ಸಂಯುಕ್ತಾ ಹೆಗ್ಡೆ ಮೇಲೆ ನೈತಿಕ ಪೊಲೀಸ್‌ಗಿರಿ: ನಟಿ ರಮ್ಯಾ ಹೇಳಿದ್ದು ಹೀಗೆ
ನಟಿ ಸಂಯುಕ್ತಾ ಹೆಗ್ಡೆ ಹಾಗೂ ಗೆಳೆಯರ ವಿರುದ್ಧ ಮಹಿಳೆಯೊಬ್ಬರು ಹಲ್ಲೆ ಮಾಡಿರುವ ಘಟನೆ ಹಾಗೂ ಅದರ ವಿಡಿಯೋ ಸಖತ್ ವೈರಲ್ ಆಗಿದ್ದು, ಮಹಿಳೆಯ ವರ್ತನೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ.
ಸಂಯುಕ್ತಾ ಹೆಗಡೆ ಹಾಗೂ ಅವರ ಇಬ್ಬರು ಗೆಳತಿಯರು ಪಾರ್ಕ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಒಬ್ಬ ಮಹಿಳೆ ಹಾಗೂ ಯುವಕರ ಗುಂಪೊಂದು ಬಂದು, ಸಂಯುಕ್ತಾ ತೊಟ್ಟಿದ್ದ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬೆದರಿಕೆ ಹಾಕಿದೆ. ಮಹಿಳೆಯೊಬ್ಬರಂತೂ ಸಂಯುಕ್ತಾ ಗೆಳತಿಗೆ ಹೊಡೆದಿದ್ದಾರೆ.
ಮಹಿಳೆ ಹಲ್ಲೆ ಮಾಡಿದ ವಿಡಿಯೋ ಹಾಗೂ ಆ ಇಡೀಯ ಘಟನೆಯವನ್ನು ಸಂಯುಕ್ತಾ ಹೆಗ್ಡೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಸಂಯುಕ್ತಾ ಹೆಗ್ಡೆ ವಿರುದ್ಧ ನೈತಿಕ ಪೊಲೀಸ್‌ಗಿರಿಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ರಾಜಕಾರಣಿಗಳು, ನಟ-ನಟಿಯರು ಸಂಯುಕ್ತಾ ಹೆಗ್ಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಟಿ ರಮ್ಯಾ, ಸಂಯುಕ್ತಾ ಹೆಗ್ಡೆಗೆ ಬೆಂಬಲ
ನಟಿ, ರಾಜಕಾರಣಿ ರಮ್ಯಾ ಸಹ ಸಂಯುಕ್ತಾ ಹೆಗ್ಡೆಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, 'ಸಂಯುಕ್ತಾ ಹೆಗ್ಡೆಯ ಪೂರ್ಣ ವಿಡಿಯೋ ನಾನು ನೋಡಿದೆ. ಸಂಯುಕ್ತಾ ಹೆಗ್ಡೆ ಹಾಗೂ ಗೆಳತಿಯರನ್ನು ಜನ ನೆಡಿಸಿಕೊಂಡ ರೀತಿ ನೋಡಿ ನನಗೆ ಭಯವಾಯಿತು' ಎಂದಿದ್ದಾರೆ ನಟಿ ರಮ್ಯಾ.

ನೈತಿಕ ಪೊಲೀಸ್‌ಗಿರಿ ಅಕ್ಷಮ್ಯ
ಕಾರಣ ಏನಾದರೂ, ಯಾವುದಾದರೂ ಇರಬಹುದು ಆದರೆ ಹೊಡೆಯುವುದು, ಬೈಯ್ಯುವುದು, ನೈತಿಕ ಪೊಲೀಸ್‌ಗಿರಿ ಮಾಡುವುದು ಕಾನೂನಿಗೆ ವಿರುದ್ಧ, ವ್ಯಕ್ತಿಗಳ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ಆಗಬಾರದು ಎಂದಿದ್ದಾರೆ ನಟಿ ರಮ್ಯಾ.

ಶೋಭಾ ಕರಂದ್ಲಾಜೆ ಸಹ ಬೆಂಬಲ
ನಟಿ ಸಂಯುಕ್ತಾ ಹೆಗ್ಡೆಗೆ ಸಾಕಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ. ಶೋಭಾ ಕರಂದ್ಲಾಜೆ ಸಹ ಸಂಯುಕ್ತಾ ಪರ ಟ್ವೀಟ್ ಮಾಡಿದ್ದಾರೆ. ಸಂಯುಕ್ತಾ ಹಗ್ಡೆ ಮೇಲೆ ಹಲ್ಲೆ ಮಾಡಿದ ಕವಿತಾ ರೆಡ್ಡಿ ಕಾಂಗ್ರೆಸ್ ಸದಸ್ಯೆ ಎಂದು ಹೇಳಲಾಗುತ್ತಿದೆ.
Recommended Video

ಸಂಯುಕ್ತಾ ಹೆಗ್ಡೆಗೆ ಬೆಂಬಲ ಸೂಚಿಸಿದ್ದಾರೆ
ಸಿನಿಮಾ ರಂಗದ ಹಲವರು ಸಂಯುಕ್ತಾ ಹೆಗ್ಡೆಗೆ ಬೆಂಬಲ ಸೂಚಿಸಿದ್ದಾರೆ. ನಟ ಜಗ್ಗೇಶ್ ರಿಂದ ಹಿಡಿದು, ಹಲವು ನಟಿಯರು, ಪರಭಾಷೆ ನಟಿಯರೂ ಸಹ ಸಂಯುಕ್ತಾ ಹೆಗ್ಡೆಗೆ ಬೆಂಬಲ ಸೂಚಿಸಿದ್ದಾರೆ. ನೈತಿಕ ಪೊಲೀಸ್ ಗಿರಿಯನ್ನು ಖಂಡಿಸಿದ್ದಾರೆ.


Click it and Unblock the Notifications











