For Quick Alerts
  ALLOW NOTIFICATIONS  
  For Daily Alerts

  ಚೊಚ್ಚಲ ಚಿತ್ರದ ವೇಳೆ ಕ್ಲಿಕ್ಕಿಸಿದ ಮೊದಲ ಫೋಟೋ ಹಂಚಿಕೊಂಡ ರಮ್ಯಾ

  |

  ಮೋಹಕ ತಾರೆ ನಟಿ ರಮ್ಯಾ ಚಿತ್ರರಂಗದಿಂದ ಅಂತರ ಕಾಯ್ದುಕೊಂಡು ಐದು ವರ್ಷಕ್ಕಿಂತ ಹೆಚ್ಚಾಯಿತು. ಈಗಲೂ ರಮ್ಯಾ ಅವರ ಮೇಲಿನ ಪ್ರೀತಿ-ಅಭಿಮಾನ ಮಾತ್ರ ಕನ್ನಡ ಸಿನಿ ಪ್ರೇಕ್ಷಕರಿಗೆ ಕಮ್ಮಿ ಆಗಿಲ್ಲ.

  ರಾಜಕೀಯವಾಗಿ ರಮ್ಯಾ ಏನೇ ಆಗಿರಬಹುದು. ಅವರೊಬ್ಬ ನಟಿ ಅಂತ ಬಂದ್ರೆ, ಇಂಡಸ್ಟ್ರಿಗೆ ಈಗ ವಾಪಸ್ ಬಂದರೂ ಅದ್ಧೂರಿ ಸ್ವಾಗತ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರೂ, ಸಿನಿ ಜಗತ್ತಿನ ನೆನಪುಗಳನ್ನು ಮಾತ್ರ ರಮ್ಯಾ ಮರೆತಿಲ್ಲ. ಅದಕ್ಕೆ ತಾಜಾ ಉದಾಹರಣೆ ರಮ್ಯಾ ಹಂಚಿಕೊಂಡಿರುವ ಚೊಚ್ಚಲ ಚಿತ್ರದ ಮೊದಲ ಫೋಟೋಶೂಟ್. ಎಲ್ಲಿ, ಯಾವಾಗ? ಮುಂದೆ ಓದಿ....

   ರಶ್ಮಿಕಾ ಮಂದಣ್ಣ ಫೋಟೋ ನೋಡಿ ಮೋಹಕ ತಾರೆ ರಮ್ಯಾ ಹೇಳಿದ್ದೇನು? ರಶ್ಮಿಕಾ ಮಂದಣ್ಣ ಫೋಟೋ ನೋಡಿ ಮೋಹಕ ತಾರೆ ರಮ್ಯಾ ಹೇಳಿದ್ದೇನು?

  'ಅಭಿ' ಚಿತ್ರದ ವೇಳೆ ಫೋಟೋಶೂಟ್

  'ಅಭಿ' ಚಿತ್ರದ ವೇಳೆ ಫೋಟೋಶೂಟ್

  ರಮ್ಯಾ ನಟಿಸಿದ ಮೊದಲ ಸಿನಿಮಾ ಅಭಿ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದರು. ಈ ಸಿನಿಮಾದ ಸೆಟ್‌ನಲ್ಲಿ ಕ್ಲಿಕ್ಕಿಸಿದ್ದ ಫೋಟೋವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ರಮ್ಯಾ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

  ಯಾರೇ ಇರಲಿ, ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ...

  ಯಾರೇ ಇರಲಿ, ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ...

  ರಮ್ಯಾ ಹಂಚಿಕೊಂಡಿರುವ ಈ ಫೋಟೋಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ''ಯಾರೇ ಇರಲಿ, ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ...'' ಎಂದು ಹೇಳುತ್ತಿದ್ದಾರೆ. ಕನ್ನಡ ಇಂಡಸ್ಟ್ರಿಗೆ ರಮ್ಯಾ ಒಬ್ಬರೇ, ಈಗಲೂ ರಮ್ಯಾ ವಾಪಸ್ ಆದ್ರೆ ನಂಬರ್ ವನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

  ಒಂದೇ ವರ್ಷದಲ್ಲಿ ತೆಲುಗು-ತಮಿಳಿಗೂ ಎಂಟ್ರಿ!

  ಒಂದೇ ವರ್ಷದಲ್ಲಿ ತೆಲುಗು-ತಮಿಳಿಗೂ ಎಂಟ್ರಿ!

  'ಅಭಿ' ಸಿನಿಮಾ ಹಿಟ್ ಆದ ನಂತರ ಎಕ್ಸ್‌ಕ್ಯೂಸ್‌ಮಿ ಸಿನಿಮಾ ಮಾಡಿದರು. ಆಮೇಲೆ ತೆಲುಗಿನಲ್ಲಿ ಕಲ್ಯಾಣ್ ರಾಮ್ ಜೊತೆ 'ಅಭಿಮನ್ಯು' ಎಂಬ ಸಿನಿಮಾ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಇದು ರಮ್ಯಾ ಅವರ ಮೊದಲ ತೆಲುಗು ಸಿನಿಮಾ. ಇದಾದ ಕೆಲವು ತಿಂಗಳಲ್ಲಿ ಸಿಂಬು ಜೊತೆ 'ಕುತ್ತು' ಎಂಬ ತಮಿಳು ಚಿತ್ರ ಮಾಡಿದರು. ಹೀಗೆ, ಕೇವಲ ಒಂದು ವರ್ಷದ ಅಂತರದಲ್ಲಿ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಮ್ಯಾ ನಟಿಸಿದ್ದರು.

  ಮೈದಾನದಲ್ಲಿದ್ರು ಕೊಹ್ಲಿಗೆ ಅನುಷ್ಕಾ ಶರ್ಮಾರದ್ದೇ ಚಿಂತೆ | Filmibeat Kannada
  ಆರ್ಯನ್ ಕೊನೆ ಸಿನಿಮಾ

  ಆರ್ಯನ್ ಕೊನೆ ಸಿನಿಮಾ

  ಅಧಿಕೃತವಾಗಿ ಶಿವರಾಜ್ ಕುಮಾರ್ ಜೊತೆ ನಟಿಸಿದ 'ಆರ್ಯನ್' ಸಿನಿಮಾ ರಮ್ಯಾ ಅವರ ಕೊನೆಯ ಚಿತ್ರ. ಆದ್ರೆ, ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಕಾಣಿಸಿಕೊಂಡಿದ್ದ 'ನಾಗರಹಾವು' ಸಿನಿಮಾ ಕೊನೆಯದಾಗಿ ಬಿಡುಗಡೆಯಾಗಿತ್ತು.

  English summary
  Kannada actress Actress Ramya shares her first Photo shoot of Abhi Movie Set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X