»   » ದೊಡ್ಮನೆ ಹುಡುಗನಿಗೆ ಕೈ ಕೊಟ್ಟ ಲಕ್ಕಿ ಸ್ಟಾರ್

ದೊಡ್ಮನೆ ಹುಡುಗನಿಗೆ ಕೈ ಕೊಟ್ಟ ಲಕ್ಕಿ ಸ್ಟಾರ್

Posted By:
Subscribe to Filmibeat Kannada

ಅಭಿ, ಆಕಾಶ್ ಹಾಗೂ ಅರಸು ಯಶಸ್ವಿ ಚಿತ್ರಗಳಲ್ಲಿನ ಪುನೀತ್ ಹಾಗೂ ರಮ್ಯಾ ಜೋಡಿ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮೂಡಲು ಕಾಲ ಇನ್ನೂ ಕೂಡಿ ಬಂದಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದುನಿಯಾ ಸೂರಿ ನಿರ್ದೇಶನದ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಲಕ್ಕಿಸ್ಟಾರ್ ಮತ್ತೊಮ್ಮೆ ಪವರ್ ಸ್ಟಾರ್ ಜತೆ ನಟಿಸಬೇಕಿತ್ತು. ಆದರೆ, ನಾನಾ ಕಾರಣಗಳಿಂದ ರಮ್ಯಾ ಅವರು ಚಿತ್ರದಿಂದ ಹೊರನಡೆದಿದ್ದಾರೆ.

ಕನ್ನಡ ಚಿತರಂಗ ಯಶಸ್ವಿ ಜೋಡಿಯನ್ನು ದೊಡ್ಡಮನೆ ಹುಡುಗ ಚಿತ್ರದಲ್ಲಿ ಮತ್ತೊಮ್ಮೆ ನೋಡಲು ಕಾತುರರಿಂದ ಕಾದಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಆದರೆ, ಕೆಲವು ಅಭಿಮಾನಿಗಳು ಟ್ವೀಟ್ ಮಾಡಿ ನಿಮ್ಮ ನಿರ್ಧಾರ ಸರಿಯಾಗಿದೆ. ಆರ್ಯನ್ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

Post by Ramya.

ರಮ್ಯಾ ಅವರು ಪುನೀತ್ ಚಿತ್ರದಿಂದ ಹೊರನಡೆದಿದ್ದೇಕೆ? ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಗಾಂಧಿನಗರದ ಗಾಸಿಪ್ ವರದಿಗಾರರ ಪ್ರಕಾರ ರಮ್ಯಾ ಅವರು ಚಿತ್ರದ ಸಂಭಾವನೆ ವಿಷಯದಲ್ಲಿ ರಾಜಿಯಾಗದ ಕಾರಣ ಚಿತ್ರಕ್ಕೆ ಗುಡ್ ಬೈ ಹೇಳಿದ್ದಾರಂತೆ

ರಮ್ಯಾ ಅವರು ಚಿತ್ರದಿಂದ ಹೊರನಡೆದಿದ್ದಾರೆ

ರಮ್ಯಾ ಅವರು ಪುನೀತ್ ಚಿತ್ರದಿಂದ ಹೊರನಡೆದಿದ್ದೇಕೆ? ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಗಾಂಧಿನಗರದ ಗಾಸಿಪ್ ವರದಿಗಾರರ ಪ್ರಕಾರ ರಮ್ಯಾ ಅವರು ಚಿತ್ರದ ಸಂಭಾವನೆ ವಿಷಯದಲ್ಲಿ ರಾಜಿಯಾಗದ ಕಾರಣ ಚಿತ್ರಕ್ಕೆ ಗುಡ್ ಬೈ ಹೇಳಿದ್ದಾರಂತೆ

ರಮ್ಯಾ ಅವರು ಈ ಚಿತ್ರಕ್ಕೆ 75 ಲಕ್ಷ ರು ಕೇಳಿದ್ದರು ಎಂಬ ಮಾತಿದೆ. ಇದಕ್ಕೆ ನಿರ್ಮಾಪಕರು ಒಪ್ಪದ ಕಾರಣ ರಮ್ಯಾ ಅವರು ಚಿತ್ರವನ್ನು ತೊರೆದಿದ್ದಾರೆ ಎಂಬ ಮಾಹಿತಿಯೂ ಇದೆ.

ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ

ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ದೊಡ್ಮನೆ ಹುಡ್ಗ ಚಿತ್ರ. ಎಂ ಗೋವಿಂದು ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.ಈ ಹಿಂದೆ 'ವಿಷ್ಣುಸೇನೆ' ಹಾಗೂ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಗಳನ್ನು ನಿರ್ಮಿಸಿದ್ದರು ಜಾಕಿ ಹಾಗೂ ಅಣ್ಣಾಬಾಂಡ್ ಚಿತ್ರಗಳ ಬಳಿಕ ಸೂರಿ, ಪುನೀತ್ ಕಾಂಬಿನೇಷನಲ್ಲಿ ಬರುತ್ತಿರುವ ಮೂರನೇ ಚಿತ್ರ ದೊಡ್ಮನೆ ಹುಡ್ಗ.

ಲಕ್ಕಿಸ್ಟಾರ್ ಅವರ ಮನವೊಲಿಸಿದ್ದರು

ದೊಡ್ಡಮನೆ ಹುಡುಗನಿಗೆ ಹುಡುಗಿ ಸಿಗುವುದೇ ಕಷ್ಟ ಎನ್ನಲಾಗಿತ್ತು. ಅಂಗೈಯಲ್ಲೇ ಬೆಣ್ಣೆ ಇಟ್ಟುಕೊಂಡು ಊರೆಲ್ಲಾ ಹುಡುಕಿದರೂ ಎಂಬಂತೆ ಹುಡುಗಿ ಹುಡುಕಾಟ ನಡೆಸಿದ ಚಿತ್ರತಂಡ ಕೊನೆಗೂ ಲಕ್ಕಿಸ್ಟಾರ್ ಅವರ ಮನವೊಲಿಸಿದ್ದರು. ಅಪ್ಪು ಜತೆ ನಟಿಸಲು ಯಾವತ್ತಿಗೂ ರೆಡಿ ಎನ್ನುವ ರಮ್ಯಾ ಅವರು ಕೂಡಾ ಈ ಚಿತ್ರಕ್ಕೆ ಸಹಿ ಹಾಕಲು ಸಮ್ಮತಿಸಿದ್ದಾರೆ ಎಂದು ನಿರ್ದೇಶಕ ದುನಿಯಾ ಸೂರಿ ಸ್ಪಷ್ಟಪಡಿಸಿದ್ದರು.

ದೊಡ್ಮನೆ ಹುಡ್ಗ ಬಗ್ಗೆ ರಮ್ಯಾ ಟ್ವೀಟ್

ದೊಡ್ಮನೆ ಹುಡ್ಗ ಬಗ್ಗೆ ರಮ್ಯಾ ಟ್ವೀಟ್ ಮಾಡಿ ವಿಷಯ ಸ್ಪಷ್ಟಪಡಿಸಿದ್ದಾರೆ.

ನನಗೆ ಸಾಕಷ್ಟು ಜವಾಬ್ದಾರಿಯಿದೆ

ನನಗೆ ಸಾಕಷ್ಟು ಜವಾಬ್ದಾರಿಯಿದೆ. ಆ.1 ರಂದು ಆರ್ಯನ್ ಬಿಡುಗಡೆಯಾಗಲಿದೆ. ಸ್ಪಂದನ ಬ್ರ್ಯಾಂಡ್ ಈಗಷ್ಟೇ ಬಿಡುಗಡೆಯಾಗಿದೆ. ಆರ್ ಟಿ ನಾರಾಯಣ್ ಟ್ರಸ್ಟ್ ಮೂಲಕ ಶೌಚಾಲಯ ನಿರ್ಮಾಣ ಹೀಗೆ ಸಾಕಷ್ಟು ಜವಾಬ್ದಾರಿಯುತ ಕೆಲಸಗಳಿವೆ ಎಂದು ರಮ್ಯಾ ಟ್ವೀಟ್

ಹೊಸ ಚಿತ್ರ ಒಪ್ಪಿಕೊಳ್ಳುವುದಿಲ್ಲ : ರಮ್ಯಾ

ತಮ್ಮ ಸಾಕು ತಂದೆ ಆರ್ ಟಿ ನಾರಾಯಣ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಆರ್ ಟಿ ನಾರಾಯಣ್ ಫೌಂಡೇಶನ್ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಗೌರವಯುತವಾಗಿ ಬಾಳ್ವೆ ಮಾಡಲು ಬೇಕಾದ ಸಕಲ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಈ ಕನಸುಗಳು ಈಡೇರುವ ತನಕ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ.[ಗುರಿಗಳನ್ನು ಬೆನ್ನು ಹತ್ತಿದ ದಿವ್ಯ ಸ್ಪಂದನ]

English summary
Actress Ramya will not be part of Duniya Suri's new film Dodmane Hudga. For the last few weeks there were conflicting reports about Ramya being part of the film. Ramya took social networking sites Facebook and Twitter and announced about her decision
Please Wait while comments are loading...