For Quick Alerts
  ALLOW NOTIFICATIONS  
  For Daily Alerts

  ಸಂಯುಕ್ತಾ ಹೆಗ್ಡೆ ಮೇಲೆ ನೈತಿಕ ಪೊಲೀಸ್‌ಗಿರಿ: ನಟಿ ರಮ್ಯಾ ಹೇಳಿದ್ದು ಹೀಗೆ

  |

  ನಟಿ ಸಂಯುಕ್ತಾ ಹೆಗ್ಡೆ ಹಾಗೂ ಗೆಳೆಯರ ವಿರುದ್ಧ ಮಹಿಳೆಯೊಬ್ಬರು ಹಲ್ಲೆ ಮಾಡಿರುವ ಘಟನೆ ಹಾಗೂ ಅದರ ವಿಡಿಯೋ ಸಖತ್ ವೈರಲ್ ಆಗಿದ್ದು, ಮಹಿಳೆಯ ವರ್ತನೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ.

  ಸಂಯುಕ್ತಾ ಹೆಗಡೆ ಹಾಗೂ ಅವರ ಇಬ್ಬರು ಗೆಳತಿಯರು ಪಾರ್ಕ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಒಬ್ಬ ಮಹಿಳೆ ಹಾಗೂ ಯುವಕರ ಗುಂಪೊಂದು ಬಂದು, ಸಂಯುಕ್ತಾ ತೊಟ್ಟಿದ್ದ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬೆದರಿಕೆ ಹಾಕಿದೆ. ಮಹಿಳೆಯೊಬ್ಬರಂತೂ ಸಂಯುಕ್ತಾ ಗೆಳತಿಗೆ ಹೊಡೆದಿದ್ದಾರೆ.

  ನೈತಿಕ ಪೊಲೀಸ್‌ಗಿರಿ: ಕಿರಿಕ್ ಹುಡುಗಿ ಮೇಲೆ ಗುಂಪು ದಾಳಿ, ಹಲ್ಲೆ ಆರೋಪನೈತಿಕ ಪೊಲೀಸ್‌ಗಿರಿ: ಕಿರಿಕ್ ಹುಡುಗಿ ಮೇಲೆ ಗುಂಪು ದಾಳಿ, ಹಲ್ಲೆ ಆರೋಪ

  ಮಹಿಳೆ ಹಲ್ಲೆ ಮಾಡಿದ ವಿಡಿಯೋ ಹಾಗೂ ಆ ಇಡೀಯ ಘಟನೆಯವನ್ನು ಸಂಯುಕ್ತಾ ಹೆಗ್ಡೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಸಂಯುಕ್ತಾ ಹೆಗ್ಡೆ ವಿರುದ್ಧ ನೈತಿಕ ಪೊಲೀಸ್‌ಗಿರಿಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ರಾಜಕಾರಣಿಗಳು, ನಟ-ನಟಿಯರು ಸಂಯುಕ್ತಾ ಹೆಗ್ಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

  ನಟಿ ರಮ್ಯಾ, ಸಂಯುಕ್ತಾ ಹೆಗ್ಡೆಗೆ ಬೆಂಬಲ

  ನಟಿ ರಮ್ಯಾ, ಸಂಯುಕ್ತಾ ಹೆಗ್ಡೆಗೆ ಬೆಂಬಲ

  ನಟಿ, ರಾಜಕಾರಣಿ ರಮ್ಯಾ ಸಹ ಸಂಯುಕ್ತಾ ಹೆಗ್ಡೆಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, 'ಸಂಯುಕ್ತಾ ಹೆಗ್ಡೆಯ ಪೂರ್ಣ ವಿಡಿಯೋ ನಾನು ನೋಡಿದೆ. ಸಂಯುಕ್ತಾ ಹೆಗ್ಡೆ ಹಾಗೂ ಗೆಳತಿಯರನ್ನು ಜನ ನೆಡಿಸಿಕೊಂಡ ರೀತಿ ನೋಡಿ ನನಗೆ ಭಯವಾಯಿತು' ಎಂದಿದ್ದಾರೆ ನಟಿ ರಮ್ಯಾ.

  ನೈತಿಕ ಪೊಲೀಸ್‌ಗಿರಿ ಅಕ್ಷಮ್ಯ

  ನೈತಿಕ ಪೊಲೀಸ್‌ಗಿರಿ ಅಕ್ಷಮ್ಯ

  ಕಾರಣ ಏನಾದರೂ, ಯಾವುದಾದರೂ ಇರಬಹುದು ಆದರೆ ಹೊಡೆಯುವುದು, ಬೈಯ್ಯುವುದು, ನೈತಿಕ ಪೊಲೀಸ್‌ಗಿರಿ ಮಾಡುವುದು ಕಾನೂನಿಗೆ ವಿರುದ್ಧ, ವ್ಯಕ್ತಿಗಳ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ಆಗಬಾರದು ಎಂದಿದ್ದಾರೆ ನಟಿ ರಮ್ಯಾ.

  ಸಂಯುಕ್ತ ಹೆಗ್ಡೆ ಸಿನಿಮಾ ಮೇಲೆ ರಜನಿಕಾಂತ್ ಅಭಿಮಾನಿಗಳ ಆಕ್ರೋಶಸಂಯುಕ್ತ ಹೆಗ್ಡೆ ಸಿನಿಮಾ ಮೇಲೆ ರಜನಿಕಾಂತ್ ಅಭಿಮಾನಿಗಳ ಆಕ್ರೋಶ

  ಶೋಭಾ ಕರಂದ್ಲಾಜೆ ಸಹ ಬೆಂಬಲ

  ಶೋಭಾ ಕರಂದ್ಲಾಜೆ ಸಹ ಬೆಂಬಲ

  ನಟಿ ಸಂಯುಕ್ತಾ ಹೆಗ್ಡೆಗೆ ಸಾಕಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ. ಶೋಭಾ ಕರಂದ್ಲಾಜೆ ಸಹ ಸಂಯುಕ್ತಾ ಪರ ಟ್ವೀಟ್ ಮಾಡಿದ್ದಾರೆ. ಸಂಯುಕ್ತಾ ಹಗ್ಡೆ ಮೇಲೆ ಹಲ್ಲೆ ಮಾಡಿದ ಕವಿತಾ ರೆಡ್ಡಿ ಕಾಂಗ್ರೆಸ್‌ ಸದಸ್ಯೆ ಎಂದು ಹೇಳಲಾಗುತ್ತಿದೆ.

  Recommended Video

  ದೀಪು ಸರ್ ಅಂತ ಕರೆಯೋದು ನಂಗೆ ಅಭ್ಯಾಸ | Sudheendra Venkatesh | Kiccha Sudeep | Filmibeat Kannada
  ಸಂಯುಕ್ತಾ ಹೆಗ್ಡೆಗೆ ಬೆಂಬಲ ಸೂಚಿಸಿದ್ದಾರೆ

  ಸಂಯುಕ್ತಾ ಹೆಗ್ಡೆಗೆ ಬೆಂಬಲ ಸೂಚಿಸಿದ್ದಾರೆ

  ಸಿನಿಮಾ ರಂಗದ ಹಲವರು ಸಂಯುಕ್ತಾ ಹೆಗ್ಡೆಗೆ ಬೆಂಬಲ ಸೂಚಿಸಿದ್ದಾರೆ. ನಟ ಜಗ್ಗೇಶ್ ರಿಂದ ಹಿಡಿದು, ಹಲವು ನಟಿಯರು, ಪರಭಾಷೆ ನಟಿಯರೂ ಸಹ ಸಂಯುಕ್ತಾ ಹೆಗ್ಡೆಗೆ ಬೆಂಬಲ ಸೂಚಿಸಿದ್ದಾರೆ. ನೈತಿಕ ಪೊಲೀಸ್ ಗಿರಿಯನ್ನು ಖಂಡಿಸಿದ್ದಾರೆ.

  ಹೊಸ ಫೋಟೋಶೂಟ್ ನಲ್ಲಿ ನಟಿ ಸಂಯುಕ್ತಾ ಹೆಗ್ಡೆ ಮಿಂಚಿಂಗ್ಹೊಸ ಫೋಟೋಶೂಟ್ ನಲ್ಲಿ ನಟಿ ಸಂಯುಕ್ತಾ ಹೆಗ್ಡೆ ಮಿಂಚಿಂಗ್

  English summary
  Actress Ramya supports actress Samyuktha Hegde who has been attacked by people name of moral policing.
  Sunday, September 6, 2020, 13:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X