ರಶ್ಮಿಕಾ ಮಂದಣ್ಣ ಫೋಟೋ ನೋಡಿ ಮೋಹಕ ತಾರೆ ರಮ್ಯಾ ಹೇಳಿದ್ದೇನು?

ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಶ್ಮಿಕಾ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆಯೇ ಹರಿದು ಬರುತ್ತೆ. ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಸಹ ಹೊಂದಿದ್ದಾರೆ.

Recommended Video

Brahma ಚಿತ್ರದ ಅಪಾಯಕಾರಿ ಕಾರು ಚೇಸಿಂಗ್ ದೃಶ್ಯ ತಯಾರಾಗಿದ್ದು ಹೀಗೆ | Car Crash Scenes | Filmibeat Kannada

ಇತ್ತೀಚಿಗೆ ರಶ್ಮಿಕಾ ಒಂದು ಫೋಟೋ ಶೇರ್ ಮಾಡಿ 'ವಜ್ರದಂತೆ ಪ್ರಕಾಶಮಾನವಾಗಿ ಹೊಳೆಯಿರಿ' ಎಂದು ಕ್ಯಾಪ್ಷನ್ ನೀಡಿದ್ದರು. ಈ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಬಂದಿದೆ. ವಿಶೇಷ ಅಂದರೆ ರಶ್ಮಿಕಾ ಫೋಟೋಗೆ ಮೋಹಕ ತಾರೆ ರಮ್ಯಾ ಸಹ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

 ಮತ್ತೆ ಬಂದ ನಟಿ ರಮ್ಯಾ

ಮತ್ತೆ ಬಂದ ನಟಿ ರಮ್ಯಾ

ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರೀಯರಾಗಿದ್ದಾರೆ. ಸುಮಾರು ಒಂದು ವರ್ಷ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದ ರಮ್ಯಾ ವಾಪಸ್ ಆಗುತ್ತಿದ್ದಂತೆ ಬ್ಯುಸಿಯಾಗಿದ್ದಾರೆ. ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ನಟಿಯರ ಪೋಸ್ಟ್ ಗಳಿಗೆ ಕಾಮೆಂಟ್ ಮಾಡಿ ಅಚ್ಚರಿ ಮೂಡಿಸುತ್ತಿದ್ದಾರೆ.

 ರಶ್ಮಿಕಾಗೆ ಹಾರ್ಟ್ ಇಮೋಜಿ ಕಳುಹಿಸಿದ ರಮ್ಯಾ

ರಶ್ಮಿಕಾಗೆ ಹಾರ್ಟ್ ಇಮೋಜಿ ಕಳುಹಿಸಿದ ರಮ್ಯಾ

ನಟಿ ರಶ್ಮಿಕಾ ಫೋಟೋಗೆ ರಮ್ಯಾ ಕಾಮೆಂಟ್ ಮಾಡಿದ್ದು, ಹಾರ್ಟ್ ಇಮೋಜಿ ಕಳುಹಿಸಿದ್ದಾರೆ. ರಮ್ಯಾ ಪ್ರತಿಕ್ರಿಯೆ ನೋಡಿ ರಶ್ಮಿಕಾಗೆ ಖುಷಿಯ ಜೊತೆಗೆ ಅಚ್ಚರಿಯೂ ಆಗಿದೆ. ರಮ್ಯಾ ಹಾರ್ಟ್ ಇಮೋಜಿಗೆ ರಶ್ಮಿಕಾ 'ಮ್ಯಾಮ್...' ಎಂದು ಕಾಮೆಂಟ್ ಮಾಡಿದ್ದಾರೆ. ಇಬ್ಬರ ಚಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಮ್ಯಾ ಪ್ರತಿಕ್ರಿಯೆ ನೋಡಿ ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ.

 ರಾಧಿಕಾ ಫೋಟೋಗೆ ರಮ್ಯಾ ಕಾಮೆಂಟ್

ರಾಧಿಕಾ ಫೋಟೋಗೆ ರಮ್ಯಾ ಕಾಮೆಂಟ್

ಇತ್ತೀಚಿಗೆ ರಮ್ಯಾ, ನಟಿ ರಾಧಿಕಾ ಪಂಡಿತ್ ಫೋಟೋಗೂ ಕಾಮೆಂಟ್ ಮಾಡಿದ್ದರು. ರಾಧಿಕಾ ಫೋಟೋಗೆ ರಮ್ಯಾ 'ತುಂಬಾ ಮುದ್ದಾಗಿದೆ' ಎಂದು ಹೇಳಿದ್ದರು. ರಮ್ಯಾ ಕಾಮೆಂಟ್ ಗೆ ರಾಧಿಕಾ ಪಂಡಿತ್ 'ನಿಮ್ಮಷ್ಟು ಮುದ್ದಾಗಿಲ್ಲ. ಯಾವಾಗಲು ನಿಮ್ಮನ್ನು ಆರಾಧಿಸುತ್ತೇನೆ' ಎಂದು ಪ್ರತಿಕ್ರಿಯೆ ನೀಡಿದ್ದರು. ಮೊದಲ ಬಾರಿಗೆ ರಮ್ಯಾ, ರಾಧಿಕಾ ಪೋಸ್ಟ್ ಗೆ ಕಾಮೆಂಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಇದೀಗ ರಶ್ಮಿಕಾ ಫೋಟೋಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಸಿನಿಮಾರಂಗಕ್ಕೆ ಬರ್ತಾರಾ ರಮ್ಯಾ?

ಸಿನಿಮಾರಂಗಕ್ಕೆ ಬರ್ತಾರಾ ರಮ್ಯಾ?

ರಮ್ಯಾ ಮತ್ತೆ ಸಿನಿಮಾರಂಗಕ್ಕೆ ಬರ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಮತ್ತೆ ವಾಪಸ್ ಆಗುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಸದ್ಯ ರಾಜಕೀಯ ಮತ್ತು ಸಿನಿಮಾ ಎರಡರಿಂದಲೂ ದೂರ ಇರುವ ರಮ್ಯಾ, ಮತ್ತೆ ಸಿನಿಮಾ ಮಾಡ್ತಾರಾ, ಚಿತ್ರರಂಗದಲ್ಲಿ ಸಕ್ರೀಯರಾಗುತ್ತಾರಾ ಎಂದು ಕಾದು ನೋಡಬೇಕು.

More from Filmibeat

English summary
Sandalwood Actress and Politician Ramya sends heart emoji to Rashmika Mandanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X