಶಸ್ಸಿನ ಬಳಿಕ ನಟಿ ರಮ್ಯಾ ಮಂಡ್ಯ ಉಪ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆ ಆಗಿದ್ದರು. ಮತ್ತೊಂದು ಚುನಾವಣೆಯಲ್ಲಿ ಸೋತು ದೆಹಲಿ ಸೇರಿದ್ದರು. ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಆಗಿ ಕೆಲಸ ಮಾಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ಬಳಿಕ ರಮ್ಯಾ ದೆಹಲಿ ಬಿಟ್ಟು ವಾಪಸ್ ಬಂದಿದ್ದರು. ನಂತರ ಸಿನಿಮಾ, ರಾಜಕೀಯ ಎರಡರಿಂದರಲೂ ದೂರ ಉಳಿದಿದ್ದರು. ಆದರೆ ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಮತ್ತೆ ಭಾಗಿ ಆಗಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಆದರೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರಲ್ಲ ಎಂದಿದ್ದಾರೆ.


Click it and Unblock the Notifications











