ಮತ್ತೆ ಚಿತ್ರರಂಗಕ್ಕೆ ಬನ್ನಿ ಎಂದು ರಮ್ಯಾಗೆ ರಚಿತಾ ರಾಮ್ ಮನವಿ! ರಮ್ಯ ಕೊಟ್ಟ ಉತ್ತರ ಏನು ಗೊತ್ತಾ?

ನಟಿ ರಚಿತಾ ರಾಮ್‌ ಈಗ ಫುಲ್‌ ಬ್ಯುಸಿ. ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಂ.1 ಪಟ್ಟ ಗಿಟ್ಟಿಸಿಕೊಂಡಿರುವ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ನಟಿ ರಮ್ಯ ಅವರು ಕನ್ನಡ ಚಿತ್ರರಂಗದಲ್ಲಿ ಹುಟ್ಟು ಹಾಕಿದ್ದ ಚಾರ್ಮ್ ಅನ್ನು ಈಗ ನಟಿ ರಚಿತಾ ರಾಮ್ ಮುಂದುವರೆಸಿದ್ದಾರೆ.

ರಮ್ಯ ಅವರ ಸ್ಥಾನವನ್ನು ರಚಿತ ತುಂಬುತ್ತಿದ್ದಾರೆ ಎಂಬ ಮಾತುಗಳನ್ನು ಈಗಾಗಲೇ ಇಂಡಸ್ಟ್ರಿಯ ಹಲವರು ಹೇಳಿಕೊಂಡಿದ್ದಾರೆ. ಅದರಂತೆ ರಚಿತಾ ರಾಮ್ ಸಾಕಷ್ಟು ಅಭಿಮಾನಿ ವರ್ಗವನ್ನು ಸಂಪಾದಿಸೋದಲ್ಲದೇ ವಿಭಿನ್ನ ಬಗೆಯ ಸಿನಿಮಾಗಳು, ಹೊಸ ಹೊಸ ಪ್ರಯೋಗಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೂಲಕ, ರಮ್ಯಾ ಕಾಲಕ್ಕೇ ನಂ.1 ಪಟ್ಟ ಮುಗಿದು ಹೋಯಿತು ಎಂಬ ಭಾವನೆ ಮೂಡಿತ್ತು. ಆದರೆ, ಇದೀಗ ಮತ್ತೆ ರಚಿತಾ ರಾಮ್‌ ಈ ಟ್ರೆಂಡ್‌ ಹುಟ್ಟುಹಾಕಿದ್ದಾರೆ. ಸದ್ಯ ಈಗ ರಮ್ಯ ಮತ್ತು ರಚಿತಾ ಬಗ್ಗೆ ಹೇಳೊದಕ್ಕೆ ಇಂಟ್ರಸ್ಟಿಂಗ್ ಕಂಟೆಂಟ್ ಒಂದು ಸಿಕ್ಕಿದೆ ಅದು ಏನು ಅಂತ ಮುಂದೆ ಓದಿ.

ಇವರಿಬ್ಬರ ಸ್ನೇಹ ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ.

ಇವರಿಬ್ಬರ ಸ್ನೇಹ ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ.

ಸ್ಯಾಂಡಲ್‌ವುಡ್‌ನ ಪದ್ಮಾವತಿಯಾಗಿ ಈಗಲೂ ಅದೇ ಸ್ಥಾನವನ್ನು ಉಳಿಸಿಕೊಂಡಿರುವ ನಟಿ ಅಂದ್ರೆ ಅದು ಒನ್ ಆಂಡ್ ಓನ್ಲಿ ರಮ್ಯ. ರಮ್ಯ ಸ್ಯಾಂಡಲ್‌ವುಡ್‌ನಲ್ಲಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಯಾಕೆಂದರೆ ನಟಿ ರಮ್ಯ ಸಿನಿಮಾ ರಂಗದಿಂದ ಈಗ ಕೊಂಚ ದೂರವೇ ಉಳಿದಿದ್ದಾರೆ. ಆದರೇ ಅಭಿಮಾನಿಗಳು ಮಾತ್ರ ಅವರನ್ನು ಮರೆಯಲು ಸಾಧ್ಯವಾಗದೇ ಮತ್ತೆ ಸಿನಿಮಾದಲ್ಲಿ ನಟಿಸಲೇ ಬೇಕು ಎಂಬ ಒತ್ತಾಯವನ್ನು ಅವರ ಮುಂದಿಡುತ್ತಿದ್ದಾರೆ. ಹೀಗಿರುವಾಗಲೇ ನಟಿ ರಚಿತಾ ರಾಮ್ ಕೂಡ ರಮ್ಯ ಅವರನ್ನು ಮತ್ತೆ ಸಿನಿಮಾಗೆ ಕಂ ಬ್ಯಾಕ್ ಮಾಡಲು ಮನವಿ ಮಾಡಿಕೊಂಡಿದ್ದಾರೆ.

ಲವ್‌ ಯೂ ರಚ್ಚು ಟೈಟಲ್ ಬಗ್ಗೆ ರಚಿತಾ ಮಾತು

ಲವ್‌ ಯೂ ರಚ್ಚು ಟೈಟಲ್ ಬಗ್ಗೆ ರಚಿತಾ ಮಾತು

ರಚಿತಾ ರಾಮ್ ಅಭಿನಯದ ಲವ್‌ ಯೂ ರಚ್ಚು ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಚಿತ್ರದ ಪ್ರಮೋಷನ್ ಸಂದರ್ಭ ಖಾಸಗೀ ಸಂದರ್ಶನದಲ್ಲಿ ಮಾತನಾಡಿರುವ ರಚಿತಾ ರಮ್ಯ ಅವರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಲವ್‌ ಯೂ ರಚ್ಚು ಸಿನಿಮಾಗೆ ಈ ಹಿಂದೆ ಲವ್‌ ಯೂ ರಮ್ಯ ಎಂದು ಹೆಸರಿಡಲು ಚಿತ್ರತಂಡ ನಿರ್ಧರಿಸಿತ್ತು. ಇದರ ಬಗ್ಗೆ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ನಟಿ ರಚಿತಾ ರಾಮ್ "ಅಯ್ಯೋ ರಮ್ಯ ಅವರ ಹೆಸರು ಇದ್ದಿದ್ರು ಇನ್ನು ಖುಷಿಯಿಂದ ಆಕ್ಟ್ ಮಾಡ್ತಾ ಇದ್ದೆ. ನಾನು ರಮ್ಯ ಅವರ ಅಭಿಮಾನಿಯಾಗಿ ತುಂಬ ಖುಷಿಯಿಂದ ಹಾಗೂ ಹೆಮ್ಮೆಯಿಂದ ಆ ಟೈಟಲ್‌ನಲ್ಲಿ ಕೆಲಸ ಮಾಡುತ್ತಿದೆ. ರಚ್ಚು ಬದಲು ನನ್ನ ಹೆಸರು ರಮ್ಯ ಅಂತ ಆಗುತ್ತಿತ್ತು ಅಷ್ಟೆ. ಇಂಥ ಒಂದು ಅವಕಾಶ ಬಂದಿದ್ರೆ ಬೇಡ ಎನ್ನುತ್ತಿದ್ನಾ?' ಎಂದಿದ್ದಾರೆ ರಚಿತಾ ರಾಮ್.

ರಮ್ಯ ಅವರ ಹೆಸರು ರಿವೀಲ್ ಮಾಡಿದ ರಚಿತಾ ರಾಮ್

ರಮ್ಯ ಅವರ ಹೆಸರು ರಿವೀಲ್ ಮಾಡಿದ ರಚಿತಾ ರಾಮ್

ರಚಿತಾ ರಾಮ್ ಮತ್ತು ರಮ್ಯ ಮೊದಲಿನಿಂದಲು ಆಪ್ತ ಸ್ನೇಹಿತರು. ರಚಿತಾ ರಮ್ಯ ಅವರನ್ನು ತುಂಬ ಇಷ್ಟ ಪಡುತ್ತಾರೆ. ರಮ್ಯ ಅವರ ನಟನೆ ಮತ್ತು ಚಾರ್ಮ್‌ಗೆ ಫಿದಾ ಆಗಿರುವ ರಚಿತಾ ರಮ್ಯ ಅವರೊಂದಿಗೆ ಒಂದು ಉತ್ತಮ ಸ್ನೇಹವನ್ನು ಇಟ್ಟುಕೊಂಡಿದ್ದಾರೆ. ಇದೇ ಪ್ರೀತಿಯಲ್ಲಿ ನಟಿ ರಚಿತಾ ರಾಮ್ ರಮ್ಯ ಅವರನ್ನು ದೀವಾ ಎಂದು ಕರೆಯುತ್ತಾರೆ ಅಂತೆ. ಮೊದಲಿನಿಂದಲೂ ನಾನು ರಮ್ಯ ಅವರನ್ನು ದೀವಾ ಎಂದೇ ಕರೆಯೋದು. ಹೀಗೆ ಕರೆಯೋದರಲ್ಲಿ ಖುಷಿ ಇದೆ ಎಂದು ರಚಿತಾ ಹೇಳಿಕೊಂಡಿದ್ದಾರೆ.

ಬರ್ತ್‌ಡೇ ಗಿಫ್ಟ್ ಜೊತೆ ಮತ್ತೊಂದು ಗಿಫ್ಟ್ ಕಳುಹಿಸಿದ ರಮ್ಯ

ಬರ್ತ್‌ಡೇ ಗಿಫ್ಟ್ ಜೊತೆ ಮತ್ತೊಂದು ಗಿಫ್ಟ್ ಕಳುಹಿಸಿದ ರಮ್ಯ

ರಚಿತಾ ಮತ್ತು ರಮ್ಯ ಉತ್ತಮ ಸ್ನೇಹಿತರು. ಹೀಗಾಗಿ ಇವರಿಬ್ಬರು ಹುಟ್ಟುಹಬ್ಬದ ಸಂದರ್ಭದಲ್ಲಿ ಉಡುಗೊರೆಗಳುನ್ನು ಕಳುಹಿಸೋದು ಮಾಡುತ್ತಾರೆ. ಅಂತೆಯೇ ಅಕ್ಟೋಬರ್ 3 ರಂದು ರಚಿತಾ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ರಚಿತಾಗೆ ಹೂವಿನ ಬೊಕ್ಕೆ ಮತ್ತು ಬ್ಯೂಟಿಫುಲ್ ಆಗಿರುವ ಸೀರೆ ಯನ್ನು ರಮ್ಯ ಗಿಫ್ಟ್ ಆಗಿ ನೀಡಿದ್ದರಂತೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ರಚಿತಾ ರಮ್ಯಾಗೆ ಹೃದಯಪೂರ್ವಕವಾಗಿ ಧನ್ಯವಾದ ತಿಳಿಸಿದ್ದಾರೆ. ಹಾಗೇ ಮತ್ತೊಂದು ಇಂಟರೆಸ್ಟಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಜೀವನದಲ್ಲಿ ಈ ಉಡುಗೊರೆಯನ್ನು ಮರೆಯಲ್ವಂತೆ ರಚಿತಾ

ಜೀವನದಲ್ಲಿ ಈ ಉಡುಗೊರೆಯನ್ನು ಮರೆಯಲ್ವಂತೆ ರಚಿತಾ

ಹೀಗೆ ಮಾತು ಮುಂದುವರೆಸಿ ಮಾತನಾಡಿದ ನಟಿ ರಚಿತಾ, ಬರ್ತ್‌ಡೇ ಉಡುಗೊರೆ ಜೊತೆಗೆ ಇತ್ತೀಚೆಗೆ ಕೂಡ ರಮ್ಯ ಅವರಿಂದ ನನಗೆ ವಿಶೇಷವಾದ ಉಡುಗೊರೆ ಒಂದು ಬಂದಿದೆ. ಅದನ್ನು ನಾನು ಎಲ್ಲೂ ರಿವೀಲ್ ಮಾಡಿಲ್ಲ. ರಮ್ಯ ಅವರು ಕಳುಹಿಸಿರುವ ಈ ಉಡುಗೊರೆ ನನ್ನ ಜೀವನದಲ್ಲೆ ಮರೆಯಲು ಸಾಧ್ಯವಿಲ್ಲ. ಅಷ್ಟು ಸ್ಪೆಷಲ್ ಉಡುಗೊರೆ ಅದು. ಅದನ್ನು ಸಮಯ ಸಂದರ್ಭ ಬಂದಾಗ ಖಂಡಿತಾ ರಿವೀಲ್ ಮಾಡುತ್ತೇನೆ. ಈಗ ನಾನು ಅದರ ಬಗ್ಗೆ ಏನು ಹೇಳಲ್ಲ ಎಂದಿದ್ದಾರೆ. ಈ ಮೂಲಕ ರಮ್ಯ ಕಳುಹಿಸಿರುವ ಆ ಉಡುಗೊರೆ ಏನು ಎಂಬ ಬಗ್ಗೆ ಕುತೂಹಲ ಮೂಡಿಸಿದ್ದಾರೆ ರಚಿತಾ.

ಆದಷ್ಟು ಬೇಗ ಮತ್ತೆ ಸಿನಿಮಾದಲ್ಲಿ ನಟಿಸಿ ಎಂದ ರಚಿತಾ

ಆದಷ್ಟು ಬೇಗ ಮತ್ತೆ ಸಿನಿಮಾದಲ್ಲಿ ನಟಿಸಿ ಎಂದ ರಚಿತಾ

ಎಲ್ಲರಿಗೂ ತಿಳಿದಿರುವಂತೆ ನಟಿ ರಮ್ಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ವರ್ಷಗಳೇ ಕಳೆದಿದೆ. ಈಗಲೂ ಕೂಡ ಕನ್ನಡ ಪ್ರೇಕ್ಷಕರು ರಮ್ಯ ಅವರನ್ನು ಸಿನಿಮಾದಲ್ಲಿ ನೋಡಲು ಕಾಯುತ್ತಿದ್ದಾರೆ. ಅಂತೆಯೇ ನಟಿ ರಚಿತಾ ಅವರ ಆಸೆ ಕೂಡ ಅದೇ ಆಗಿದೆ. ಖಾಸಗೀ ಸಂದರ್ಶನದಲ್ಲಿ ಮಾತನಾಡಿದ ರಚಿತಾ ರಾಮ್ "ದೀವಾ ಅವರಿಗೆ ನಾನು ಮತ್ತೆ ಯಾವಾಗ ಆಕ್ಟ್ ಮಾಡುತ್ತೀರಿ ಎಂದು ಕೇಳಿದ್ದೀನಿ. ಅದಕ್ಕೆ ಅವರು ನಕ್ಕು ಸುಮ್ಮನಾಗುತ್ತಾರೆ ಅಷ್ಟೆ. ದೀವಾ ಮತ್ತೆ ಆಕ್ಟ್ ಮಾಡಬೇಕು ಅನ್ನೋದು ನನ್ನ ಆಸೆ ಕೂಡ ಹೌದು. ದೀವಾ ಪ್ಲೀಸ್ ಮತ್ತೆ ಸಿನಿಮಾದ ಅಭಿನಯಿಸಿ, ಐ ಲವ್‌ ಯೂ" ಎಂದು ರಚಿತಾ ಹೇಳಿಕೊಂಡಿದ್ದಾರೆ. ರಚಿತಾರಂತೆ ಅದೆಷ್ಟೋ ಮಂದಿ ಮತ್ತೆ ಪದ್ಮಾವತಿಯ ಅಭಿನಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

More from Filmibeat

English summary
Ramya sends a thoughtful birthday gift to Rachitha Ram. After few days Ramya sent special gift to Rachitha ram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X