»   » ಬೆಳ್ಳಿಪರದೆಗೆ ಮಂಡ್ಯ ಸಂಸದೆ ರಮ್ಯಾ ಅಧಿಕೃತ ಗುಡ್ ಬೈ

ಬೆಳ್ಳಿಪರದೆಗೆ ಮಂಡ್ಯ ಸಂಸದೆ ರಮ್ಯಾ ಅಧಿಕೃತ ಗುಡ್ ಬೈ

By: ಉದಯರವಿ
Subscribe to Filmibeat Kannada

ಗೋಲ್ಡನ್ ಗರ್ಲ್ ರಮ್ಯಾ ಅವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಇದು. ಏಕೆಂದರೆ ಅವರು ಚಿತ್ರರಂಗಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಇನ್ನು ಮುಂದೆ ತಾವು ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ಹೇಳುವ ಮೂಲಕ ಅಭಿಮಾನಿ ಲೋಕದಲ್ಲಿ ತೀವ್ರ ಸಂಚನ ಮೂಡಿಸಿದ್ದಾರೆ.

ಮೈಸೂರು ಲ್ಯಾಂಪ್ಸ್ ನಲ್ಲಿ ಸದ್ಯಕ್ಕೆ ಆರ್ಯನ್ ಚಿತ್ರದ ಹಾಡಿನ ಶೂಟಿಂಗ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ರಮ್ಯಾ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬಳಿಕ ಅವರು ಖಾಸಗಿ ನ್ಯೂಸ್ ಚಾನಲ್ ಜೊತೆ ಮಾತನಾಡುತ್ತಾ, ಇನ್ನು ಸಾಕು ಎನ್ನಿಸಿದೆ. ಇದೇ ಕೊನೆಯ ಚಿತ್ರ ಎಂದು ಸ್ಪಷ್ಟಪಡಿಸಿದರು. [ನೀರ್ ದೋಸೆ ಹಾಕೋಕೆ ರಮ್ಯಾ ಬರೋದು ಡೌಟು]


'ದಿಲ್ ಕಾ ರಾಜ' ಚಿತ್ರದಲ್ಲಿ ಇನ್ನೂ ನಾಲ್ಕು ದಿನಗಳ ಕೆಲಸ ಬಾಕಿ ಇದೆ. ಎಲೆಕ್ಷನ್ ಮುಗಿದ ಮೇಲೆ ಅದರಲ್ಲಿ ಭಾಗಿಯಾಗುತ್ತೇನೆ. ಇನ್ನು ಸಾಕು ಅನ್ನಿಸಿದೆ. ಈಗ ಬೇರೆಯದ್ದೇ ಜವಾಬ್ದಾರಿ ಇದೆ. ಇನ್ನೇನಿದ್ದರೂ ತಮ್ಮ ಜಿವನ ಜನಸೇವೆಗೆ ಮುಡಿಪು ಎಂದಿದ್ದಾರೆ.

ಹಾಗಂತ ರಮ್ಯಾ ಇನ್ನು ಬಣ್ಣ ಹಚ್ಚುವುದೇ ಇಲ್ಲವೆ? ಪೂರ್ಣಪ್ರಮಾಣದ ನಾಯಕಿಯಾಗಿ ಅಲ್ಲದಿದ್ದರೂ ಇನ್ನು ಮುಂದೆ ಅತಿಥಿ ಪಾತ್ರಗಳು ಹಾಗೂ ಸಣ್ಣಪುಟ್ಟ ಪಾತ್ರಗಳಲ್ಲಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ರಮ್ಯಾ ಅಭಿಮಾನಿಗಳು ನಿರಾಸೆಪಡಬೇಕಾಗಿಲ್ಲ.

'ಅಭಿ' (2003) ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ರಮ್ಯಾ ಕಳೆದ ಹನ್ನೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಚಿತ್ರರಸಿಕರ ಹೃದಯ ಗೆದ್ದಿದ್ದಾರೆ. ಇನ್ನೇನಿದ್ದರೂ ಅವರ ಜೀವನ ಮಂಡ್ಯ ಜನರ ಸೇವೆಗೆ ಮೀಸಲು.

English summary
Golden Girl, Mandya member of Parliament Ramya has a shocking news for her fans. The actress officially announced bid goodbye to films in 'Aaryan' song shooting. Speaking to a news channel Ramya has said that her career in films will be ending with Dil Ka Raja. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada