For Quick Alerts
  ALLOW NOTIFICATIONS  
  For Daily Alerts

  'ನಾನಿನ್ನು ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ' ಎಂದ ರಮ್ಯಾ: ಕಾರಣ ಅಮೆರಿಕಾ ಲಸಿಕೆ

  |

  ನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಅಪರೂಪ. ಈ ಕಡೆ ಸುದ್ದಿ ಮಾಧ್ಯಮಗಳ ಕಣ್ಣಿಗೂ ಬೀಳುವುದಿಲ್ಲ. ಇನ್ಸ್ಟಾಗ್ರಾಂನಲ್ಲಿ ಸದಾ ಆಕ್ಟೀವ್ ಆಗಿರುವ ರಮ್ಯಾ ಆಗೊಂದು ಈಗೊಂದು ಎನ್ನುವಂತೆ ಪೋಸ್ಟ್, ಕಾಮೆಂಟ್ ಮಾಡುವ ಮೂಲಕ ಸುದ್ದಿಗೆ ಬರ್ತಾರೆ.

  ಭಾರತದ ಕೊರೊನಾ ಲಸಿಕೆ ಬಿಟ್ಟು ಅಮೆರಿಕ ಲಸಿಕೆಗಾಗಿ ಕಾಯ್ತಿದ್ದಾರೆ ರಮ್ಯಾ | Filmibeat Kannada

  ಇದೀಗ, ಖ್ಯಾತ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಇನ್ಸ್ಟಾಗ್ರಾಂ ಲೈವ್‌ನಲ್ಲಿ ರಮ್ಯಾ ಮಾತನಾಡಿದ್ದು, ಅನೇಕ ವಿಷಯಗಳನ್ನು ಹಂಚಿಕೊಂಡರು. ಸಂದರ್ಶನದ ಕೊನೆಯಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಯೊಂದಿದೆ ಎಂದು ಸೋನು ವೇಣುಗೋಪಾಲ್ 'ನೀವು ವ್ಯಾಕ್ಸಿನ್ ಹಾಕಿಸಿಕೊಂಡ್ರಾ..?'' ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ರಮ್ಯಾ 'ನಾನಿನ್ನು ಲಸಿಕೆ ಹಾಕಿಸಿಕೊಂಡಿಲ್ಲ' ಎಂದರು. ಅದಕ್ಕೆ ಕಾರಣ ಸಹ ನೀಡಿದ್ದಾರೆ. ಮುಂದೆ ಓದಿ...

  ಸಿನಿಮಾ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ: ಕೇಂದ್ರದ ವಿರುದ್ಧ ನಟಿ ರಮ್ಯಾ ಕಿಡಿಸಿನಿಮಾ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ: ಕೇಂದ್ರದ ವಿರುದ್ಧ ನಟಿ ರಮ್ಯಾ ಕಿಡಿ

  ಅಮೆರಿಕಾ ಲಸಿಕೆಗಾಗಿ ಕಾಯುತ್ತಿರುವೆ

  ಅಮೆರಿಕಾ ಲಸಿಕೆಗಾಗಿ ಕಾಯುತ್ತಿರುವೆ

  ಭಾರತದಲ್ಲಿ ಸದ್ಯ ಕೋವ್ಯಾಕ್ಸಿನ್, ಕೋವಿಶೀಲ್ಡ್ ವ್ಯಾಕ್ಸಿನ್ ನೀಡಲಾಗುತ್ತದೆ. 18, 15 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆದುಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳು ಲಸಿಕೆ ಪಡೆದ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ನಟಿ ರಮ್ಯಾ ಈವರೆಗೂ ಕೋವಿಡ್ ಲಸಿಕೆ ಪಡೆದಿಲ್ಲ. ಈ ಬಗ್ಗೆ ಸ್ವತಃ ರಮ್ಯಾ ಹೇಳಿಕೊಂಡಿದ್ದಾರೆ. ಏಕಂದ್ರೆ ಅಮೆರಿಕಾ ಲಸಿಕೆ ಬರಲಿ ಎಂದು ಕಾಯುತ್ತಿದ್ದಾರಂತೆ.

  ಮೊಡೆರ್ನಾ ಲಸಿಕೆ ಬೇಕು

  ಮೊಡೆರ್ನಾ ಲಸಿಕೆ ಬೇಕು

  ''ನಾನು ಮೊಡೆರ್ನಾ ಲಸಿಕೆಗಾಗಿ ಕಾಯುತ್ತಿದ್ದೇನೆ, ಅದಕ್ಕೆ ಅನುಮತಿ ಸಹ ಸಿಕ್ಕಿದೆ. ಅದು ಬಂದ ಕೂಡಲೆ ಲಸಿಕೆ ಪಡೆಯುತ್ತೇನೆ'' ಎಂದು ಮೋಹಕ ತಾರೆ ರಮ್ಯಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಮೆರಿಕಾ ಮೂಲದ ಕಂಪನಿ ತಯಾರಿಸುವ ಮೊಡೆರ್ನಾ ತುರ್ತು ಬಳಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ಸಿಕ್ಕಿದೆ. ಸದ್ಯಕ್ಕೆ ಭಾರತದಲ್ಲಿ ಮೊಡೆರ್ನಾ ವಿತರಣೆ ಮಾಡಲಾಗುತ್ತಿಲ್ಲ.

  ವ್ಯಾಕ್ಸಿನ್ ಬಗ್ಗೆ ಗೊಂದಲ ಇದೆ

  ವ್ಯಾಕ್ಸಿನ್ ಬಗ್ಗೆ ಗೊಂದಲ ಇದೆ

  ''ನನಗೆ ಯಾವುದು ಸರಿ, ಯಾವುದು ತೆಗೆದುಕೊಳ್ಳಬೇಕು ಎಂಬ ಗೊಂದಲ ಇದೆ. ಈಗ ಫೈಜರ್ ಮೂರು ಡೋಸ್ ಪಡೆಯಬೇಕು ಅಂತಿದ್ದಾರೆ. ನಾನು ಖಂಡಿತವಾಗಿಯೂ ಲಸಿಕೆ ಪಡೆಯುತ್ತೇನೆ. ಆದರೆ ಸರಿಯಾದ ವ್ಯಾಕ್ಸಿನ್ ಪಡೆಬೇಕು. ನನಗೆ ಮೊಡೆರ್ನಾ ಪಡೆಯುವ ಬಗ್ಗೆ ಆಸಕ್ತಿ ಇದೆ'' ಎಂದು ರಮ್ಯಾ ತಿಳಿಸಿದ್ದಾರೆ.

  ಬಹಳಷ್ಟು ಸೆಲೆಬ್ರಿಟಿಗಳು ಲಸಿಕೆ ಪಡೆದಿದ್ದಾರೆ

  ಬಹಳಷ್ಟು ಸೆಲೆಬ್ರಿಟಿಗಳು ಲಸಿಕೆ ಪಡೆದಿದ್ದಾರೆ

  ಇದುವರೆಗೂ ಭಾರತದ ಸಾಕಷ್ಟು ಸೆಲೆಬ್ರಿಟಿಗಳು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಅಮಿತಾಭ್ ಬಚ್ಚನ್, ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ, ಪ್ರಶಾಂತ್ ನೀಲ್ ಸೇರಿದಂತೆ ಸಾಕಷ್ಟು ಮಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.

  ರಮ್ಯಾ ಕೊನೆಯ ಚಿತ್ರ

  ರಮ್ಯಾ ಕೊನೆಯ ಚಿತ್ರ

  2014ರಲ್ಲಿ ಶಿವರಾಜ್ ಕುಮಾರ್ ಜೊತೆ 'ಆರ್ಯನ್' ಸಿನಿಮಾ ಚಿತ್ರೀಕರಣ ಮುಗಿಸಿದ ರಮ್ಯಾ ಚಿತ್ರರಂಗದಿಂದ ದೂರ ಉಳಿದರು. ಅದಕ್ಕೂ ಮುಂಚೆ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ನಟಿಸಿದ್ದ 'ನಾಗರಹಾವು' ಸಿನಿಮಾ 2016ರಲ್ಲಿ ತೆರೆಕಂಡಿತ್ತು. ಹಾಗಾಗಿ, ರಮ್ಯಾ ಅವರ ಕೊನೆಯ ಚಿತ್ರ ನಾಗರಹಾವು. ಪ್ರಜ್ವಲ್ ದೇವರಾಜ್ ಜೊತೆ 'ದಿಲ್ ಕಾ ರಾಜ' ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರಕ್ಕೆ ಅರ್ಧಕ್ಕೆ ನಿಂತಿದೆ.

  English summary
  Sandalwood Actress Ramya Says I am not vaccinated and waiting for America's Moderna Vaccine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X