»   » 'ಅಂಜನಿಪುತ್ರ' ಸೆಟ್ ನಲ್ಲಿ ಕಾಣಿಸಿಕೊಂಡ ಶಿವಗಾಮಿ ರಮ್ಯ ಕೃಷ್ಣ

'ಅಂಜನಿಪುತ್ರ' ಸೆಟ್ ನಲ್ಲಿ ಕಾಣಿಸಿಕೊಂಡ ಶಿವಗಾಮಿ ರಮ್ಯ ಕೃಷ್ಣ

Posted By: Naveen
Subscribe to Filmibeat Kannada

ನಟಿ ರಮ್ಯಕೃಷ್ಣ ಅಭಿನಯಿಸಿದ 'ಬಾಹುಬಲಿ 2' ಸಿನಿಮಾ ದಾಖಲೆ ಮೇಲೆ ದಾಖಲೆ ಮಾಡಿ ಮುನ್ನುಗುತ್ತಿದೆ. ಈ ಸಿನಿಮಾದ ಶಿವಗಾಮಿ ಪಾತ್ರದಲ್ಲಿ ರಮ್ಯಕೃಷ್ಣ ಮಿಂಚಿದ್ದರು. ಈ ಚಿತ್ರದ ನಂತರ ರಮ್ಯ ಕೃಷ್ಣ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ನಿರೀಕ್ಷೆ ಎಲ್ಲರಿಗೂ ಇತ್ತು. ಅದೇ ರೀತಿ ಈಗ ರಮ್ಯ ಕೃಷ್ಣ ಕನ್ನಡದ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಸಿನಿಮಾದಲ್ಲಿ ನಟಿ ರಮ್ಯ ಕೃಷ್ಣ ನಟಿಸಲಿದ್ದಾರೆ ಎನ್ನುವ ಸುದ್ದಿ ಇತ್ತು. ಸದ್ಯ ಈ ಸಿನಿಮಾದ ಶೂಟಿಂಗ್ ನಲ್ಲಿ ಅವರು ಭಾಗಿಯಾಗಿದ್ದು ಕೆಲ ಮೇಕಿಂಗ್ ಫೋಟೋಗಳು ರಿಲೀಸ್ ಆಗಿದೆ. 

Actress 'Ramya Krishna' in Anjaniputra Movie Set

ರಮ್ಯ ಕೃಷ್ಣ ಈ ಸಿನಿಮಾದಲ್ಲಿ ಪುನೀತ್ ಅವರ ತಾಯಿಯ ಪಾತ್ರ ಮಾಡಬಹುದು ಅಂತ ಹೇಳಲಾಗುತ್ತಿದ್ದರೂ ಇನ್ನು ಚಿತ್ರತಂಡ ಅದನ್ನ ಸ್ಪಷ್ಟಪಡಿಸಿಲ್ಲ. ಈ ಹಿಂದೆ 'ಮಾಣಿಕ್ಯ' ಚಿತ್ರದಲ್ಲಿ ಸುದೀಪ್ ಗೆ ತಾಯಿಯಾಗಿದ್ದ ರಮ್ಯ ಕೃಷ್ಣ ಇಲ್ಲಿ ಅಪ್ಪುಗೆ ತಾಯಿ ಪಾತ್ರ ಮಾಡುತ್ತಾರಾ.? ಗೊತ್ತಿಲ್ಲ.

Actress 'Ramya Krishna' in Anjaniputra Movie Set

'ಅಂಜನಿಪುತ್ರ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಎ.ಹರ್ಷ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

English summary
Actress 'Ramya Krishna' in Puneeth Rajkumar's 'Anjaniputra' movie set.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada