ಮಧ್ಯಾಹ್ನದ ಊಟ ತ್ಯಜಿಸಿ ರೈತರಿಗೆ ಬೆಂಬಲ ನೀಡಿದ ನಟಿ ರಮ್ಯಾ
'ರೈತರ ದೇಶದ ಬೆನ್ನೆಲುಬು, ರೈತ ಚೆನ್ನಾಗಿದ್ದರೆ ಇಡೀ ದೇಶ ಉತ್ತಮವಾಗಿರುತ್ತದೆ.....'. ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ರೈತರನ್ನು ಬೆಂಬಲಿಸಿ, ರೈತರು ಶುಭಾಶಯ ಕೋರಿ ಕನ್ನಡ ಚಿತ್ರರಂಗದ ಹಲವು ತಾರೆಯರು ಟ್ವೀಟ್ ಮಾಡಿದ್ದಾರೆ.
ಮೋಹಕ ತಾರೆ ರಮ್ಯಾ ಮಧ್ಯಾಹ್ನದ ಊಟ ತ್ಯಜಿಸಿ ರೈತರಿಗೆ ವಿಶೇಷವಾಗಿ ಬೆಂಬಲ ನೀಡಿದ್ದಾರೆ. ರಾಷ್ಟ್ರೀಯ ರೈತರ ದಿನಾಚರಣೆಗೆ ಶುಭಾಶಯ ತಿಳಿಸಿರುವ ರಮ್ಯಾ, ಕೇಂದ್ರ ಸರ್ಕಾರ ಹಾಗೂ ಮೋದಿ ಸಾರಥ್ಯದ ಸರ್ಕಾರವನ್ನು ಕಠುವಾಗಿ ಟೀಕಿಸಿದ್ದಾರೆ. ರೈತರ ವಿರೋಧಿ ಕಾಯಿದೆ ಜಾರಿ ಮಾಡಿ ರೈತರಿಗೆ ಅನ್ಯಾಯ ಮಾಡ್ತಿದ್ದಾರೆ ಎಂದು ಖಂಡಿಸಿದ್ದಾರೆ. ಮುಂದೆ ಓದಿ....

ಮಧ್ಯಾಹ್ನದ ಊಟ ತ್ಯಜಿಸಿದ ರಮ್ಯಾ
ರಾಷ್ಟ್ರೀಯ ರೈತರ ದಿನಾಚರಣೆಯ ವಿಶೇಷವಾಗಿ ಮಧ್ಯಾಹ್ನದ ಊಟ ತ್ಯಜಿಸಿ ರೈತರಿಗೆ ಬೆಂಬಲ ಸೂಚಿಸಿದ್ದಾರೆ ನಟಿ ರಮ್ಯಾ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಮೋಹಕತಾರೆ ''ಕಿಸಾನ್ ದಿವಸ್ ಆದ ಇಂದು ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಮಧ್ಯಾಹ್ನದ ಊಟ ತ್ಯಜಿಸಿದ್ದೇನೆ'' ಎಂದು ತಿಳಿಸಿದ್ದಾರೆ.

ಮೋದಿ ಸರ್ಕಾರ, ಸೂಟ್‌ಬೂಟ್ ಸರ್ಕಾರ
''ಕೇಂದ್ರ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ ಕಾಯಿದೆಯನ್ನು ಖಂಡಿಸಿ ಆಗಸ್ಟ್ 9 ರಿಂದ ದೇಶವ್ಯಾಪಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಆದ್ರೆ, ಮೋದಿ ಸರ್ಕಾರ ರೈತರ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲ. ಇದು ಸೂಟ್‌ಬೂಟ್ ಸರ್ಕಾರ, ರೈತರ ಪರ ಸರ್ಕಾರ ಅಲ್ಲ, ಇದು ಕಾರ್ಪೋರೆಟ್ ಸರ್ಕಾರ'' ಎಂದು ರಮ್ಯಾ ಟೀಕಿಸಿದ್ದಾರೆ.

ಅಡುಗೆ ಮಾಡದ ಬೆಂಬಲ ನೀಡಿ
ಮತ್ತೊಂದು ಪೋಸ್ಟ್‌ನಲ್ಲಿ ಉತ್ತರಪ್ರದೇಶದಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ಟಿಕೈಟ್ ಅವರು, ದೇಶದಾದ್ಯಂತ ರೈತರ ದಿನದಂದು ಮಧ್ಯಾಹ್ನ ಊಟವನ್ನು ತ್ಯಜಿಸಿ ರೈತರಿಗೆ ಬೆಂಬಲ ನೀಡಬೇಕೆಂದು ಕರೆ ನೀಡಿದ್ದಾರೆ. ಮೋದಿ ಸರ್ಕಾರದ ರೈತ ವಿರೋಧಿ ನೀತಿಯಿಂದ ಅನ್ನ ನೀಡುವ ಅನ್ನದಾತರು ಹಸಿದಿದ್ದಾರೆ. ಆದ್ದರಿಂದ ಮನೆಯಲ್ಲಿ ಮಧ್ಯಾಹ್ನ ಅಡುಗೆ ಮಾಡದೆ ರೈತರಿಗೆ ಬೆಂಬಲ ನೀಡಿ ಎಂದು ವಿನಂತಿಸಿದ್ದಾರೆ.
Recommended Video

ದರ್ಶನ್-ಸುಮಲತಾ
ರಾಷ್ಟ್ರೀಯ ರೈತರ ದಿನಾಚರಣೆಯ ಪ್ರಯುಕ್ತ ನಟ ದರ್ಶನ್, ಸಂಸದೆ-ನಟಿ ಸುಮಲತಾ ಅವರ ಸಹ ಶುಭಕೋರಿದ್ದಾರೆ. ''ಹಗಲಿರುಳು ತನ್ನ ಬೆವರು ಸುರಿಸಿ, ನಮ್ಮೆಲ್ಲರ ಹಸಿವು ನೀಗಿಸುವ ದೈವ, ನಿನಗೆ ನನ್ನ ಪ್ರಣಾಮಗಳು. "... ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೆ ನಿಂತಿದೆ ಧರ್ಮ, ಉಳುವಾ ಯೋಗಿಯ ನೋಡಲ್ಲಿ." ಸಮಸ್ತ ರೈತ ಬಾಂಧವರಿಗೆ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳು'' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.


Click it and Unblock the Notifications











