ರಮ್ಯಾ ಜೊತೆ ಸೆಲ್ಫಿಯಲ್ಲಿ ಇದ್ದ ಆ ಹುಡುಗ ಯಾರೆಂದು ಹೇಳಿದ ನಟಿ!

ನಟಿ ರಮ್ಯಾ ಇತ್ತೀಚೆಗೆ ಹಲವು ವಿಚಾರಗಳಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಹಲವು ದಿನಗಳ ಬಳಿಕ ಸಿನಿಮಾರಂಗಕ್ಕೆ ಸಂಬಂಧ ಪಟ್ಟ ವಿಚಾರಗಳಲ್ಲಿ ರಮ್ಯಾ ಸಕ್ರಿಯವಾಗಿದ್ದಾರೆ. ಹಾಗಾಗಿ ರಮ್ಯಾ ಏನೇ ಮಾಡಿದರು ಅದು ವೈರಲ್ ಅಗಿ ಬಿಡುತ್ತದೆ. ಅದರಲ್ಲೂ ಇತ್ತೀಚೆಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಮ್ಯಾ ಜೊತೆಗೆ ಕಾಣಿಸಿಕೊಂಡ ಹುಡುಗನ ಬಗ್ಗೆ ಹೆಚ್ಚಿನ ಚರ್ಚೆ ಹುಟ್ಟಿಕೊಂಡಿದ್ದವು.

ಯುವಕನೊಬ್ಬನ ಜೊತೆಗೆ ಆಪ್ತವಾಗಿರುವ ಫೋಟೋವನ್ನು ರಮ್ಯಾ ಶೇರ್ ಮಾಡಿಕೊಂಡಿದ್ದರು. ಈ ಫೋಟೋ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಜೊತೆಗೆ ಸೆಲ್ಫಿಗೆ ಪೋಸ್ ನೀಡಿದ ಯುವಕ ಯಾರೆಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ರಮ್ಯಾ ಜೊತೆ ಇರುವ ಯುವಕನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಆ ಹುಡುಗ ಯಾರೆಂದು ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ರಮ್ಯಾ ಮತ್ತು ಆಕೆಯ ಜೊತೆಗೆ ಇರುವ ಹುಡುಗನ ಫೊಟೋ ವೈರಲ್ ಆಗುತ್ತಲೇ ರಮ್ಯಾ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅ ಪೊರ ಯಾರೆಂದು ಸ್ಪಷ್ಟನೆ ಕೊಟ್ಟಿದ್ದಾರೆ. ಅಂದಹಾಗೆ ರಮ್ಯಾ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದು ಮತ್ಯಾರು ಅಲ್ಲ ಆಕೆಯ ಸ್ಟೈಲಿಸ್ಟ್ ವಿಹಾನ್. ಈ ಬಗ್ಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿದ್ದು "ಇವರು ವಿಹಾನ್, ನನ್ನ ಸ್ಟೈಲಿಸ್ಟ್. ಆದರೂ ನಾನು ಕುತೂಹಲವನ್ನು ತುಂಬಾ ಇಷ್ಟಪಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.

 Actress Ramya Reveals Who Is The Boy With Her In Viral Selfi

ಇನ್ನು ರಮ್ಯಾ ಸೈಲೆಂಟ್ ಆಗಿ ತೆರೆಮರೆಯಲ್ಲಿ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಸದ್ಯದಲ್ಲೇ ತೆರೆಮೇಲೆ ಬರ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಷ್ಟು ಬೇಗ ಸಿನಿಮಾ ಮಾಡಲಿ ಎನ್ನುವುದೇ ಅಭಿಮಾನಿಗಳ ಆಶಯ.

ಸ್ಯಾಂಡಲ್‌ವುಡ್‌ನಲ್ಲಿ ಮೋಹಕ ತಾರೆ ಎಂದೇ ಖ್ಯಾತಿ ಗಳಿಸಿರುವ ರಮ್ಯಾ ಕೆಲವೇ ದಿನಗಳಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ಅಗಿ ಬಿಟ್ಟರು. ದಿವ್ಯಾ ಸ್ಪಂದನ ಆಗಿದ್ದ ರಮ್ಯಾ ಆಗಿ ಆನ್‌ ಸ್ಕ್ರೀನ್ ಮೇಲೆ ಮೋಡಿ ಮಾಡಿದರು. ಸಿನಿಮಾರಂಗದಲ್ಲಿ ಸಾಕಷ್ಟು ಹಿಟ್‌ಗಳನ್ನು ಕೊಟ್ಟು ಪ್ರತಿಭಾನ್ವಿತ ನಟಿ ಎನಿಸಿಕೊಂಡ ರಮ್ಯಾ, ಕೆಲವು ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರು. ಬಳಿಕ ರಾಜಕೀಯಕ್ಕೂ ಗುಡ್ ಬೈ ಹೇಳಿದರು.

 Actress Ramya Reveals Who Is The Boy With Her In Viral Selfi

ಈಗ ಮತ್ತೆ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಇದ್ದು, ಮತ್ತೆ ಬಣ್ಣ ಹಚ್ಚುವ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಮತ್ತೆ ರಮ್ಯಾ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಎನ್ನುವ ಸೂಚನೆ ಸಿಕ್ಕಿದೆ. ಯಾವ ಪಾತ್ರದ ಮೂಲಕ, ಹೇಗೆ ರಮ್ಯಾ ತೆರೆಯ ಮೇಲೆ ಬರುತ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

More from Filmibeat

English summary
Actress Ramya Reveals Who Is The Boy With Her In Viral Selfi, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X