ಬೆಂಗಳೂರಿಗೆ ಬಂದಿಳಿದ ನಟಿ ರಮ್ಯಾ: ಕೋವಿಡ್ ಟೆಸ್ಟ್‌ ವೇಳೆ ವಿಮಾನ ನಿಲ್ದಾಣದಲ್ಲಿ ನಡೆದಿದ್ದೇನು?

ನಟಿ ಮೋಹಕತಾರೆ ರಮ್ಯಾ ಬಗ್ಗೆ ಇತ್ತೀಚೆಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅಂತೆಯೇ ರಮ್ಯಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಪ್ರತೀ ವಿಚಾರವನ್ನು ರಮ್ಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ರಮ್ಯಾ ಅವರು ಹೊಸ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ರಮ್ಯಾ ಈ ಬಾರಿ ಕೊರೊನಾ ಸಂಬಂಧ ಮಾತನಾಡಿದ್ದಾರೆ. ವ್ಯವಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಟಿ ರಮ್ಯಾ ಸದ್ಯ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ರಮ್ಯಾ ಬೆಂಗಳೂರಿಗೆ ಬಂದಾಗ ಏರ್‌ರ್ಪೋರ್ಟ್‌ ನಲ್ಲಿ ನಡೆದಿದ್ದು ಏನು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಮ್ಯಾಗೆ ಕೋವಿಡ್ ಟೆಸ್ಟ್!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಮ್ಯಾಗೆ ಕೋವಿಡ್ ಟೆಸ್ಟ್!

ಬೆಂಗಳೂರು ವಿಮಾನ ನಿಲ್ದಾಣ ಎಂದಾಕ್ಷಣ ಸದ್ಯ ಎಲ್ಲರಿಗೂ ಒಂದು ರೀತಿ ಆತಂಕ ಕಾಡುತ್ತೆ. ಯಾಕೆಂದರೆ ಕೊರೊನಾ ರೂಪಾಂತರ ವೈರಾಣು ಎಲ್ಲೆಡೆ ಹಬ್ಬಿತ್ತಿದೆ. ಹಾಗಾಗಿ ಹೊರ ದೇಶಗಳಿಂದ ವಿಮಾನದಲ್ಲಿ ಬರುವವರಿಗೆ ಕೋವಿಡ್ ಟೆಸ್ಟ್‌ ಕಡ್ಡಾಯವಾಗಿದೆ. ಇನ್ನು ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಟೆಸ್ಟ್‌ ಮಾಡುವ ವ್ಯವಸ್ಥೆ ಸರಿ ಇಲ್ಲವೆಂದು ಹಲವರು ಹೇಳಿಕೊಂಡಿದ್ದರು.

ನಟಿ ರಮ್ಯಾ ಕೂಡ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿ ರಮ್ಯಾ ನಿನ್ನೆ (ಡಿಸೆಂಬರ್ 3) ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ರಮ್ಯಾ ಅವರಿಗೆ ಕೋವಿಡ್ ಟೆಸ್ಟ್‌ ಮಾಡಲಾಗಿದೆ. ಈ ಕುರಿತು ರಮ್ಯಾ ಪೋಸ್ಟ್ ಶೇರ್‌ ಮಾಡಿಕೊಂಡಿದ್ದಾರೆ.

ರಮ್ಯಾ ಪೋಸ್ಟ್‌ನಲ್ಲಿ ಇರುವುದೇನು?

ರಮ್ಯಾ ಪೋಸ್ಟ್‌ನಲ್ಲಿ ಇರುವುದೇನು?

ಬೆಂಗಳೂರಿಗೆ ಬಂದಿರುವಂತಹ ರಮ್ಯಾ ಏರ್ಪೋರ್ಟ್‌ನಲ್ಲಿ ನಡೆದ ಕೋವಿಡ್‌ ಟೆಸ್ಟ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಏರ್‌ರ್ಪೋರ್ಟ್‌ನಲ್ಲಿ ನಡೆದ ಕೋವಿಡ್‌ ಟೆಸ್ಟ್ ಸುಲಭವಾಗಿತ್ತು. ಯಾವುದೇ ಗೊಂದಲ ಇರಲಿಲ್ಲ. ವೈದ್ಯರು, ನರ್ಸ್‌ಗಳು, ಅಧಿಕಾರಿಗಳು ಮತ್ತು ಅಲ್ಲಿನ ಉದ್ಯೋಗಿಗಳು ಕೋವಿಡ್‌ ಟೆಸ್ಟ್‌ಗಾಗಿ ಉತ್ತಮ ವ್ಯವಸ್ಥೆ ರೂಢಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಕೆಲಸವೂ ಪ್ರಶಂಸೆಗೆ ಕಾರಣ ಆಗಿದೆ. ಧನ್ಯವಾದಗಳು" ಎಂದು ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರಿಗೆ ಬಂದು ಕುತೂಹಲ ಹುಟ್ಟಿಸಿದ ರಮ್ಯಾ!

ಬೆಂಗಳೂರಿಗೆ ಬಂದು ಕುತೂಹಲ ಹುಟ್ಟಿಸಿದ ರಮ್ಯಾ!

ಸಿನಿಮಾ ಮತ್ತು ರಾಜಕೀಯದಿಂದ ದೂರಾದ ಬಳಿಕ ರಮ್ಯಾ ಬೆಂಗಳೂರು ವಾಸದಿಂದಲೂ ದೂರ ಇದ್ದರು. ಹೊರ ದೇಶಗಳಲ್ಲಿ ರಮ್ಯಾ ಬೀಡು ಬಿಟ್ಟಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿದ್ದು ರಮ್ಯಾ ಜನರ ಜೊತೆಗೆ ಕನೆಕ್ಟ್‌ ಆಗಿರುತ್ತಿದ್ದರು. ತಮ್ಮ ಹುಟ್ಟು ಹಬ್ಬದ ಸಮಯದಲ್ಲಿ ರಮ್ಯಾ ವಿದೇಶದಲ್ಲಿ ಇದ್ದರು. ಸ್ನೇಹಿತರೊಂದಿಗೆ ಪ್ರವಾಸ ಕೈಗೊಂಡ ರಮ್ಯಾ ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಇದೀಗ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲದೇ ತಾವೇ ಈ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

ಕನ್ನಡ ಚಿತ್ರಗಳ ಕಥೆ ಕೇಳಲು ಸಜ್ಜಾದರಾ ರಮ್ಯಾ?

ಕನ್ನಡ ಚಿತ್ರಗಳ ಕಥೆ ಕೇಳಲು ಸಜ್ಜಾದರಾ ರಮ್ಯಾ?

ಹಲವು ದಿನಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ರಮ್ಯಾ ಈಗ ಮತ್ತೇ ಬಣ್ಣ ಹಚ್ಚುವ ಯೋಚನೆಯಲ್ಲಿ ಇದ್ದಾರೆ. ಅದರಲ್ಲೂ ಅಪ್ಪು ಅಂತಿಮ ದರ್ಶನಕ್ಕೆ ರಮ್ಯಾ ಬಂದು ಹೋದ ಬಳಿಕ ಆಕೆಯ ರೀ ಎಂಟ್ರಿ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಇದೀಗ ರಮ್ಯಾ ಬೆಂಗಳೂರಿಗೆ ಬಂದಿರುವುದು ತನ್ನ ಸಿನಿಮಾ ಚಟುವಟಿಕೆಗಳಲ್ಲಿ ಭಾಗಿ ಆಗಲು ಇರಬಹುದು ಎನ್ನುವ ಸುಳಿವು ಸಿಕ್ಕಿದೆ.

ಇಷ್ಟು ದಿನ ರಮ್ಯಾ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲಗಳಿದ್ದವು. ಸದ್ಯ ರಮ್ಯ ಬೆಂಗಳೂರಿಗೆ ಬಂದಿದ್ದಾರೆ. ನಟಿ ರಮ್ಯಾ ಅವರು ಮತ್ತೆ ಸಿನಿಮಾ ಮಾಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅಪ್ಪು ಜೊತೆಗೆ ಕಮ್‌ಬ್ಯಾಕ್‌ ಮಾಡಬೇಕು ಎನ್ನುವುದು ಅವರ ಬಯಕೆ ಆಗಿತ್ತು. ಈಗ ರಮ್ಯಾ ಮುಂದಿನ ನಿಲುವು ಏನಾಗಿರಲಿದೆ. ಯಾವ ಸಿನಿಮಾದಲ್ಲಿ ರಮ್ಯಾ ಯಾರ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಮತ್ತಷ್ಟು ಕುತೂಹಲಗಳು ಹೆಚ್ಚಾಗಿವೆ. ಅದಕ್ಕೆಲ್ಲಾ ಮೋಹಕ ತಾರೆಯೇ ಉತ್ತರಿಸಬೇಕು.

More from Filmibeat

English summary
Actress Ramya Land In Bangalore International Airport, She Reveals What Happened Their, Know more About It.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X