ಕಂಗನಾ ರಣೌತ್‌ ಗೆ ನಾಲ್ಕು ಸಲಹೆ ನೀಡಿದ ನಟಿ ರಮ್ಯಾ

ಸಾಮಾಜಿಕ ಜಾಲತಾಣದಲ್ಲಿ ಸತತವಾಗಿ ಸಕ್ರಿಯರಾಗಿದ್ದ ನಟಿ ರಮ್ಯಾ ಕಳೆದ ಲೋಕಸಭೆ ಚುನಾವಣೆ ನಂತರ ಬಹುತೇಕ ಮೌನವಾಗಿಬಿಟ್ಟಿದ್ದರು. ಒಂದು ರೀತಿಯ ಅಜ್ಞಾತಕ್ಕೆ ತೆರಳಿಬಿಟ್ಟಿದ್ದರು. ಈಗ ರಮ್ಯಾ ವಾಪಸ್ ಬಂದಿದ್ದಾರೆ.

ಟ್ವಿಟ್ಟರ್‌ ಖಾತೆಯನ್ನು ಬಂದ್ ಮಾಡಿಬಿಟ್ಟಿದ್ದ ರಮ್ಯಾ ಕಳೆದ ತಿಂಗಳಿನಿಂದೀಚೆಗೆ ಆಗೊಮ್ಮೆ-ಈಗೊಮ್ಮೆ ಒಂದೊಂದು ಟ್ವೀಟ್ ಮಾಡುತ್ತಾ, ತಮ್ಮ 'ಇರುವಿಕೆ'ಯನ್ನು ಸಾಬೀತುಪಡಿಸುತ್ತಿದ್ದಾರೆ. ಇಂದು ಸಹ ನಟಿ ರಮ್ಯಾ ಸರಣಿ ಟ್ವೀಟ್ ಮಾಡಿದ್ದು, ನಟಿ ಕಂಗನಾ ರಣೌತ್‌ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

'ಡ್ರಗ್ಸ್‌ ತೆಗೆದುಕೊಳ್ಳುತ್ತಿರುವ ಸ್ಟಾರ್‌ಗಳ ಹೆಸರು ಬಹಿರಂಗಗೊಳಿಸುತ್ತೀನಿ' ಎಂದು ಅಬ್ಬರಿಸಿರುವ ಕಂಗನಾ, ಬಾಲಿವುಡ್‌ ಸ್ಟಾರ್‌ಗಳ ವಿರುದ್ಧ ಹಾಗೂ ಕಾಂಗ್ರೆಸ್‌ ವಿರುದ್ಧ ಸಮರ ಸಾರಿದ್ದಾರೆ. ಇಂತಿಪ್ಪ ಕಂಗನಾಗೆ ನಟಿ ರಮ್ಯಾ ಕೆಲವು ಅಮೂಲ್ಯ ಸಲಹೆಗಳನ್ನು ಟ್ವೀಟ್‌ ಮುಖಾಂತರ ನೀಡಿದ್ದಾರೆ.

ಪೊಲೀಸರಿಗೆ ಸಾಕ್ಷ್ಯಗಳನ್ನು ನೀಡಿ: ರಮ್ಯಾ

ಪೊಲೀಸರಿಗೆ ಸಾಕ್ಷ್ಯಗಳನ್ನು ನೀಡಿ: ರಮ್ಯಾ

'ಡ್ರಗ್ಸ್ ತೆಗೆದುಕೊಳ್ಳುವವರ ಹೆಸರು ಬಹಿರಂಗಗೊಳಿಸಬೇಕು ಎನಿಸಿದರೆ ಬಹಿರಂಗಗೊಳಿಸಿ, ಪೊಲೀಸರ ಬಳಿ ಹೋಗಿ ನಿಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಕೊಡಿ, ಎನ್‌ಸಿಬಿ ಅಧಿಕಾರಿಗಳಿಗೆ ಸಹಕರಿಸಿ. ಏನೇ ಮಾಡಿದರು ಒಳ್ಳೆ ಉದ್ದೇಶದಿಂದ ಮಾಡಿ, ಪ್ರತೀಕಾರದ ಉದ್ದೇಶದಿಂದ ಅಲ್ಲ. ಬದಲಾವಣೆ ನಿಮ್ಮಿಂದಲೇ ಶುರುವಾಗಲಿ' ಎಂದಿದ್ದಾರೆ ನಟಿ ರಮ್ಯಾ.

ನಿಮ್ಮ ಉದ್ದೇಶ ಒಳ್ಳೆಯದಿದ್ದಂತೆ ಕಾಣುತ್ತಿಲ್ಲ: ರಮ್ಯಾ

ನಿಮ್ಮ ಉದ್ದೇಶ ಒಳ್ಳೆಯದಿದ್ದಂತೆ ಕಾಣುತ್ತಿಲ್ಲ: ರಮ್ಯಾ

'ನಿಮ್ಮ ಮಾತುಗಳನ್ನು ಗಮನಿಸಿದರೆ ನಿಮ್ಮ ಉದ್ದೇಶ ಒಳ್ಳೆಯದಿದ್ದಂತೆ ಕಾಣುತ್ತಿಲ್ಲ. ಹೆಸರು ಬಹಿರಂಗಗೊಳಿಸುತ್ತೇನೆ ಎಂದು ಹೆದರಿಸುವ ಬದಲಿಗೆ ಆ ವ್ಯಸನಿಗಳಿಗೆ ಸಲಹೆ ನೀಡಿ, ವ್ಯಸನದಿಂದ ಹೊರಬರಲು ಸಹಕರಿಸಿ. ಡ್ರಗ್ಸ್ ನಿರ್ಮೂಲನಾ, ಡ್ರಗ್ಸ್ ವ್ಯಸನ ವಿಮುಕ್ತಿ ಸಂಸ್ಥೆ ಸ್ಥಾಪಿಸಿ. ನೀವು ಆಧ್ಯಾತ್ಮಿಕದಲ್ಲಿ ನಂಬಿಕೆ ಇಟ್ಟವರು, ವ್ಯಸನಿಗಳಿಗೆ ಜೀವನದ ಖುಷಿಯ ಪರಿಚಯ ಮಾಡಿಸಿ' ಎಂದು ಉತ್ತಮ ಸಲಹೆ ನೀಡಿದ್ದಾರೆ ನಟಿ ರಮ್ಯಾ.

ನಿಮ್ಮ ಸ್ವಂತ ಅನುಭವವನ್ನು ಹಂಚಿಕೊಳ್ಳಿ: ರಮ್ಯಾ

ನಿಮ್ಮ ಸ್ವಂತ ಅನುಭವವನ್ನು ಹಂಚಿಕೊಳ್ಳಿ: ರಮ್ಯಾ

ನಿಜವಾಗಿಯೂ ಡ್ರಗ್ಸ್ ನಿರ್ಮೂಲನೆ ಮಾಡಬೇಕು ಎಂದುಕೊಂಡಿದ್ದರು, ಡ್ರಗ್ ವಿರೋಧಿ ಹೋರಾಟಗಾರ್ತಿಯಾಗಿ. ನೀವೇ ನಿಮ್ಮ ವಿಡಿಯೋ ಒಂದರಲ್ಲಿ ಹೇಳಿದ್ದಿರಿ, 'ನಾನು ಡ್ರಗ್ಸ್ ವ್ಯಸನಿ ಆಗಿದ್ದೆ' ಎಂದು. ಹಾಗಿದ್ದಲ್ಲಿ ನೀವು ಅದರಿಂದ ಹೇಗೆ ಹೊರಬಂದಿರಿ ಎಂದು ಜನರಿಗೆ ಹೇಳಿ, ಅವರೂ ಸಹ ಡ್ರಗ್ಸ್ ವ್ಯಸನಿದಿಂದ ಹೇಗೆ ಮುಕ್ತರಾಗಬಹುದು ಎಂದು ತಿಳಿಸಿ ಎಂದು ರಮ್ಯಾ ಹೇಳಿದ್ದಾರೆ.

Recommended Video

ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
'ದೀಪಿಕಾ ಪಡುಕೋಣೆ-ಸಂಜಯ್ ದತ್‌ರಿಂದ ಕಲಿಯಬಹುದು'

'ದೀಪಿಕಾ ಪಡುಕೋಣೆ-ಸಂಜಯ್ ದತ್‌ರಿಂದ ಕಲಿಯಬಹುದು'

ನಿಮ್ಮ ಸಹೋದ್ಯೋಗಿಗಳಾದ ದೀಪಿಕಾ ಪಡುಕೋಣೆ ಹಾಗೂ ಸಂಜಯ್ ದತ್ ಈ ನಿಟ್ಟಿನಲ್ಲಿ ಕೆಲವು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ನೀವು ಸಹ ಅವರಿಂದ ಕಲಿಯಬಹುದು ಎಂದು ಕಂಗನಾಗೆ ಹೇಳಿದ್ದಾರೆ ನಟಿ ರಮ್ಯಾ.

More from Filmibeat

English summary
Actress Ramya gives important advice to Kangana Ranaut about drug issue. Ramya said give evidence to police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X