ನಿನ್ನ ಕಂಡ ಕ್ಷಣದಿಂದ ನಾನು ನನ್ನಲಿಲ್ಲ: ಅಪ್ಪು ಬಗ್ಗೆ ನಟಿ ರಮ್ಯಾ ವಿಶೇಷ ವಿಡಿಯೋ!
ಕನ್ನಡದಲ್ಲಿ ನಟ ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ಅವರ ಜೋಡಿ, ತೆರೆ ಮೇಲಿನ ಬೆಸ್ಟ್ ಜೋಡಿ ಎನಿಸಿಕೊಂಡಿತ್ತು. ನಟಿ ರಮ್ಯಾ ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಅಪ್ಪು ಜೊತೆಗೆ ಶುರುವಾದ ರಮ್ಯಾ ಸಿನಿಮಾ ಜರ್ನಿಯಲ್ಲಿ ದೊಡ್ಡ ಮಟ್ಟಿಗಿನ ಯಶಸ್ಸು ಕಂಡಿದ್ದಾರೆ. ಈಗಲೂ ರಮ್ಯಾ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಈಗ ಮತ್ತೆ ರಮ್ಯಾ ಮತ್ತು ಅಪ್ಪು ಬಗ್ಗೆ ಮಾತನಾಡಲು ಕಾರಣ ನಟಿ ರಮ್ಯಾ.
Recommended Video
ನಟಿ ರಮ್ಯಾ ಅಪ್ಪು ನೆನೆದು ವಿಶೇಷ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಅವರನ್ನು ಯಾರೂ ಕೂಡ ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಅವರ ಕುಟುಂಬಕ್ಕೆ ಆಪ್ತವಾಗದ್ದ ರಮ್ಯಾ ಅವರಿಗೆ ಅಪ್ಪು ಅವರನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಹಾಗಾಗಿ ಅವರು ಆಗಾಗ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಸದ್ಯ 'ಅರಸು' ಚಿತ್ರದ ಹಾಡೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನಟಿ ರಮ್ಯಾ ಅಪ್ಪು ಅವರನ್ನು ನೆನೆದು, ಸ್ವೀಟ್ ನಮನ ಸಲ್ಲಿಸಿದ್ದಾರೆ.
ನಿನ್ನ ಕಂಡ ಕ್ಷಣದಿಂದ ನಾನು ನನ್ನಲಿಲ್ಲ: ರಮ್ಯಾ!
ನಟಿ ರಮ್ಯಾ ಮತ್ತು ಪುನೀತ್ ರಾಜ್‌ಕುಮಾರ್ ಜೊತೆಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಪ್ರೇಕ್ಷಕರಿಗೆ ಹತ್ತಿರವಾದ ಸಿನಿಮಾಗಳಲ್ಲಿ 'ಅರಸು' ಚಿತ್ರ ಚಿತ್ರ ಕೂಡ ಒಂದು. ಈ ಚಿತ್ರದ 'ನಿನ್ನ ಕಂಡ ಕ್ಷಣದಿಂದ' ಹಾಡು ಕೂಡ ಹೆಚ್ಚು ಜನಪ್ರಿಯಗೊಂಡ ಹಾಡು. ಇದೇ ಹಾಡಿಗೆ ವಿವಿಧ ಎಕ್ಸ್‌ಪ್ರೆಶನ್ ಕೊಟ್ಟಿದ್ದಾರೆ ರಮ್ಯಾ. ಹಾಗಂತ ರಮ್ಯಾ ಅವರೇ ಅಭಿಯಿಸಿಲ್ಲ. ಬದಲಿಗೆ ಅವರು ಎಫೆಕ್ಟ್ ಬಳಸಿ ಹಾಡಿನಲ್ಲಿ ಬರುವ ಸಾಲುಗಳಿಗೆ ತಕ್ಕ ಹಾಗೆ ಭಾವನೆಗಳನ್ನು ವ್ಯಕ್ತ ಪಡಿಸಿದ್ದಾರೆ. ರಮ್ಯಾ ಹಂಚಿಕೊಂಡಿರುವ ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ದಿವ್ಯ ಸ್ಪಂದನಳನ್ನು ರಮ್ಯಾ ಎಂದು ಕರೆದಿದ್ದು ಪಾರ್ವತಮ್ಮ!
ಇನ್ನು ನಟಿ ರಮ್ಯಾ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದು ರಾಜ್‌ಕುಟುಂಬದಿಂದ. ದಿವ್ಯ ಸ್ಪಂದನ ಎನ್ನುವ ಹೆಸರನ್ನು ಬದಲಿಸಿದ್ದು ಪಾರ್ವತಮ್ಮ ರಾಜ್‌ಕುಮಾರ್. ರಮ್ಯಾ ಎನ್ನುವ ಹೆಸರಿನೊಂದಿಗೆ ಪುನೀತ್ ರಾಜ್‌ಕುಮಾರ್ ಜೊತೆಗೆ 'ಅಭಿ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟಿ ರಮ್ಯಾ ಬಣ್ಣ ಹಚ್ಚಿದರು. ಅಭಿ ಸಿನಿಮಾದಿಂದ ಶುರುವಾದ ಯಶಸ್ವಿ ಪಯಣದಿಂದ ರಮ್ಯಾ ಮತ್ತೆ ಯಾವತ್ತೂ ಕೂಡ ಹಿಂದಿರುಗಿ ನೋಡಲಿಲ್ಲ. ಅತಿ ಕಡಿಮೆ ಸಮಯದಲ್ಲಿ ರಮ್ಯಾ ಸ್ಟಾರ್ ನಟಿ ಆಗಿ ಬೆಳೆದು ನಿಂತರು.

ಅಭಿ, ಆಕಾಶ್, ಅರಸು ಚಿತ್ರಗಳಲ್ಲಿ ಅಪ್ಪು ಜೊತೆಗೆ ನಟನೆ!
ನಟ ಪುನೀತ್ ರಾಜ್‌ಕುಮಾರ್ ಜೊತೆಗೆ ರಮ್ಯಾ ಇಲ್ಲಿಯವರೆಗೂ ಅಭಿ, ಆಕಾಶ್, ಅರಸು ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಮೂರು ಚಿತ್ರಗಳು ಕೂಡ ಹಿಟ್ ಲಿಸ್ಟ್ ಸೇರಿರುವ ಸಿನಿಮಾಗಳು. ಮತ್ತೆ ಈ ಜೋಡಿ ಒಟ್ಟಿಗೆ ತೆರೆಯ ಮೇಲೆ ಅಭಿನಯಿಸುವ ಯೋಜನೆ ಹಾಕಿತ್ತು. ಆದರೆ ಅಷ್ಟರಲ್ಲಿ ಅಪ್ಪು ಅಗಲಿಕೆ ದೊಡ್ಡ ಶಾಕ್ ಕೊಟ್ಟಿದೆ. ಅಪ್ಪು ಇಲ್ಲದ ಎನ್ನುವ ವಿಚಾರದಿಂದ ನಟಿ ರಮ್ಯಾ ಅವರಿಗೂ ದೊಡ್ಡ ಆಘಾತ ಆಗಿತ್ತು. ಈಗ ಅಪ್ಪು ಇಲ್ಲದಿದ್ದರೂ ಅವರ ನೆನಪುಗಳನ್ನು ರಮ್ಯಾ ಮೆಲುಕು ಹಾಕುತ್ತಿರುತ್ತಾರೆ.

ರಮ್ಯಾ ಸಿನಿಮಾ ಬಿಟ್ಟರು ಕುಂದದ ಬೇಡಿಕೆ!
ನಟಿ ರಮ್ಯಾ ಅವರು ಸಿನಿಮಾರಂಗದಿಂದ ದೂರ ಉಳಿದು ಹಲವು ವರ್ಷಗಳೇ ಕಳೆದಿವೆ. ನಾಗರ ಹಾವು ಸಿನಿಮಾದ ಬಳಿಕ ನಟಿ ರಮ್ಯಾ ಮತ್ತೆ ಬಣ್ಣ ಹಚ್ಚಿಲ್ಲ. ಕೆಲವು ದಿನ ರಾಜಕೀಯದಲ್ಲಿ ಕ್ರಿಯವಾಗಿ ಇದ್ದರು. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯ ಆಗಿದ್ದಾರೆ. ಆದರೆ ರಮ್ಯಾ ಅವರಿಗೆ ಇರುವ ಅಭಿಮಾನಿ ಬಳಗ ಕಡಿಮೆ ಆಗಿಲ್ಲ. ಅವರಿಗೆ ಸದಾ ಎದುರಾಗುವುದು ಒಂದೇ ಒಂದು ಪ್ರಶ್ನೆ. ಮತ್ತೆ ಸಿನಿಮಾ ಯಾವಾಗ ಮಾಡುತ್ತೀರಿ, ಸಿನಿಮಾ ಮಾಡಿ ಎನ್ನುವುದು. ಇಲ್ಲೇ ಗೊತ್ತಾಗುತ್ತದೆ ರಮ್ಯಾ ಅವರನ್ನು ಮತ್ತೆ ಸಿನಿಮಾಗಳಲ್ಲಿ ನೋಡಲು ಹಲವರು ಕಾದು ಕುಳಿತ್ತಿದ್ದಾರೆ ಎನ್ನುವುದು. ಆದರೆ ರಮ್ಯಾ ಮುಂದಿನ ನಡೆ ಏನು ಎನ್ನುವುದು ಮಾತ್ರ ಇನ್ನು ಬಹಿರಂಗ ಆಗಿಲ್ಲ.


Click it and Unblock the Notifications











