For Quick Alerts
  ALLOW NOTIFICATIONS  
  For Daily Alerts

  Ramya : ನಾಯಕಿಯಾಗಿ ಚಿತ್ರರಂಗಕ್ಕೆ ರಮ್ಯಾ ವಾಪಸ್: ಯಾವ ಸಿನಿಮಾ? ಹೀರೋ ಯಾರು? ಇಲ್ಲಿದೆ ಡಿಟೈಲ್ಸ್!

  |

  ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇತ್ತೀಚೆಗೆ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ವಾಪಸ್ ಬರುವ ಸುದ್ದಿ ಕೊಟ್ಟಿದ್ದ ರಮ್ಯಾ ಈಗ ನಾಯಕಿಯಾಗಿಯೂ ಬಣ್ಣ ಹಚ್ಚಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಾಜ್‌ ಬಿ. ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ. ಚಿತ್ರಕ್ಕೆ ಬಂಡವಾಳವನ್ನು ಹೂಡುತ್ತಿದ್ದಾರೆ.

  'ನಾಗರಹಾವು' ನಂತರ ರಮ್ಯಾ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸ್ಥಾನದಿಂದ ಹೊರಬಂದ ಮೇಲೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುವ ಸುಳಿವು ಸಿಕ್ಕಿತ್ತು. ಅಭಿಮಾನಿಗಳು ಕೂಡ ನೆಚ್ಚಿನ ನಟಿಯನ್ನು ಮತ್ತೆ ತೆರೆಮೇಲೆ ನೋಡಲು ಕಾಯುತ್ತಿದ್ದರು. ರಮ್ಯಾ ಯಾವ ಚಿತ್ರದಲ್ಲಿ ಮತ್ತೆ ನಟಿಸ್ತಾರೆ? ಹೀರೊ ಯಾರು? ಎನ್ನುವ ಚರ್ಚೆ ನಡೀತಿತ್ತು. ವಿಜಯ ದಶಮಿ ಸಂಭ್ರಮದಲ್ಲೇ ಪದ್ಮಾವತಿ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

  ಕೆಂಪಾದವೋ ಎಲ್ಲಾ ಕೆಂಪಾದವೋ.. ಬ್ಲಾಕ್‌ಬಸ್ಟರ್ 'ಕಾಂತಾರ' ಪರ ರಮ್ಯಾ ಭರ್ಜರಿ ಪ್ರಚಾರ!ಕೆಂಪಾದವೋ ಎಲ್ಲಾ ಕೆಂಪಾದವೋ.. ಬ್ಲಾಕ್‌ಬಸ್ಟರ್ 'ಕಾಂತಾರ' ಪರ ರಮ್ಯಾ ಭರ್ಜರಿ ಪ್ರಚಾರ!

  ಕೆಲ ದಿನಗಳ ಹಿಂದೆ ರಾಜ್‌ .ಬಿ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ರಮ್ಯಾ ನಟಿಸ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಆದರೆ ಇದು ಸುಳ್ಳು ಎಂದು ಸ್ವತಃ ರಾಜ್‌ ಬಿ. ಶೆಟ್ಟಿ ಹೇಳಿದ್ದರು. ಆದರೆ ಅದೇ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರ್ತಿದೆ. 'ಗರುಡಗಮನ ವೃಷಭವಾಹನ' ಸಿನಿಮಾ ಮಾಡಿ ಸೂಪರ್ ಸಕ್ಸಸ್ ಕಂಡಿರೋ ರಾಜ್‌. ಬಿ ಶೆಟ್ಟಿ ಜೊತೆ ರಮ್ಯಾ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಒಂದ್ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಕಮಾಲ್ ಮಾಡಿದ್ದ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು.

  'ಬಣ್ಣದ ಗೆಜ್ಜೆ' ಚಿತ್ರದ ಸೂಪರ್ ಹಿಟ್ ಗೀತೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಮೊದಲ ಸಾಲನ್ನೇ ಟೈಟಲ್‌ ಆಗಿಟ್ಟು ಸಿನಿಮಾ ಮಾಡ್ತಿದ್ದಾರೆ. ಮತ್ತೆ ಸಿನಿಮಾದಲ್ಲಿ ಕೆಲಸ ಮಾಡಲು ಬಹಳ ಉತ್ಸುಕರಾಗಿರುವುದಾಗಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನು ರಾಜ್‌ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ಹಾಗೂ ರಮ್ಯಾ ಒಡೆತನಡ ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್‌ ಜಂಟಿಯಾಗಿ ಬ್ಯಾನರ್‌ನಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಾಣವಾಗ್ತಿದೆ.

  Actress Ramya Makes A Comeback In Acting After 6 Years

  ಟೈಟಲ್‌ನಿಂದಲೇ ಗಮನ ಸೆಳೆಯುತ್ತಿರುವ ಚಿತ್ರಕ್ಕೆ ಮಿಥುನ್ ಮುಕುಂದನ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. 6 ವರ್ಷಗಳ ನಂತರ ರಮ್ಯಾ ನಟನೆಯ ಸಿನಿಮಾ ಸೆಟ್ಟೇರುತ್ತಿರುವುದು ಕುತೂಹಲ ಮೂಡಿಸಿದೆ. ಕೆಲ ದಿನಗಳ ಹಿಂದೆ ರಮ್ಯಾ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದರು. ರಮ್ಯಾ ಪ್ರೊಡಕ್ಷನ್ ಹೌಶ್ ಶುರು ಮಾಡಿದ್ದು, ನೋಡಿ ಇನ್ನು ಮುಂದೆ ನಿರ್ಮಾಪಕಿಯಾಗಿ ಮಾತ್ರ ಚಿತ್ರರಂಗದಲ್ಲಿ ಇರ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಚ್ಚರಿ ಎನ್ನುವಂತೆ ಮತ್ತೆ ಸಿನಿಮಾದಲ್ಲಿ ನಟಿಸುವ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

  English summary
  Actress Ramya Makes A Comeback In Acting After 6 Years. After a long break now the Actress is back in front of the camera and that too Raj B Shetty Directional Movie.
  Thursday, October 6, 2022, 9:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X