For Quick Alerts
  ALLOW NOTIFICATIONS  
  For Daily Alerts

  ಸಿಹಿ ಸುದ್ದಿ ಕೊಡಲು ಸಜ್ಜಾದ ನಟಿ ರಮ್ಯಾ: ಸಮಾಚಾರ ಏನ್ ಗೊತ್ತಾ?

  |

  ನಟಿ ಮೋಹಕ ತಾರೆ ರಮ್ಯಾ ಇತ್ತೀಚೆಗೆ ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಇಷ್ಟು ದಿನ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ರಮ್ಯಾ ಇದೀಗ ಸಿನಿಮಾ ವಿಚಾರಕ್ಕೆ ಸಂಬಂಧಪಟ್ಟ ವಿಷಯಗಳ ಮೂಲಕ ಸುದ್ದಿ ಆಗುತ್ತಿದ್ದಾರೆ.

  ಒಂದಷ್ಟು ಸಿನಿಮಾ ವಿಚಾರಗಳಿಗೆ ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡುತ್ತಾ ಇರುತ್ತಾರೆ. ಅಷ್ಟೇ ಅಲ್ಲ ಜೊತೆಗೆ ಒಂದಷ್ಟು ಕನ್ನಡ ಸಿನಿಮಾಗಳ ಪೋಸ್ಟರ್, ಹಾಡುಗಳನ್ನು ಹಂಚಿಕೊಳ್ಳುವ ಮೂಲಕ ರಮ್ಯಾ ಆ ಚಿತ್ರಗಳಿಗೆ ಸಾಥ್ ನೀಡುತ್ತಿರುತ್ತಾರೆ.

  ನಟಿ ಶೃತಿ ಹರಿಹರನ್ ಖಾತೆ ಹ್ಯಾಕ್: ಈ ಎಡವಟ್ಟು ಮಾಡಬೇಡಿ ಅಂತಿದ್ದಾರೆ!ನಟಿ ಶೃತಿ ಹರಿಹರನ್ ಖಾತೆ ಹ್ಯಾಕ್: ಈ ಎಡವಟ್ಟು ಮಾಡಬೇಡಿ ಅಂತಿದ್ದಾರೆ!

  ಇನ್ನೂ ಇತ್ತೀಚೆಗೆ ರಮ್ಯಾ 'ಹೊಯ್ಸಳ' ಚಿತ್ರದ ಶೂಟಿಂಗ್ ಸೆಟ್‌ಗೆ ಭೇಟಿ ಕೊಟ್ಟು ಸುದ್ದಿಯಾಗಿದ್ದರು. ಇದರ ನಡುವೆ ಹೆಚ್ಚು ಸದ್ದು ಮಾಡಿದ ಸುದ್ದಿ ಅಂದರೆ ರಮ್ಯಾ ಕಮ್ ಬ್ಯಾಕ್ ಯಾವಾಗ ಎನ್ನುವುದು. ಈಗ ನಟಿ ರಮ್ಯಾ ಸಿಹಿ ಸುದ್ದಿ ಕೊಡುವುದಾಗಿ ಹೇಳಿ ಸುದ್ದಿಯಾಗಿದ್ದಾರೆ.

  ಸಿಹಿ ಸುದ್ದಿ ನೀಡಲಿರುವ ರಮ್ಯಾ

  ಸಿಹಿ ಸುದ್ದಿ ನೀಡಲಿರುವ ರಮ್ಯಾ

  ಮೋಹಕ ತಾರೆ ನಟಿ ರಮ್ಯಾ ಸಿನಿಮಾರಂಗದಲ್ಲಿ ಇತ್ತೀಚೆಗೆ ಸಕ್ರಿಯವಾದ ಬಳಿಕ, ರಮ್ಯಾ ಕಮ್‌ಬ್ಯಾಕ್ ಯಾವಾಗ, ನಟಿ ರಮ್ಯಾ ಅವರನ್ನು ತೆರೆಯ ಮೇಲೆ ನೋಡೋದು ಯಾವಾಗ ಎಂದು ಅಭಿಮಾನಿ ಬಳಗ ಕಾಯುತ್ತಿತ್ತು. ಅದ್ದಕ್ಕೀಗ ಕಾಲ ಕೂಡಿ ಬಂದಂತಿದೆ. ನಟಿ ರಮ್ಯಾ ಹಂಚಿಕೊಂಡಿರುವ ಹೊಸದೊಂದು ಪೋಸ್ಟರ್ ಈಗ ಕುತೂಹಲಕ್ಕೆ ಕಾರಣವಾಗಿದೆ. ಪೋಸ್ಟರ್‌ನಲ್ಲಿ ನಟಿ ರಮ್ಯಾ ಸಿಹಿ ಸುದ್ದಿ ಕೊಡ್ತೀನಿ ಎಂದು ಬರೆದುಕೊಂಡಿರುವುದೇ ಕುತೂಹಲಕ್ಕೆ ಕಾರಣವಾಗಿದೆ.

  ವಿಶೇಷ ಪೋಸ್ಟ್ ಹಂಚಿಕೊಂಡ ರಮ್ಯಾ!

  ವಿಶೇಷ ಪೋಸ್ಟ್ ಹಂಚಿಕೊಂಡ ರಮ್ಯಾ!

  ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗದ್ದು, ಹಲವಾರು ವಿಚಾರಗಳನ್ನು ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಈಗ ರಮ್ಯಾ ಹಂಚಿಕೊಂಡಿರುವ ಪೋಸ್ಟ್ ಅತ್ಯಂತ ವಿಶೇಷವಾಗಿದೆ. " ಇಷ್ಟು ದಿನ ನಾನು ಸಮಯ ತೆಗೆದುಕೊಂಡಿದ್ದು ಸಾಕು ಅನಿಸುತ್ತೆ ಅಲ್ಲವಾ? ನಾನು ನಿಮ್ಮೊಂದಿಗೆ ನಾಳೆ ಬೆಳಗ್ಗೆ 11:15ಕ್ಕೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ನಾನು ಕಾತರಳಾಗಿದ್ದೇನೆ. ಇದು ಅಧಿಕೃತ." ಎಂದು ಬರೆದುಕೊಂಡಿದ್ದಾರೆ.

  ನಟಿ ರಮ್ಯಾ ಕಮ್‌ ಬ್ಯಾಕ್?

  ನಟಿ ರಮ್ಯಾ ಕಮ್‌ ಬ್ಯಾಕ್?

  ನಟಿ ರಮ್ಯಾ ಈ ಪೋಸ್ಟ್ ಹಂಚಿಕೊಂಡಿರುವುದು, ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿಯನ್ನು ಕೊಡಲು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇತ್ತೀಚೆಗೆ ರಮ್ಯಾ, ರಾಜ್ ಬಿ ಶೆಟ್ಟಿ ಮತ್ತು ನಟಿ ಅಮೃತಾ ಅಯ್ಯಂಗಾರ್ ಜೊತೆಗೆ ಇರುವ ಫೋಟೊ ಒಂದನ್ನು ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಈ ಹಿಂದೆ ರಾಜ್ ಬಿ ಶೆಟ್ಟಿ ಜೊತೆಗೆ ಕಾಣಿಸಿಕೊಂಡಿದ್ದರು. ಹಾಗಾಗಿ ಇವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬಹುದು ಎನ್ನುವ ಚರ್ಚೆವೂ ಸೃಷ್ಟಿಯಾಗಿತ್ತು.

  ಅಭಿಮಾನಿಗಳು ಫುಲ್ ಖುಷ್!

  ಅಭಿಮಾನಿಗಳು ಫುಲ್ ಖುಷ್!

  ನಟಿ ರಮ್ಯಾ ತಮ್ಮ ಪೋಸ್ಟ್‌ನಲ್ಲಿ ಸಿಹಿ ಸುದ್ದಿ ಕೊಡ್ತೀನಿ ಎಂದು ಹೇಳಿಕೊಂಡಿರುವು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ರಮ್ಯಾ ಈ ಪೋಸ್ಟ್ ಹಾಕಿದ ಬಳಿಕ ರಮ್ಯಾಗೆ ಶುಭಾಶಯದ ಮಹಾಪೋರವೇ ಹರಿದು ಬರ್ತಿದೆ. ರಮ್ಯಾಗೆ ಅದಾಗಲೇ ವೆಲ್ಕಂ ಬ್ಯಾಕ್ ಟು ಸ್ಯಾಂಡಲ್‌ವುಡ್ ಎಂದು ಶುಭಾಶಯ ಕೋರುತ್ತಿದ್ದಾರೆ. ಜೊತೆಗೆ ರಮ್ಯಾ ಬರುವ ತನಕ ಮಾತ್ರ ಬೇರೆಯವರ ಹವಾ, ರಮ್ಯಾ ಬಂದಮೇಲೆ ಅವ್ರದ್ದೇ ಹವಾ ಎಂದು ಕಮೆಂಟ್ ಮಾಡುತ್ತಿದ್ದಾರೆ.

  English summary
  Actress Ramya Ready To Comeback She Shared a Special Post About Good News, Know More
  Tuesday, August 30, 2022, 13:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X