ಮದುವೆ, ಬ್ರೇಕ್ ಅಪ್, ಬಾಯ್ ಫ್ರೆಂಡ್ ಬಗ್ಗೆ ರಮ್ಯಾ ತಾಯಿ ಬಿಚ್ಚಿಟ್ಟ ಸತ್ಯ!

Recommended Video

ಮದುವೆ, ಬ್ರೇಕ್ ಅಪ್, ಬಾಯ್ ಫ್ರೆಂಡ್ ಬಗ್ಗೆ ರಮ್ಯಾ ತಾಯಿ ಬಿಚ್ಚಿಟ್ಟ ಸತ್ಯ! | FILMIBEAT KANNADA

''ನಟಿ ರಮ್ಯಾ ಮದುವೆ ಆಗುತ್ತಿದ್ದಾರಂತೆ...'' ಎನ್ನುವ ಸುದ್ದಿ ಕೆಲವು ದಿನಗಳಿಂದ ಜೋರಾಗಿ ಕೇಳಿ ಬರುತ್ತಿದೆ. ಹಾಗಾದ್ರೆ, ಈ ಸುದ್ದಿ ಸತ್ಯನಾ..? ಈ ಬಗ್ಗೆ ಸ್ವತಃ ರಮ್ಯಾ ತಾಯಿ ರಂಜಿತಾ ಮಾತನಾಡಿದ್ದಾರೆ.

ನಟಿ ರಮ್ಯಾ ಸಿನಿಮಾ ಮಾಡುವುದನ್ನು ನಿಲ್ಲಿಸಿ ವರ್ಷಗಳೇ ಆಗಿದೆ. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರುವ ಅವರು ಅದರಿಂದಲೂ ಹೊರ ಬಂದಿದ್ದಾರೆ. ಅದಲ್ಲದೆ, ರಮ್ಯಾ ಯಾರ ಜೊತೆಗೆ ಸಂಪರ್ಕದಲ್ಲಿ ಇಲ್ಲ. ಅವರು ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ ಎಲ್ಲವೂ ನಿಗೂಢವಾಗಿದೆ.

ಸಿನಿಮಾ, ರಾಜಕೀಯ ಎರಡರಿಂದ ದೂರ ಸರಿದು ರಮ್ಯಾ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಬಂದಿದೆ. ಹಳೆ ಬಾಯ್ ಫ್ರೆಂಡ್ ರಾಫೆಲ್ ಜೊತೆಗೆ ರಮ್ಯಾ ಮದುವೆ ನಿಗದಿ ಆಗಿದೆ. ದುಬೈನಲ್ಲಿ ಈ ಜೋಡಿ ವಿವಾಹ ನಡೆಯುತ್ತಿದೆ ಎನ್ನುವ ಮಾತು ಇದೆ.

ಇಂತಹ ಊಹಾಪೋಹಗಳ ಬಗ್ಗೆ ನಟಿ ರಮ್ಯಾ ತಾಯಿ ರಂಜಿತ ಮಾತನಾಡಿದ್ದಾರೆ. ಟಿವಿ9 ಕನ್ನಡ ವಾಹಿನಿಗೆ ನೀಡಿರುವ ವಿಶೇಷ ಚಿಟ್ ಚಾಟ್ ನಲ್ಲಿ ಮಗಳ ಇದ್ದ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ರಮ್ಯಾ ಮದುವೆ ಸುದ್ದಿ ಸುಳ್ಳು

ರಮ್ಯಾ ಮದುವೆ ಸುದ್ದಿ ಸುಳ್ಳು

ರಮ್ಯಾ ಮದುವೆ ವಿಷಯದ ಬಗ್ಗೆ ತಾಯಿ ರಂಜಿತ ಸ್ಪಷ್ಟನೆ ನೀಡಿದ್ದಾರೆ. ''ರಮ್ಯಾ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಆಕೆ ಮದುವೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮದುವೆ ಮಾಡುವಾಗ ಎಲ್ಲರಿಗೂ ಹೇಳಿಯೇ ಮಾಡುತ್ತೇವೆ. ನಾವೇನು ಕದ್ದು ಮುಚ್ಚಿ ಮದುವೆ ಮಾಡುವುದಿಲ್ಲ. ಈಗ ಸುಮ್ಮನೆ ಸುಳ್ಳು ಸುದ್ದಿ ಹರಿದಾಡುತ್ತಿದೆ ಅಷ್ಟೇ.'' ಎಂದು ಹೇಳಿದ್ದಾರೆ.

ರಾಫೆಲ್ ಜೊತೆಗೆ ಬ್ರೇಕ್ ಅಪ್ ಆಗಿದೆ

ರಾಫೆಲ್ ಜೊತೆಗೆ ಬ್ರೇಕ್ ಅಪ್ ಆಗಿದೆ

ರಮ್ಯಾ ತಮ್ಮ ಮಾಜಿ ಪ್ರಿಯಕರ ರಾಫೆಲ್ ಜೊತೆಗೆಯೇ ಮದುವೆ ಆಗುತ್ತಾರೆ ಎನ್ನುವ ಸುದ್ದಿಯನ್ನು ತಾಯಿ ರಂಜಿತಾ ತಳ್ಳಿ ಹಾಕಿದ್ದಾರೆ. ''ರಮ್ಯಾ ಹಾಗೂ ರಾಫೆಲ್ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಆದರೆ, ಈಗಲೂ ಇಬ್ಬರ ನಡುವೆ ಸ್ನೇಹ ಇದೆ. ರಾಫೆಲ್ ಕುಟುಂಬ ಹಾಗೂ ನಾವು ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದೇವೆ. ಈಗಲೂ, ಫೋನ್ ಮಾಡುತ್ತಾ ಇರುತ್ತಾರೆ.'' ಎಂದು ರಂಜಿತಾ ಮಾತನಾಡಿದ್ದಾರೆ.

ಹಾಗಾದರೆ, ಬ್ರೇಕ್ ಅಪ್ ಗೆ ಕಾರಣ ಏನು?

ಹಾಗಾದರೆ, ಬ್ರೇಕ್ ಅಪ್ ಗೆ ಕಾರಣ ಏನು?

ರಮ್ಯಾ ಹಾಗೂ ರಾಫೆಲ್ ನಡುವೆ ಬ್ರೇಕ್ ಅಪ್ ಆಗಿದೆ ಎಂದು ಹೇಳಿರುವ ರಂಜಿತಾ ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ರಮ್ಯಾ ಮತ್ತು ರಾಫೆಲ್ ಬೇರೆ ಬೇರೆ ಆಗಲು ಮುಖ್ಯ ಕಾರಣ ಕೆಲಸದ ಒತ್ತಡವಂತೆ. ರಮ್ಯಾ ರಾಜಕೀಯದಲ್ಲಿ ಬ್ಯುಸಿ ಇದ್ದರೆ, ರಾಫೆಲ್ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಒಬ್ಬರಿಗೊಬ್ಬರು ಸಮಯ ನೀಡಲು ಆಗುತ್ತಿಲ್ಲ. ಅಲ್ಲದೆ, ರಮ್ಯಾಗೆ ವಿದೇಶಕ್ಕೆ ಹೋಗಲು ಇಷ್ಟವಿಲ್ಲ, ರಾಫೆಲ್ ಭಾರತದಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರಂತೆ.

ರಾಜಕೀಯದವರೂ ಬೇಡ, ಸಿನಿಮಾದವರೂ ಬೇಡ

ರಾಜಕೀಯದವರೂ ಬೇಡ, ಸಿನಿಮಾದವರೂ ಬೇಡ

ರಮ್ಯಾ ಮದುವೆ ಆಗುವ ಹುಡುಗ ರಾಜಕೀಯದವರೇ ಆಗಿರಬೇಕು, ಸಿನಿಮಾದವರೇ ಆಗಿರಬೇಕು ಎನ್ನುವುದೆನೂ ಇಲ್ಲವಂತೆ. ಒಬ್ಬ ಒಳ್ಳೆಯ ಹುಡುಗನಿಗೆ ಮನಸ್ಸು ನೀಡುವ ಆಸೆ ರಮ್ಯಾಗೆ ಇದೆಯಂತೆ. ತಮ್ಮನ್ನು ಪ್ರೀತಿಯಿಂದ ನೋಡಿಕೊಂಡು, ಕಾಳಜಿ ಮಾಡುವ ಹುಡುಗನ ಜೊತೆಗೆ ಜೀವನ ಕಳೆಯುವ ಕನಸು ರಮ್ಯಾದಾಗಿದೆ.

ಅಮ್ಮನ ಜೊತೆಯೂ ಮಾತನಾಡುತ್ತಿಲ್ಲ

ಅಮ್ಮನ ಜೊತೆಯೂ ಮಾತನಾಡುತ್ತಿಲ್ಲ

ರಮ್ಯಾ ಸದ್ಯ ದೆಹಲಿಯಲ್ಲಿ ಇದ್ದು, ಸ್ನೇಹಿತರ ಹಾಗೂ ಮಾಧ್ಯಮದವರು ಸೇರಿದಂತೆ ಯಾರ ಜೊತೆಗೆ ಸಂಪರ್ಕದಲ್ಲಿ ಇಲ್ಲವಂತೆ. ಮದುವೆಯಾಗು ಎಂದು ಒತ್ತಾಯ ಮಾಡಿದ್ದಕ್ಕೆ ತಾಯಿ ಜೊತೆಗೂ ಮಾತು ಬಿಟ್ಟಿದ್ದಾರಂತೆ. ವರ್ಷಗಳ ಹಿಂದೆಯಿಂದ ಮದುವೆ ಬಗ್ಗೆ ಮಾತನಾಡಿದಾಗಲೆಲ್ಲ, ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಕಾಂಗ್ರೆಸ್ ಪಕ್ಷದ ಸೂಚನೆಯ ಮೇರೆಗೆ ಸೋಷಿಯಲ್ ಮೀಡಿಯಾದಿಂದ ಹೊರ ಬಂದಿದ್ದು, ಪಕ್ಷ ಬಿಟ್ಟಿಲ್ಲವಂತೆ.

More from Filmibeat

English summary
Kannada actress Ramya mother Ranjitha gave clarification about her daughter marrige gossip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X