Don't Miss!
- News
ಹುಬ್ಬಳ್ಳಿ: ಆನ್ಲೈನ್ ಗೇಮ್ಸ್ನಲ್ಲಿ 11 ಕೋಟಿ ರೂ ಗೆದ್ದವನನ್ನೂ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
40ನೇ ವಯಸ್ಸಿಗೆ ಕಾಲಿಡುತ್ತಿರುವ ನಟಿ ರಮ್ಯಾ 18ನೇ ವಯಸ್ಸಿನಲ್ಲಿ ಹೇಗಿದ್ರು ನೋಡಿ!
ಮೋಹಕ ತಾರೆ ನಟಿ ರಮ್ಯಾ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚಿತ್ರರಂಗಕ್ಕೆ ಸಂಬಂಧ ಪಟ್ಟ ಚಟುವಟಿಕೆಗಳಲ್ಲಿ ಭಾಗಿ ಆಗುತ್ತಿದ್ದಾರೆ. ರಮ್ಯಾ ಸಿನಿಮಾರಂಗದಲ್ಲಿ ಸಕ್ರಿಯ ಆಗುತ್ತಿದ್ದ ಹಾಗೆ ರಮ್ಯಾ ಯಾವ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ ಅಭಿಮಾನಿಗಳಲ್ಲಿ.
ರಮ್ಯಾ ಬಗ್ಗೆ ಈಗಲೂ ಕೂಡ ದೊಡ್ಡ ಮಟ್ಟದ ಕ್ರೇಜ್ ಇದೆ. ನಟಿ ರಮ್ಯಾ ಯಾವುದೇ ಪೋಸ್ಟ್ ಹಾಕಿದರೂ ಕೂಡ ಅವರಿಗೆ ಮೊದಲು ಎದುರಾಗುವ ಪ್ರಶ್ನೆ ಮುಂದಿನ ಸಿನಿಮಾ ಯಾವಾಗ ಎನ್ನುವುದು. ಈಗಲೂ ಕೂಡ ರಮ್ಯಾ ಅವರನ್ನು ತೆರೆಯ ಮೇಲೆ ನೋಡಲು ಸಾಕಷ್ಟು ಜನ ಕಾತರರಾಗಿದ್ದಾರೆ. ಹಾಗಾಗಿಯೇ ರಮ್ಯಾ ದೊಡ್ಡ ಗ್ಯಾಪ್ ತೆಗೆದುಕೊಂಡಿದ್ದರೂ ಕೂಡ ಸಿನಿಮಾರಂಗದಲ್ಲಿ ಆಕೆಗೆ ಬೇಡಿಕೆ ಕಡಿಮೆಯಾಗಿಲ್ಲ.
ಮೋದಿಗೆ
ಕನ್ನಡ
ಸಿನಿಮಾ
ಟ್ರೈಲರ್
ನೋಡಿ
ಎಂದ
ರಮ್ಯಾ
ನಟಿ ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಆಗಾಗ ಕೇಳಿಬರುತ್ತಿದೆ. ರಮ್ಯಾ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ. ಆದರೆ ತಮ್ಮ ಮುಂದಿನ ಸಿನಿಮಾದ ಬಗ್ಗೆ ರಮ್ಯಾ ಇನ್ನು ಯಾವುದೇ ಅಪ್ಡೇಟ್ ಕೊಟ್ಟಿಲ್ಲ. ಆದರೆ ತಮ್ಮ ಹಳೆಯ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅದು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರಮ್ಯಾ ಹಳೇ ಫೋಟೋ!
ನಟಿ ಮೋಹಕ ತಾರೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವುದು ಗೊತ್ತೇ ಇದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿ ಇದ್ದಾರೆ. ಹಾಗಾಗೇ ನಟಿ ರಮ್ಯಾ ಏನನ್ನೇ ಹೇಳಬೇಕಾದರೂ ಯಾವುದೇ ವಿಚಾರವನ್ನು ಹಂಚಿಕೊಳ್ಳಬೇಕಾದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈ ಮೂಲಕ ರಮ್ಯಾ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಸದ್ಯ ತಮ್ಮ ಹಳೆಯ ಫೊಟೋವನ್ನು ಹಂಚಿಕೊಂಡು ಹೊಸದಾಗಿ ಸುದ್ದಿಯಾಗಿದ್ದಾರೆ.

ರಮ್ಯಾ 18ನೇ ವಯಸ್ಸಿನ ಫೊಟೋ!
ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ತಮ್ಮ ಹಳೆಯ ಫೊಟೋವನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. ರಮ್ಯಾ ಸಿನಿಮಾರಂಗಕ್ಕೆ ಬರುವ ಮುನ್ನ ಹೇಗಿದ್ದರು ಎನ್ನುವ ಫೊಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಡಾಕ್ಯುಮೆಂಟ್ ಒಂದರ ಮೇಲೆ ಹಾಕಿರುವ ಪಾಸ್ಪೋರ್ಟ್ ಸೈಸ್ ಫೋಟೋವನ್ನು ರಮ್ಯಾ ಹಂಚಿಕೊಂಡಿದ್ದಾರೆ. ಇದು ರಮ್ಯಾ 18ನೇ ವಯಸ್ಸಿನ ಇದ್ದಾಗ ತೆಗೆಸಿಕೊಂಡಿರುವ ಫೋಟೊ.

ರಮ್ಯಾಗೆ ಈಗ ವಯಸ್ಸು ಎಷ್ಟು?
ನಟಿ ರಮ್ಯಾ ಹಳೇ ಫೋಟೊ ಹಂಚಿಕೊಂಡ ಬೆನ್ನಲ್ಲೇ ರಮ್ಯಾ ವಯಸ್ಸು ಎಷ್ಟು ಎನ್ನುವ ಬಗ್ಗೆ ಚರ್ಚೆ ಆಗ್ತಿದೆ. ನಟಿ ರಮ್ಯಾಗೆ 2000ರಲ್ಲಿ 18 ವರ್ಷ ವಯಸ್ಸು. ಅಂದರೆ ಈಗ 39 ವರ್ಷ. 2022ರಲ್ಲಿ ಅವರ ನವೆಂಬರ್ನಲ್ಲಿ ಹುಟ್ಟುಹಬ್ಬ ಬಂದರೆ 40 ವರ್ಷ ತುಂಬುತ್ತದೆ. ಈ ವರ್ಷ ನಟಿ ರಮ್ಯಾ 40ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೂ ಕೂಡ ರಮ್ಯಾ ಸಿಕ್ಕಾಪಟ್ಟೆ ಗ್ಲಾಮರ್. ಅಂತೆಯೇ ಸಿನಿಮಾಗಳಲ್ಲಿ ಆಕೆಗೆ ಈಗಲೂ ಅದೇ ಬೇಡಿಕೆ ಇದೆ.

ರಮ್ಯಾ ಕಮ್ ಬ್ಯಾಕ್ ಶೀಘ್ರದಲ್ಲೇ!
'ಅಭಿ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪರಿಚಿತರಾದ ರಮ್ಯಾ, ಸಾಕಷ್ಟು ಹಿಟ್ ಸಿನಿಮಾಗಳ ಮೂಲಕ ಕಮಾಲ್ ಮಾಡಿದ್ದರು. ಕಡೆಯದಾಗಿ 'ನಾಗರಹಾವು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರಾಜಕೀಯದಲ್ಲಿ ಬ್ಯುಸಿಯಾದರು. ಇನ್ನು ಕೆಲದಿನ ಸಿನಿಮಾ ಮತ್ತು ರಾಜಕೀಯ ಎರಡು ರಂಗದಿಂದಲೂ ಅಂತರ ಕಾಯ್ದುಕೊಂಡು ಸೈಲೆಂಟ್ ಆಗಿದ್ದರು. ಈಗ ಮತ್ತೆ ರಮ್ಯಾ ಚೈತ್ರ ಕಾಲ ಶುರುವಾಗಿದೆ. ಮತ್ತೆ ರಮ್ಯಾ ಬ್ಯಾಕ್ ಮಾಡುವ ಬಗ್ಗೆಯೂ ಸೂಚನೆ ಕೊಟ್ಟಿದ್ದಾರೆ.