ರಮ್ಯಾ, ಕಾರ್ತಿ, ಗಣೇಶ್ 'ವಿಕ್ರಾಂತ್ ರೋಣ' ನೋಡ್ತಾರಂತೆ: ಸ್ಟಾರ್‌ಗಳ ದಂಡೇ ಇದೆ!

ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಭರ್ಜರಿಯಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದೆ. 'ವಿಕ್ರಾಂತ್ ರೋಣ'ನನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರು ಈಗ ಈ ಸಿನಿಮಾವನ್ನು ಕಣ್ತುಂಬಿ ಕೊಂಡಿದ್ದಾರೆ.

ಸದ್ಯ 'ವಿಕ್ರಾಂತ್ ರೋಣ' ಸಿನಿಮಾದೇ ಹವಾ. ಸಿನಿಮಾ ನೋಡಿದ ಮಂದಿ, ಮೆಚ್ಚಿ ಕೊಂಡಾಡುತ್ತಿದ್ದಾರೆ. ಮುಂಜಾನೆ ಶೋ ನೋಡಿ ಬಂದ ಪ್ರೇಕ್ಷಕರು 'ವಿಕ್ರಾಂತ್ ರೋಣ'ನಿಗೆ ಜೈಕಾರ ಹಾಕುತ್ತಿದ್ದಾರೆ. ಈ ಮೂಲಕ ನಟ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ.

ಇನ್ನು 'ವಿಕ್ರಾಂತ್ ರೋಣ' ಸಿನಿಮಾ ನೋಡಲು ಕಾತರರಾಗಿರುವವರಲ್ಲಿ ಪ್ರೇಕ್ಷಕರು, ಅಭಿಮಾನಿಗಳು ಮಾತ್ರ ಅಲ್ಲ. ಸಿನಿಮಾ ಮಂದಿ ಕೂಡ ಇದ್ದಾರೆ. ಪ್ಯಾನ್‌ ಇಂಡಿಯಾ ಹಲವು ಸ್ಟಾರ್‌ಗಳು ಈ ಚಿತ್ರವನ್ನು ನೋಡಲು ಕಾಯುತ್ತಿದ್ದಾರೆ. ಹಾಗಿದ್ದರೆ, ಯಾರೆಲ್ಲಾ 'ವಿಕ್ರಾಂತ್ ರೋಣ'ನನ್ನು ನೋಡಲು ರೆಡಿಯಾಗಿದ್ದಾರೆ ಎನ್ನುವುದನ್ನು ಮುಂದೆ ಓದಿ...

ಕಿಚ್ಚನನ್ನು ನೋಡಲು ರಮ್ಯಾ ಕಾತರ!

'ವಿಕ್ರಾಂತ್ ರೋಣ' ಸಿನಿಮಾವನ್ನು ನೋಡಲು ಸಿನಿಮಾ ಸ್ಟಾರ್‌ಗಳು ಕಾತರರಾಗಿದ್ದಾರೆ. ಅದರಲ್ಲಿ ನಟಿ ಜೆನೆಲಿಯಾ ಕೂಡ ಒಬ್ಬರು. ಟ್ವೀಟ್ ಮಾಡುವ ಮೂಲಕ 'ವಿಕ್ರಾಂತ್ ರೋಣ' ಮತ್ತು ಸುದೀಪ್‌ಗೆ ಶುಭಕೋರಿದ್ದಾರೆ. "ನಿಮಗೂ ಮತ್ತು ನಿಮ್ಮ ಇಡೀ ತಂಡಕ್ಕೂ ಶುಭ ಕೋರುತ್ತೇನೆ. ನನಗೆ ಗೊತ್ತಿದೆ ನೀವು ಎಲ್ಲಾ ಸಿಹಿ ಮತ್ತು ಪ್ರೀತಿಯ ಪ್ರತಿಯೊಂದು ಕ್ಷಣವನ್ನು ಹಾಕಿ ಈ ಸಿನಿಮಾ ಮಾಡಿರುತ್ತೀರಿ. ಪಾರ್ಟಿ ಮಾಡಲು ನಾನು ಕಾಯುತ್ತಿದ್ದೇನೆ. ಎಲ್ಲರೂ 'ವಿಕ್ರಾಂತ್ ರೋಣ' ನೋಡಿ." ಎಂದು ಬರೆದುಕೊಂಡಿದ್ದಾರೆ ಜೆನೆಲಿಯಾ.

ಇನ್ನು 'ವಿಕ್ರಾಂತ್ ರೋಣ' ಸಿನಿಮಾ ನೋಡಲು ನಟಿ ರಮ್ಯಾ ಕಾತರರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, "ಮತ್ಯಾರೆಲ್ಲಾ 'ವಿಕ್ರಾಂತ್ ರೋಣ' ಸಿನಿಮಾ ನೋಡಲು ಕಾತರರಾಗಿದ್ದೀರಿ. ಹಲವು ದಿನಗಳ ನಂತರ ಕಿಚ್ಚ ಸುದೀಪ್‌ ತೆರೆಯ ಮೇಲೆ ನೋಡಲು ನಾನು ಕಾಯುತ್ತಿದ್ದೇನೆ". ಎಂದು ಬರೆದುಕೊಂಡಿದ್ದಾರೆ.

'ವಿಕ್ರಾಂತ್ ರೋಣ' ನೋಡ್ತಾರೆ ಕಾರ್ತಿ!

ತಮಿಳು ನಟ ಕಾರ್ತಿ ಕೂಡಾ 'ವಿಕ್ರಾಂತ್ ರೋಣ' ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಿನಿಮಾವನ್ನು ನೋಡುವ ಬಗ್ಗೆ ಬರೆದುಕೊಂಡಿದ್ದಾರೆ, "ಸ್ಟನ್ನಿಂಗ್ ಟ್ರೈಲರ್ ನೋಡಿದ ಬಳಿಕ 'ವಿಕ್ರಾಂತ್ ರೋಣ' ಸಿನಿಮಾವನ್ನು ನೋಡಲು ಕಾಯುತ್ತಿದ್ದೇನೆ. ಇಡೀ ತಂಡಕ್ಕೆ ಶುಭಾಶಯಗಳು" ಎಂದು ಕಾರ್ತಿ ಬರೆದುಕೊಂಡಿದ್ದಾರೆ.

ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡಾ 'ವಿಕ್ರಾಂತ್ ರೋಣ' ಸಿನಿಮಾವನ್ನು ನೋಡುವ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಕಿಚ್ಚ ಸುದೀಪ್ ಅಸಲಿ ಆಟವನ್ನು ಸ್ಕ್ರೀನ್ ಮೇಲೆ ನೋಡಲು ಕಾಯುತ್ತಿದ್ದೇನೆ. ಇಡೀ ತಂಡಕ್ಕೆ ಶುಭಾಶಯಗಳು." ಎಂದು ಬರೆದು ಶುಭಾಶಯ ತಿಳಿಸಿದ್ದಾರೆ

'ವಿಕ್ರಾಂತ್ ರೋಣ'ನಿಗೆ ಪ್ರಶಾಂತ್ ನೀಲ್ ವಿಶ್!

ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಕೂಡ 'ವಿಕ್ರಾಂತ್ ರೋಣ' ಚಿತ್ರಕ್ಕೆ ಶುಭಾಶಯವನ್ನು ಕೋರಿದ್ದಾರೆ. "ಕಿಚ್ಚ ಸುದೀಪ್ ಸರ್‌ಗೆ ದೊಡ್ಡ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ ಮತ್ತು ಅನೂಪ್ ಭಂಡಾರಿಗೂ ಶುಭವಾಗಲಿ 'ವಿಕ್ರಾಂತ್ ರೋಣ' ನಂತಹ ಉತ್ತಮ ಕಥೆಯನ್ನು ಕೊಟ್ಟಿರುವುದಕ್ಕೆ. ಇನ್ನೂ ಹೆಚ್ಚಿನದನ್ನು ಸಾಧಿಸುವುದು ಇದೆ ಎಲ್ಲರಿಗೂ ಒಳ್ಳೆಯದಾಗಲಿ." ಎಂದು ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ತರುಣ್ ಸುಧೀರ್, "ಕಿಚ್ಚ ಸುದೀಪ್‌ ಸರ್ ಗೆ ಶುಭವಾಗಲಿ ನಿರ್ದೇಶಕ ಅನೂಪ್ ಭಂಡಾರಿ ಅಜನೀಶ್ ಲೋಕನಾಥ್, ಜಾಕ್ ಮಂಜು ಸೇರಿದಂತೆ ಇಡೀ 'ವಿಕ್ರಾಂತ್ ರೋಣ' ತಂಡಕ್ಕೆ ಯಶಸ್ಸು ಸಿಗಲಿ ಕನ್ನಡ ಚಿತ್ರರಂಗದ ಯಶಸ್ಸಿನ ಹಾದಿಯನ್ನು ಮುಂದುವರಿಸಿಕೊಂಡು ಹೋಗಲಿ." ಎಂದು ಬರೆದು ಟ್ವೀಟ್ ಮಾಡಿದ್ದಾರೆ ತರುಣ್ ಸುಧೀರ್.

ಧನಂಜಯ್ 'ವಿಕ್ರಾಂತ್ ರೋಣ' ಟಿಕೆಟ್ ಬುಕ್!

ನಟ ಡಾಲಿ ಧನಂಜಯ್ ಈಗಾಗಲೇ 'ವಿಕ್ರಾಂತ್ ರೋಣ' ಚಿತ್ರದ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರಂತೆ. ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. "ವಿಕ್ರಂತ್ ರೋಣ ಸಿನಿಮಾವನ್ನು ನೋಡುತ್ತಿದ್ದೇನೆ. ಈಗಾಗಲೇ ಟಿಕೆಟು ಬುಕ್ ಆಗಿದೆ ಯಶಸ್ಸು ಸಿಗಲಿ, ಬಾಕ್ಸಾಫೀಸ್ ಕೊಳ್ಳೆ ಹೊಡಿಯಿರಿ" ಎಂದು ಧನಂಜಯ್ ಬರೆದುಕೊಂಡಿದ್ದಾರೆ.

ಇನ್ನು ಈ ಚಿತ್ರವನ್ನು ನೋಡಲು ಕಾತರರಾಗಿರುವ ನಟ ಗಣೇಶ್ ಕೂಡ ಟ್ವೀಟ್ ಮಾಡಿ ಸಿನಿಮಾ ನೋಡುವುದಾಗಿ ತಿಳಿಸಿದ್ದಾರೆ, "ವಿಕ್ರಾಂತ್ ರೋಣ ಸಿನಿಮಾವನ್ನು ನೋಡಲು ನಾನು ಕಾಯುತ್ತಿದ್ದೇನೆ. ಇದೊಂದು ಅತ್ಯುತ್ತಮವಾದ ಟೀಮ್ ವರ್ಕ್, ಕಿಚ್ಚ ಸುದೀಪ್ ಸರ್‌ಗೆ ಶುಭವಾಗಲಿ" ಎಂದು ಬರೆದುಕೊಂಡಿದ್ದಾರೆ.

'ಲವ್ 360' ಟೀಂ 'ವಿಕ್ರಾಂತ್ ರೋಣ' ವೀಕ್ಷಣೆ!

'ವಿಕ್ರಾಂತ್ ರೋಣ' ಸಿನಿಮಾವನ್ನು ನೋಡಲು 'ಲವ್ 360' ಸಿನಿಮಾ ತಂಡ ಸಜ್ಜಾಗಿದೆ. ಇಂದು ಚಿತ್ರದ ಟೀಸರ್ ರಿಲೀಸ್ ಮಾಡಬೇಕಿತ್ತು ಆದರೆ ಸಿನಿಮಾ ನೋಡುವ ಸಲುವಾಗಿ ಟೀಸರ್ ಮುಂದೂಡಿದೆ. ಚಿತ್ರವನ್ನು ನೋಡುವ ನಟಿ ರಚನಾ ಬಯಕೆಯನ್ನು ಚಿತ್ರತಂಡ ಪೂರೈಸಲು ಮುಂದಾಗಿದೆ. ಈ ಬಗ್ಗೆ ಪುಟ್ಟ ವಿಡಿಯೋವನ್ನು ಕೂಡ ಹರಿಬಿಟ್ಟಿದ್ದಾರೆ.

ಇನ್ನು ನಿರ್ದೇಶಕ ಸಿಂಪಲ್ ಸುನಿ ಕೂಡ ಸಿನಿಮಾದ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ. "ಟಿಕೆಟ್ ಬುಕ್ ಆಗಿರುವ ಫೋಟೊಗಳನ್ನು ಹಂಚಿಕೊಂಡು, ಒಟ್ಟು 40 ಟಿಕೆಟ್‌ಗಳು ಬುಕ್ ಆಗಿವೆ. ಇಡೀ ಸಿನಿಮಾ ತಂಡಕ್ಕೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.

More from Filmibeat

English summary
Actress Ramya, Karthi, Ganesh, Dhananjay, Sunil Shetty, Exited To Watch Vikrant Rona, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X