ನಟಿ ಅಮೂಲ್ಯಗೆ ಅತೀ ದುಬಾರಿ ಕನಕವಲ್ಲಿ ಸೀರೆ ಉಡುಗೊರೆ ನೀಡಿದ ರಮ್ಯಾ!
ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಇಬ್ಬರೂ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಅವರು ಹಲವು ದಿನಗಳ ಹಿಂದೆಯೇ ಹಂಚಿಕೊಂಡಿದ್ದರು. ಈ ಜೋಡಿಗೆ ಶುಭವಾಗಲಿ ಎಂದು ಅಭಿಮಾನಿ ಬಳಗ ಹರಸಿ ಹಾರೈಸಿತು. ಇತ್ತೀಚೆಗೆ ಅವರ ಸೀಮಂತ ಕಾರ್ಯ ಕೂಡ ಅದ್ದೂರಿಯಾಗಿ ನೆರವೇರಿದೆ.
ಕೆಲವು ದಿನಗಳ ಹಿಂದೆ ಅಮೂಲ್ಯ ಫೋಟೊಗಳನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಜೊತೆಗೆ ಅವರ ಬೇಬಿ ಬಂಪ್ ಫೋಟೋ ಶೂಟ್‌ಕೂಡ ವೈರಲ್ ಆಗಿತ್ತು.
Recommended Video
ಇತ್ತೀಚೆಗೆ ಅಮೂಲ್ಯ ಅವರ ಈ ಸಂತಸವನ್ನು ಸ್ಯಾಂಡಲ್‌ವುಡ್ ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ. ಬಹಳ ಅದ್ಧೂರಿಯಾಗಿ ಆಯೋಜಿಸಿದ್ದ ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮಕ್ಕೆ ಚಿತ್ರರಂಗದ ಸಾಕಷ್ಟು ತಾರೆಯರು ಆಗಮಿಸಿದ್ದರು.

ಬರಲು ತಡವಾದರು ವಿಶೇಷವಾಗಿ ಹರಸಿದ ಪದ್ಮಾವತಿ
ಸ್ಯಾಂಡಲ್‌ವುಡ್ ಗಣ್ಯರು ಅಮೂಲ್ಯ ಅವರಿಗೆ ತರಹೇವಾರಿ ಗಿಫ್ಟ್‌ಗಳ ಜೊತೆಗೆ ಹೆರಿಗೆ ಸುಗಮವಾಗಿ ಆಗಲಿ ಎಂದು ಹರಸಿ ಹಾರೈಸಿದ್ದಾರೆ. ಮತ್ತೊಂದು ವಿಚಾರ ಏನಪ್ಪ ಅಂದರೇ ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮಕ್ಕೆ ಯುಎಸ್‌ನಲ್ಲಿದ್ದ ಸ್ಯಾಂಡಲ್‌ವುಡ್ ಪದ್ಮಾವತಿ ಕೂಡ ಆಗಮಿಸಿದ್ದರು. ಅಮೂಲ್ಯ ಮತ್ತು ರಮ್ಯಾ ಅವರಿಗೆ ಎಲ್ಲಿಲ್ಲದ ನಂಟು, ಅಮೂಲ್ಯ ಈ ಹಿಂದೆ ಕೂಡ ರಮ್ಯಾ ಅವರ ಬಗ್ಗೆ ಸಾಕಷ್ಟು ಹೇಳಿಕೊಂಡಿದ್ದರು, ಹೀಗಾಗಿ ಇತ್ತೀಚೆಗೆ ನಡೆದ ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮದಲ್ಲಿ ಎಲ್ಲಿ ರಮ್ಯಾ ಕಾಣಿಸುತ್ತಿಲ್ಲ ಅಂತ ಹಲವರು ಅಂದುಕೊಂಡಿದ್ರು. ನಂತರವೇ ಗೊತ್ತಾಗಿದ್ದು ವಿದೇಶದಲ್ಲಿದ್ದ ನಟಿ ರಮ್ಯಾ ಬರಲು ತಡವಾಗಿತ್ತೆಂದು. ತಡವಾಗಿ ಆದರು ಬಂದಿರುವ ರಮ್ಯಾ ಬರುತ್ತ ಅಮೂಲ್ಯಗೆ ಸ್ಪೆಷಲ್ ಗಿಫ್ಟ್ ಒಂದನ್ನು ತಂದಿದ್ದಾರೆ. ಅದೇನು ಅಂತ ಮುಂದೆ ಓದಿ

ಅಮೂಲ್ಯಗೆ ವಿಶೇಷ ಮತ್ತು ದುಬಾರಿ ಸೀರೆ ಗಿಫ್ಟ್ ನೀಡಿದ ನಟಿ
ನಟಿ ರಮ್ಯಾ ಸಿನಿಮಾಗಳಿಂದ ಇದೀಗ ದೂರವಾಗಿ ವರ್ಷಗಳೇ ಕಳೆದಿದೆ. ಆದರೂ ಸ್ಯಾಂಡಲ್‌ವುಡ್ ಮಂದಿಯ ನಂಟನು ಬಿಟ್ಟಿಲ್ಲ. ಅದೇನೆ ಕಾರ್ಯಕ್ರಮ ಇದ್ದರೂ ಬಂದು ಹೋಗುವ ರಮ್ಯಾ ಅಮೂಲ್ಯ ಬೇಬಿ ಶವರ್‌ಗೂ ಆಗಮಿಸಿದ್ದಾರೆ. ಅಲ್ಲದೇ ಮುದ್ದು ಅಮೂಲ್ಯಾಗೆ ವಿಶೇಷವಾದ ಸೀರೆ ಒಂದನ್ನು ತಂದಿದ್ದಾರೆ. ಸೀರೆಯೊಂದಿಗೆ ಗ್ರೀಟಿಂಗ್ ಕಾರ್ಡ್‌ನಲ್ಲಿ ಶುಭಾಶಯ ಕೂಡ ತಿಳಿಸಿದ್ದಾರೆ ರಮ್ಯಾ . ಅಷ್ಟಕ್ಕೂ ರಮ್ಯಾ ಅವರು ಅಮೂಲ್ಯಾಗೆ ಕೊಟ್ಟಿರುವ ಸೀರೆಯ ಸ್ಪೆಷಾಲಿಟಿ ಏನು ಗೊತ್ತಾ?

ಈ ಸೀರೆಯ ವಿಶೇಷತೆ ಏನು ನೋಡಿ !
ರಮ್ಯಾ ಅಮೂಲ್ಯಾಗೆ ಪ್ರತಿಷ್ಟಿತ ಮತ್ತು ಸಾಕಷ್ಟು ವರ್ಷಗಳಿಂದಲೂ ಗ್ರಾಹಕರ ವಿಶ್ವಾಸ ಸಂಪಾದಿಸಿರುವ ಕನಕವಲ್ಲಿ ಬ್ರ್ಯಾಂಡ್‌ನ ಸೀರೆ. ಕನಕವಲ್ಲಿ ಸೀರೆ ಯಲ್ಲಿ ಸಾಕಷ್ಟು ಡಿಸೈನ್‌ಗಳು ಮತ್ತು ಮೆಟೀರಿಯಲ್ ಸೀರೆಗಳು ಲಭ್ಯ. ಸಾಕಷ್ಟು ಬಾಲಿವುಡ್ ಸೆಲೆಬ್ರೆಟಿಗಳಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳು ಈ ಬ್ರ್ಯಾಂಡ್‌ನ ಸೀರೆಯನ್ನು ಇಷ್ಟ ಪಟ್ಟು ಕೊಂಡುಕೊಳ್ಳುತ್ತಾರೆ. ಹಾಗೇ ಕನಕವಲ್ಲಿ ಸೀರೆಗಳು ಬಹಳ ದುಬಾರಿ ಕೂಡ ಹೌದು. ಒಂದು ಸೀರೆಗೆ ಕಮ್ಮಿ ಎಂದರೂ ಹತ್ತು ಸಾವಿರದ ಮೇಲೇಯೆ. ಹೀಗಾಗಿ ರಮ್ಯಾ ಅಮೂಲ್ಯಾಗೆ ಈ ಸ್ಪೆಷಲ್ ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದು, ಅಮೂಲ್ಯ ಕೂಡ ಈ ಸೀರೆಯನ್ನು ಮೆಚ್ಚಿಕೊಂಡಿದ್ದಾರೆ. ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿಕೊಂಡಿರುವ ಅಮೂಲ್ಯ "ಧನ್ಯವಾದಗಳು ರಮ್ಯಾ ಮೇಡಂ. ನೀವು ನಮ್ಮ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ನನ್ನ ದಿನವನ್ನು ಮತ್ತಷ್ಟು ಖುಷಿ ಮಾಡಿದೆ. ನೀವು ನೀಡಿದ ಸೀರೆ ತುಂಬ ಇಷ್ಟವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಜೀವನದಲ್ಲೆ ಮರೆಯಲ್ಲಾ ಎಂದಿದ್ದ ರಚಿತಾ ರಾಮ್
ರಮ್ಯಾ ಅವರು ಕೇವಲ ಅಮೂಲ್ಯಗೆ ಮಾತ್ರವಲ್ಲಿ ನಟಿ ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಅವರಿಗೆ ಸೀರೆಯನ್ನು ನೀಡಿದ್ದರು. ಖಾಸಗೀ ಸಂದರ್ಶನದಲ್ಲಿ ಮಾತನಾಡುತ್ತ ರಚಿತಾ ರಾಮ್ ಇದನ್ನು ರಿವೀಲ್ ಮಾಡಿದ್ರು. ನಟಿ ರಚಿತಾ , ಬರ್ತ್‌ಡೇ ಉಡುಗೊರೆ ಜೊತೆಗೆ ಇತ್ತೀಚೆಗೆ ರಮ್ಯಾ ಅವರಿಂದ ನನಗೆ ವಿಶೇಷವಾದ ಉಡುಗೊರೆ ಒಂದು ಬಂದಿದೆ. ಅದನ್ನು ನಾನು ಎಲ್ಲೂ ರಿವೀಲ್ ಮಾಡಿಲ್ಲ. ರಮ್ಯಾ ಅವರು ಕಳುಹಿಸಿರುವ ಈ ಉಡುಗೊರೆ ನನ್ನ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ. ಅಷ್ಟು ಸ್ಪೆಷಲ್ ಉಡುಗೊರೆ ಅದು. ಅದನ್ನು ಸಮಯ ಸಂದರ್ಭ ಬಂದಾಗ ಖಂಡಿತಾ ರಿವೀಲ್ ಮಾಡುತ್ತೇನೆ. ಈಗ ನಾನು ಅದರ ಬಗ್ಗೆ ಏನು ಹೇಳಲ್ಲ ಎಂದಿದ್ದರು. ತದನಂತರವೇ ಗೊತ್ತಾಗಿದ್ದು ಅದು ಸೀರೆ ಅಂತ.

ರಮ್ಯಾ ಅವರನ್ನು ಸಿನಿಮಾದಲ್ಲಿ ನೋಡಲು ಕಾಯುತ್ತಿದ್ದಾರೆ ಫ್ಯಾನ್ಸ್
ಎಲ್ಲರಿಗೂ ತಿಳಿದಿರುವಂತೆ ನಟಿ ರಮ್ಯಾ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ವರ್ಷಗಳೇ ಕಳೆದಿದೆ. ಈಗಲೂ ಕೂಡ ಕನ್ನಡ ಪ್ರೇಕ್ಷಕರು ರಮ್ಯಾ ಅವರನ್ನು ಸಿನಿಮಾದಲ್ಲಿ ನೋಡಲು ಕಾಯುತ್ತಿದ್ದಾರೆ. ಅಂತೆಯೇ ನಟಿ ಅಮೂಲ್ಯ ಅವರ ಆಸೆ ಕೂಡ ಅದೇ ಆಗಿದೆ. ಹೀಗಾಗಿ ಅಭಿಮಾನಿಗಳು ರಮ್ಯಾ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ.


Click it and Unblock the Notifications











