twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾರಂಗದಲ್ಲಿ ಲಿಂಗ ತಾರತಮ್ಯ: ಕರಾಳ ಮುಖ ಬಿಚ್ಚಿಟ್ಟ ನಟಿ ರಮ್ಯಾ!

    |

    ಮೋಹಕ ತಾರೆ ನಟಿ ರಮ್ಯಾ ಸಿನಿಮಾರಂಗಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಈಗ ಸಿನಿಮಾರಂಗದಲ್ಲಿ ಇರುವ ಲಿಂಗ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾರಂಗದಲ್ಲಿ ನಟರಿಗೆ ಇರುವ ಮಾನ್ಯತೆ, ನಟಿಯರಿಗೆ ಇಲ್ಲ. ಇದು ಬದಲಾಗಬೇಕು ಎಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

    ಸಿನಿಮಾರಂಗದಲ್ಲಿ ನಟಿಯರು ಹೇಗೆ ಇರಬೇಕು ಎನ್ನುವ ಮಾನದಂಡವನ್ನು ನಿಗದಿಪಡಿಸಿರುವುದು ಪುರುಷರು. ಮಹಿಳೆಯರು ನೀವು ನೀವಾಗಿರಲು ಬೇರೆ ದಾರಿಯನ್ನು ಅರಿತಿರಬೇಕು. ಜಗತ್ತು ನೀವು ಹೇಗಿರಬೇಕು ಎಂದು ನಿರ್ಧರಿಸಲು ಬಿಡಬೇಡಿ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಬಣ್ಣದ ಜಗತ್ತಿನ ಕರಾಳ ಮುಖವನ್ನು ನಟಿ ರಮ್ಯಾ ಬಿಚ್ಚಿಟ್ಟಿದ್ದಾರೆ.

    ಜಾಮೀನಿನ ಮೇಲೆ ಹೊರಗಿರುವವ ನನ್ನ ಪ್ರಮಾಣಿಕತೆ ಪ್ರಶ್ನಿಸುತ್ತಾನೆ: ನಲಪಾಡ್‌ಗೆ ರಮ್ಯಾ ಪ್ರತ್ಯುತ್ತರಜಾಮೀನಿನ ಮೇಲೆ ಹೊರಗಿರುವವ ನನ್ನ ಪ್ರಮಾಣಿಕತೆ ಪ್ರಶ್ನಿಸುತ್ತಾನೆ: ನಲಪಾಡ್‌ಗೆ ರಮ್ಯಾ ಪ್ರತ್ಯುತ್ತರ

    Recommended Video

    Ramya | Rakshit Shetty |ಮತ್ತೆ ಸುದ್ದಿಯಾದ ರಕ್ಷಿತ್-ರಮ್ಯಾ ಮದುವೆ ವಿಚಾರ | Rishab shetty

    ಈ ಬಗ್ಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಸಿನಿಮಾರಂಗ ಹೇಗಿದೆ. ಇಲ್ಲಿ ನಟಿಯರನ್ನು ಯಾವ ರೀತಿ ಅಳೆಯಲಾಗುತ್ತದೆ ಎನ್ನುವ ಬಗ್ಗೆ ನೇರವಾಗಿ, ಖಡಕ್ ಆಗಿ ಹೇಳಿದ್ದಾರೆ. ನಟಿ ರಮ್ಯಾ ಹಂಚಿಕೊಂಡ ಪೋಸ್ಟ್ ಹೀಗಿದೆ.

    Actress Ramya Talk About Gender Discrimination In Film Industry

    "ಪುರುಷನಾದವನು ಸಂಪೂರ್ಣವಾಗಿ ತಲೆಕೂದಲು ಉದುರಿದರೂ ಟೋಪಿ ಹಾಕಿಕೊಳ್ಳಬಹುದು. ಮುಖದಲ್ಲಿನ ಒಂದೊಂದು ಗಲ್ಲವೂ 5 ಕೆಜಿ ಇರಬಹುದು. 65 ವರ್ಷವಾದರೂ ಆತ ಹೀರೊ ಆಗುತ್ತಾನೆ. ಆದರೆ ಇದೇ ಮಹಿಳೆಗೆ ಅನ್ವಯವಾಗಿ ಆಕೆ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯಲಾಗುತ್ತದೆ." ಎಂದು ರಮ್ಯಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ರಮ್ಯಾ ಟವೆಲ್ ಹಾಕಲು ಬಂದಿದ್ದಾರೆ: ನಲಪಾಡ್ ಕಿಡಿರಮ್ಯಾ ಟವೆಲ್ ಹಾಕಲು ಬಂದಿದ್ದಾರೆ: ನಲಪಾಡ್ ಕಿಡಿ

    ಅಷ್ಟಕ್ಕೂ ನಟಿ ರಮ್ಯಾ ಹೀಗೆ ಇದ್ದಕ್ಕಿದ್ದ ಹಾಗೆ ಸಿನಿಮಾರಂಗ ಮತ್ತು ಲಿಂಗತಾರತಮ್ಯದ ಬಗ್ಗೆ ಮಾತನಾಡಲು ಕಾರಣ ಯುವ ನಟಿ ಚೇತನಾ ರಾಜ್ ಸಾವು. ಚೇತನಾ ರಾಜ್ ನಿಧನದ ಸುದ್ದಿ ಕೇಳಿ ರಮ್ಯಾ ಅದೇ ಪೋಸ್ಟ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. "ಪ್ಲಾಸ್ಟಿಕ್ ಸರ್ಜರಿಯಿಂದ ಯುವ ನಟಿ ನಿಧನರಾಗಿರುವ ಸುದ್ದಿ ತಿಳಿಯಿತು. ನನ್ನ ಕಾಲಿನ ಟ್ಯೂಮರ್ ತೆಗೆಸಿದ ಬಳಿಕ ನಾನು ದಪ್ಪಗಾದೆ. ನಾನು ಈಗ ವೇಟ್ ಲಾಸ್ ಜರ್ನಿಯಲ್ಲಿದ್ದೇನೆ. ಆದರೆ ನನಗೆ ಜೀವ ಕಳೆದುಕೊಂಡ ಈ ನಟಿ ಬಗ್ಗೆ ಸಹಾನುಭೂತಿಯಿದೆ." ಎಂದು ಬರೆದುಕೊಂಡಿದ್ದಾರೆ.

    ಇನ್ನು ಈ ಸಿನಿಮಾರಂಗ ನಟಿಯರ ವಿಚಾರದಲ್ಲಿ ಯೋಚಿಸುವ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಇನ್ನೂ ಸಾಕಷ್ಟು ಸುಧಾರಣೆ ಆಗಬೇಕು. ಇಂಡಸ್ಟ್ರಿ ಬದಲಾಗಬೇಕು. ಈ ವಿಷಯದ ಕುರಿತು ಮಹಿಳೆಯರು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ತಮ್ಮ ಸಾಲುಗಳಲ್ಲಿ ರಮ್ಯಾ ಬರೆದಿದ್ದಾರೆ.

    English summary
    Actress Ramya Talk About Gender Discrimination In Film Industry, Know More,
    Wednesday, May 18, 2022, 10:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X