»   » ವಿಭಿನ್ನವಾಗಿ ಬರ್ತ್ ಡೇ ಆಚರಿಸ್ತಾರಂತೆ, ಮೋಹಕ ತಾರೆ..!

ವಿಭಿನ್ನವಾಗಿ ಬರ್ತ್ ಡೇ ಆಚರಿಸ್ತಾರಂತೆ, ಮೋಹಕ ತಾರೆ..!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು, ವಿಭಿನ್ನ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ. ನವೆಂಬರ್ 29 ರಂದು ಲಕ್ಕಿ ಸ್ಟಾರ್ ರಮ್ಯಾ ಅವರ ಹುಟ್ಟುಹಬ್ಬವಿದೆ. ಆದ್ದರಿಂದ ರಮ್ಯಾ ಅವರು ಈ ಸಲದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ನಟಿ ರಮ್ಯಾ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದು, 'ನನಗೆ ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕೆಂಬ ಆಸೆ ಏನು ಇಲ್ಲ. ಆದರೆ ನನಗೆ ನಿಮ್ಮನ್ನು ಭೇಟಿ ಮಾಡಬೇಕು ಎನ್ನುವ ಆಸೆಯಿಂದ ನವೆಂಬರ್ 28 ರಂದು, ಆದಿತ್ಯವಾರ 3 ಘಂಟೆಗೆ ನಿಮ್ಮೆಲ್ಲರನ್ನು ಭೇಟಿಯಾಗಬೇಕು ಎಂದು ಯೋಜನೆ ಹಾಕಿಕೊಂಡಿದ್ದೇನೆ.[ಚಿತ್ರಗಳು: ಆಕರ್ಷಕ ಲುಕ್ ನಲ್ಲಿ ಮಿಂಚುತ್ತಿರುವ ಸ್ಯಾಂಡಲ್ ವುಡ್ ಕ್ವೀನ್.!]

Actress Ramya special plan for her birthday on November 29th

ನೀವೆಲ್ಲರೂ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ ಎಂದು ನಾನು ನಂಬಿದ್ದೇನೆ. ಎಲ್ಲರೂ ನವೆಂಬರ್ 28 ರಂದು ಭೇಟಿಯಾಗೋಣ ಎಂದು ನಟಿ ರಮ್ಯಾ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.ಸ್ವಲ್ಪ ದಿನಗಳ ಹಿಂದೆಯಷ್ಟೆ ಲಕ್ಕಿ ಸ್ಟಾರ್ ರಮ್ಯಾ ಅವರು ತಮ್ಮ ಮನಮೋಹಕ ಫೊಟೋಗಳನ್ನು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಅಭಿಮಾನಿಗಳು ಲೈಕ್ ಹಾಗೂ ಶೇರ್ ಮಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು.

Thank you for the wonderful, kind comments, after a long time it was a delight to see some positive messages on my page....

Posted by Ramya on Wednesday, November 18, 2015

ಒಟ್ನಲ್ಲಿ ನಾಪತ್ತೆಯಾಗಿದ್ದ ಚಂದನವನದ ಮೋಹಕ ತಾರೆ ರಮ್ಯಾ ಅವರು ಮತ್ತೆ ತಮ್ಮ ದರುಶನವನ್ನು ಫೇಸ್ ಬುಕ್ಕ್ ಮೂಲಕ ಅಭಿಮಾನಿಗಳಿಗೆ ನೀಡಿದ್ದು, ಅಭಿಮಾನಿ ದೇವರುಗಳು ಫುಲ್ ಖುಷ್ ಆಗಿದ್ದಾರೆ.[ಕಬ್ಬನ್ ಪಾರ್ಕ್ ನಲ್ಲಿ ರಮ್ಯಾ ಮೇಡಂ ವಾಕಿಂಗ್-ಜಾಗಿಂಗ್]

Actress Ramya special plan for her birthday on November 29th

ಜೊತೆಗೆ ರಮ್ಯ ಅವರು ಸ್ಪೆಷಲ್ ಆಗಿ ನವೆಂಬರ್ 28 ರಂದು ಹಮ್ಮಿಕೊಂಡಿರುವ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನೀವು ಭಾಗವಹಿಸಿ.

English summary
Kannada Actress Ramya special plan for her birthday on November 29th. And She is conduct one session on 28th November at 3PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada