Ramya: ದುಖಃದಲ್ಲಿ ಮುಳುಗಿದ ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ!
ನಟಿ ರಮ್ಯಾ ಇತ್ತೀಚೆಗೆ ಹೆಚ್ಚಾಗಿ ಸಿನಿಮಾ ಸಂಭಂದಿಸಿದ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ. ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹೊರ ಹಾಕುತ್ತಾ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಎಲ್ಲರಿಗೂ ಗೊತ್ತು ನಟಿ ರಮ್ಯಾ ಪ್ರಾಣಿ ಪ್ರೀತಿ ಎಷ್ಟರ ಮಟ್ಟಿಗೆ ಇದೆ ಎನ್ನುವುದು. ರಮ್ಯಾ ತಾವು ಸಾಕಿರುವ ನಾಯಿ ಮರಿಗಳ ವಿಡಿಯೋವನ್ನು, ಫೊಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಹಾಗಾಗಿ ಅವರ ಶ್ವಾನಗಳು ಕೂಡ ಎಲ್ಲರಿಗೂ ಗೊತ್ತು. ಆದರೆ ಈಗ ರಮ್ಯಾ ದುಖಃದಲ್ಲಿ ಇದ್ದಾರೆ.
ಹೌದು ನಟಿ ರಮ್ಯಾ ಅವರು ಮುದ್ದಾಗಿ ಸಾಕಿದ್ದ, ಪ್ರೀತಿಯ ಶ್ವಾನ ಸಾವನಪ್ಪಿದೆ. ಹಾಗಾಗಿ ನಟಿ ರಮ್ಯ ಸದ್ಯ ದುಖಃದಲ್ಲಿ ಇದ್ದಾರೆ. ರಮ್ಯಾ ಅವರು ಎಷ್ಟರ ಮಟ್ಟಿಗೆ ತಾವು ಸಾಕಿದ ನಾಯಿಯನ್ನು ಪ್ರೀತಿಸುತ್ತಿದ್ದರು ಅಂದರೆ, ಅವರು ಎಲ್ಲೇ ಹೋದರು ಅವರ ಜೊತೆಗೆ ಆ ನಾಯಿ ಇರುತ್ತಾ ಇತ್ತು. ಅವರು ವಿದೇಶಗಳಿಗೆ ಪ್ರವಾಸ ಬೆಳೆಸಿದರೂ ಕೂಡ ಆಕೆಯ ಜೊತೆಗೆ ನಾಯಿಗಳು ಇರಿತ್ತಿದ್ದವು.

ರಮ್ಯಾಗೆ ಹೆಚ್ಚಿನ ಪ್ರಾಣಿ ಪ್ರೀತಿ ಇದೆ. ಹಾಗಾಗಿ ರಮ್ಯಾ ಇತ್ತೀಚೆಗೆ ಮೃತಪಟ್ಟ ಲಾರಾ ಬೀದಿ ನಾಯಿ ಸಾವಿನ ಬಗ್ಗೆ ಧ್ವನಿ ಎತ್ತಿದರು. ನಾಯಿ ಮೇಲೆ ಕಾರು ಹತ್ತಿಸಿದ ಪ್ರಕರಣದ ಬಗ್ಗೆ ಹೆಚ್ಚಾಗಿ ಮಾತನಾಡಿ ಇದು ಅನ್ಯಾಯ ಎಂದಿದ್ದರು ನಟಿ ರಮ್ಯಾ. ಈ ಸಂಬಂಧ ರಮ್ಯಾ ಆರೋಪಿಯ ವಿರುದ್ಧ ಸಾಲು ಸಾಲು ಟ್ವೀಟ್ ಮಾಡಿದ್ದರು.
ಸುಮ್ಮನಹಳ್ಳಿ ನಡೆದ ನಾಯಿ ಲಾರಾ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮಾನವೀಯತೆ ಮೆರೆದಿದ್ದರು ನಟಿ ರಮ್ಯಾ. ಈಗ ತಮ್ಮ ಸಾಕು ನಾಯಿಯನ್ನು ಕಳೆದುಕೊಂಡು ದುಖಃದಲ್ಲಿ ಇದ್ದಾರೆ.


Click it and Unblock the Notifications











