For Quick Alerts
  ALLOW NOTIFICATIONS  
  For Daily Alerts

  ಸೆಲ್ಫಿ ಶೇರ್ ಮಾಡಿ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ ರಮ್ಯಾ: ಹೇಗಿದ್ದಾರೆ ಮೋಹಕ ತಾರೆ ನೋಡಿ

  |

  ಸ್ಯಾಂಡಲ್ ವುಡ್ ನ ಮೋಹಕ ತಾರೆ ಮತ್ತು ರಾಜಕಾರಣಿ ರಮ್ಯಾ ಸಾಮಾಜಿಕ ಜಾಲತಾಣಕ್ಕೆ ವಾಪಾಸ್ ಆಗಿ ಅಭಿಮಾನಿಗಳಿಗೆ ಸಂತಸ ನೀಡಿದ್ದರು. ಇಷ್ಟು ದಿನ ರಮ್ಯಾ ಎಲ್ ಹೋಗಿದ್ದರು? ಈಗೆಲ್ಲಿದ್ದಾರೆ? ಎನ್ನುವುದು ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಕ್ಕೆ ಹಿಂದಿರುಗುವ ಮೂಲಕ ಆಕ್ವೀವ್ ಆಗಿದ್ದಾರೆ ಎನ್ನುವುದು ಮಾತ್ರ ಗೊತ್ತಾಗಿದೆ.

  Kannad Gothilla :ರಚಿತಾ ರಾಮ್ ಚಾನ್ಸ್ ಮಿಸ್ ಮಾಡ್ಕೊಂಡ್ರು ಹರಿಪ್ರಿಯಾ ಕ್ಯಾಚ್ ಹಾಕೊಂಡ್ರು |Mayuraa Raghavendra

  ಇನ್ಸ್ಟಾಗ್ರಾಮ್ ನಲ್ಲಿ ಸಖತ್ ಆಕ್ವೀವ್ ಆಗಿರುವ ರಮ್ಯಾ ಸಾಕಷ್ಟು ಪೋಸ್ಟ್ ಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ. ಇತ್ತೀಚಿಗೆ ಆಧ್ಯಾತ್ಮದ ಕುರಿತಾದ ಹೆಚ್ಚು ಸ್ಟೇಟಸ್ ಗಳನ್ನು ಹಾಕುತ್ತಿದ್ದಾರೆ. ಹಾಗಾಗಿ ರಮ್ಯಾ ಆಧ್ಯಾತ್ಮದ ಕಡೆ ಮುಖ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾಗಳಲ್ಲಿ ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಮೋಹಕ ತಾರೆ ಇದೀಗ ಸೆಲ್ಫಿ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ್ದಾರೆ. ಮುಂದೆ ಓದಿ..

  ವರ್ಷದ ಬಳಿಕ ಫೇಸ್ ಬುಕ್ ನಲ್ಲಿ ರಮ್ಯಾ ಪ್ರತ್ಯಕ್ಷ: ಏನಂತ ಪೋಸ್ಟ್ ಮಾಡಿದ್ದಾರೆ ನೋಡಿವರ್ಷದ ಬಳಿಕ ಫೇಸ್ ಬುಕ್ ನಲ್ಲಿ ರಮ್ಯಾ ಪ್ರತ್ಯಕ್ಷ: ಏನಂತ ಪೋಸ್ಟ್ ಮಾಡಿದ್ದಾರೆ ನೋಡಿ

  ವರ್ಷದ ಬಳಿಕ ಫೋಟೋ ಹಂಚಿಕೊಂಡ ರಮ್ಯಾ

  ವರ್ಷದ ಬಳಿಕ ಫೋಟೋ ಹಂಚಿಕೊಂಡ ರಮ್ಯಾ

  ಬೇರೆ ಬೇರೆ ಫೋಟೋಗಳನ್ನು ಸ್ಟೇಟಸ್ ಹಾಕಿಕೊಳ್ಳುತ್ತಿರುವ ರಮ್ಯಾ ತನ್ನ ಫೋಟೋವನ್ನು ಇದುವರೆಗೂ ಹಂಚಿಕೊಂಡಿರಲಿಲ್ಲ. ಹಾಗಾಗಿ ರಮ್ಯಾ ಹೇಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ರಮ್ಯಾ ಅವರನ್ನು ನೋಡದೆ ವರ್ಷವೆ ಆಗಿದೆ. ರಮ್ಯಾರನ್ನ ನೋಡಲು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಒಂದಿಷ್ಟು ಫೋಟೋವನ್ನು ಶೇರ್ ಮಾಡಿದ್ದಾರೆ.

  ರಮ್ಯಾ ಸೆಲ್ಫಿ ಫೋಟೋಗಳಿಗೆ ಅಭಿಮಾನಿಗಳು ಫಿದಾ

  ರಮ್ಯಾ ಸೆಲ್ಫಿ ಫೋಟೋಗಳಿಗೆ ಅಭಿಮಾನಿಗಳು ಫಿದಾ

  ರಮ್ಯಾ ಸಾಕಷ್ಟು ಸೆಲ್ಫಿ ಫೋಟೋಗಳನ್ನು ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ. ರಮ್ಯಾ ಶೇರ್ ಮಾಡಿರುವ ಫೋಟೋಗಳು ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸುವ ಜೊತೆಗೆ ಅಚ್ಚರಿಯೂ ಮೂಡಿಸಿದೆ. ವೆರೈಟಿ ಫೋಟೋಗಳನ್ನು ಹಂಚಿಕೊಂಡಿರುವ ರಮ್ಯಾ ನನ್ನ ಬಳಿ ಇರುವ ಸೆಲ್ಫಿಗಳು ಹೀಗೆ ಇವೆ ಎಂದು ಬರೆದುಕೊಂಡಿದ್ದಾರೆ.

  ಚಿರಂಜೀವಿ ಸರ್ಜಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ರಮ್ಯಾಚಿರಂಜೀವಿ ಸರ್ಜಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ರಮ್ಯಾ

  ಚಿರಂಜೀವಿ ಸರ್ಜಾ ನಿಧನಕ್ಕೆ ಸಂತಾಪ ಸೂಚಿಸಿದ್ದ ರಮ್ಯಾ

  ಚಿರಂಜೀವಿ ಸರ್ಜಾ ನಿಧನಕ್ಕೆ ಸಂತಾಪ ಸೂಚಿಸಿದ್ದ ರಮ್ಯಾ

  ಇತ್ತೀಚಿಗೆ ರಮ್ಯಾ ಫೇಸ್ ಬುಕ್ ನಲ್ಲಿ ಚಿರಂಜೀವಿ ಸರ್ಜಾ ನಿಧನ ಸುದ್ದಿ ತಿಳಿದು ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದರು "ಅವರೊಂದಿಗೆ ಕೆಲಸ ಮಾಡಿದ್ದು ಹಿತಕರ ಹಾಗೂ ಸ್ಮರಣೀಯ ಅನುಭವ. ಈ ನೋವಿನ ಸಂದರ್ಭದಲ್ಲಿ ಅವರ ಪ್ರೀತಿ ಪಾತ್ರರನ್ನು ಸಂತೈಸುವ ಮಾತುಗಳನ್ನು ಹೇಳಲು ಪದಗಳು ತುಂಬಾ ಕಠಿಣವೆನಿಸುತ್ತದೆ. ಅವರ ಅಗಲುವಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ಅವರಿಗೆ ಸಿಗಲಿದೆ ಎಂದು ಭರವಸೆ ಹೊಂದಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ರಮ್ಯಾ ಬರೆದುಕೊಂಡಿದ್ದರು.

  ಮತ್ತೆ ಚಿತ್ರರಂಗಕ್ಕೆ ಬರ್ತಾರಾ?

  ಮತ್ತೆ ಚಿತ್ರರಂಗಕ್ಕೆ ಬರ್ತಾರಾ?

  ರಮ್ಯಾ ಅವರನ್ನು ರಾಜಕೀಯ ರಂಗದಲ್ಲಿ ನೋಡುವುಕ್ಕಿಂದ ಹೆಚ್ಚಾಗಿ ಸಿನಿಮಾರಂಗದಲ್ಲಿ ನೋಡಲು ಇಷ್ಟಪಡುತ್ತಾರೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗ ಸಿನಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದೀಗ ರಾಜಕೀಯದಲ್ಲೂ ಸಕ್ರೀಯರಾಗಿಲ್ಲ. ಹಾಗಾಗಿ ಮತ್ತೆ ಸಿನಿಮಾರಂಗಕ್ಕೆ ವಾಪಾಸ್ ಬರ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಯಾವಾಗ, ಯಾವ ಸಿನಿಮಾ ಮೂಲಕ ಎನ್ನುವುದು ರಮ್ಯಾ ಅವರೆ ಉತ್ತರಿಸಬೇಕಿದೆ.

  English summary
  Actress Ramya Shares selfie photos on her Instagram stets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X