ಮೋಹಕ ತಾರೆಗೆ ಹುಟ್ಟು ಹಬ್ಬದ ಸಂಭ್ರಮ: ಅಬ್ಬಬ್ಬಾ ರಮ್ಯಾಗೆ ಇಷ್ಟೊಂದು ವಯಸ್ಸಾಯ್ತಾ?

ಕನ್ನಡ ಸಿನಿಮಾರಂಗದಲ್ಲಿ ಹೆಚ್ಚು ವರ್ಷಗಳ ಕಾಲ ಸಕ್ರಿಯವಾಗದ್ದು, ಸಾಲು ಸಾಲು ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದ ನಟಿಯರಲ್ಲಿ ಮೋಹಕ ತಾರೆ ರಮ್ಯಾ ಕೂಡ ಒಬ್ಬರು. ರಮ್ಯಾ ಎಂದರೆ ಕನ್ನಡಿಗರಿಗೆ ಅದೇನೋ ವಿಶೇಷ ಪ್ರೀತಿ. ಹಾಗಾಗಿ ರಮ್ಯಾ ಸಿನಿಮಾಗಳಿಂದ ದೂರ ಇದ್ದರು ಜನರ ಮನಸ್ಸಿಗೆ ಎಂದಿಗೂ ಹತ್ತಿರ.

ನಟಿ ರಮ್ಯಾಗೆ ಇಂದು(ನವೆಂಬರ್ 29) ಹುಟ್ಟು ಹಬ್ಬದ ಸಂಭ್ರಮ. ತನ್ನ ಹುಟ್ಟು ಹಬ್ಬದ ಪ್ರಯುಕ್ತ ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಜೊತೆಗೆ ರಮ್ಯಾ ತಮ್ಮ ಹುಟ್ಟು ಹಬ್ಬದ ಈ ದಿನ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಮೂಡಲು ಬಿಡದೇ, ತಮ್ಮ ಪೋಸ್ಟ್‌ನಲ್ಲಿ ಅದಕ್ಕೂ ಉತ್ತರ ನೀಡಿದ್ದಾರೆ.

ವಯಸ್ಸು ಎಷ್ಟು ಎನ್ನುವುದನ್ನು ರಿವೀಲ್ ಮಾಡಿದ ನಟಿ ರಮ್ಯಾ!

ಸಾಮಾನ್ಯವಾಗಿ ಸಿನಿಮಾ ತಾರೆಯರು ಅದರಲ್ಲೂ ಸಿನಿಮಾ ನಟಿಯರು ತಮ್ಮ ವಯಸ್ಸನ್ನು ಹೇಳಿಕೊಳ್ಳುವುದಿಲ್ಲ. ಆದರೆ ಕನ್ನಡ ಚಿತ್ರರಂಗದ ಬ್ಯೂಟಿ ಕ್ವೀನ್‌ ಹಾಗಲ್ಲ. ಈ ಬೆಡಗಿ ಎಲ್ಲರಿಗಿಂತ ಕೊಂಚ ಡಿಫ್ರೆಂಟ್. ಹಾಗಾಗಿಯೇ ರಮ್ಯಾ ಈ ತಮ್ಮ ವಯಸ್ಸು ಎಷ್ಟು ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಸದ್ಯ ರಮ್ಯಾಗೆ 39 ವರ್ಷ ವಯಸ್ಸು. ಈ ವಿಚಾರವನ್ನು ಸ್ವತಃ ರಮ್ಯಾ ಹೇಳಿದರೂ ಕೂಡ ನಂಬುವುದು ಅಸಾಧ್ಯವಾಗಿದೆ. ಅಷ್ಟಕ್ಕೂ ಸಾಕಷ್ಟು ಮಂದಿ ಆಕೆಯ ಪೋಸ್ಟ್ ಗೆ ಈ ಬಗ್ಗೆ ಪ್ರಶ್ನೆ ಕೂಡ ಮಾಡಿದ್ದಾರೆ. ಈಗಲೂ ಚೆಂದುಳ್ಳ ಚೆಲುವೆಯಂತಿರುವ ರಮ್ಯಾ ಅವರ ವಯಸ್ಸು 39 ಅಂದರೆ ಅದು ನಂಬಲು ಸಾಧ್ಯವಾಗುತ್ತಿಲ್ಲ. ಸಿನಿಮಾ ರಂಗದಿಂದ ದೂರ ಉಳಿದರುವ ರಮ್ಯಾ ಗ್ಲ್ಯಾಮರಸ್‌ ಲುಕ್ ಕಡಿಮೆ ಆಗಿಲ್ಲ. ಈಕೆ ಎವರ್‌ಗ್ರೀನ್ ಬ್ಯೂಟಿ ಎನ್ನುವುದನ್ನು ಎಲ್ಲರೂ ಒಪ್ಪಲೇ ಬೇಕು.

 ಹುಟ್ಟು ಹಬ್ಬ ಬೇಕೋ-ಬೇಡವೋ ಎಂದು ಪ್ರಶ್ನಿಸಿದ ರಮ್ಯಾ!

ಹುಟ್ಟು ಹಬ್ಬ ಬೇಕೋ-ಬೇಡವೋ ಎಂದು ಪ್ರಶ್ನಿಸಿದ ರಮ್ಯಾ!

ಇನ್ನು ರಮ್ಯಾ ಅವರ ಪೋಸ್ಟ್‌ನಲ್ಲಿ ಹುಟ್ಟು ಹಬ್ಬ ನಿಮಗೆ ಬೇಕೋ ಬೇಡವೋ ಆದರೆ ಅದು ಬರುತ್ತದೆ ಎಂದು ಬರೆದು ಕೊಂಡಿದ್ದಾರೆ. ಅಂದರೆ ಪ್ರತಿ ವರ್ಷವೂ ಹುಟ್ಟು ಬರುತ್ತದೆ. ನೀವು ಬಯಸದೇ ಇದ್ದರೂ ಅದು ಬರುತ್ತದೆ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಜೊತೆಗೆ ತಮಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಇನ್ನು ಈ ಬಾರಿ ಹುಟ್ಟಹಬ್ಬವನ್ನುರಮ್ಯಾ ಅಟ್ಲಾಂಟಿಕ್‌ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಸ್ನೇಹಿತರೊಂದಿಗೆ ರಮ್ಯಾ ಅಲ್ಲೇ ಬೀಡು ಬಿಟ್ಟಿದ್ದಾರೆ. ಕೆಲ ದಿನಗಳಿಂದ ಅಲ್ಲಿನ ಫೋಟೊಗಳನ್ನು ರಮ್ಯಾ ಹಂಚಿಕೊಂಡಿದ್ದಾರೆ. ಇದೀಗ ಹುಟ್ಟು ಹಬ್ಬವನ್ನು ಅಲ್ಲೇ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಚಾರದ ಜೊತೆಗೆ ಎಲ್ಲರೂ ಮಾಸ್ಕ್‌ ಹಾಕಿಕೊಂಡು ಸುರಕ್ಷಿತವಾಗಿರಿ ಎಂದು ಹೇಳುವುದನ್ನು ರಮ್ಯಾ ಮರೆತಿಲ್ಲ.

 ಅಪ್ಪು ಜೊತೆಯಲ್ಲೇ ಕಮ್‌ ಬ್ಯಾಕ್‌ ಮಾಡುವ ಕನಸು ಹೊತ್ತಿದ್ದ ನಟಿ!

ಅಪ್ಪು ಜೊತೆಯಲ್ಲೇ ಕಮ್‌ ಬ್ಯಾಕ್‌ ಮಾಡುವ ಕನಸು ಹೊತ್ತಿದ್ದ ನಟಿ!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನರಾದ ವೇಳೆಯಲ್ಲಿ ರಮ್ಯಾ ಬೆಂಗಳೂರಿಗೆ ಬಂದಿದ್ದರು. ಪುನೀತ್ ಅವರ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡುವಾಗ ಮತ್ತೆ ಚಿತ್ರರಂಗಕ್ಕೆ ಮರಳಬೇಕು ಎಂಬ ಆಸೆ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಕಮ್‌ ಬ್ಯಾಕ್‌ ಮಾಡಿದರೆ ನಟ ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಯಲ್ಲಿಯೇ ನಟಿಸಬೇಕು ಎಂದು ಕೊಂಡಿದ್ದರು. ಅದನ್ನು ರಮ್ಯಾ ಹೇಳಿಕೊಂಡಿದ್ದಾರೆ.

 ರಮ್ಯಾ ಕಮ್‌ ಬ್ಯಾಕ್ ಯಾವಾಗಾ?

ರಮ್ಯಾ ಕಮ್‌ ಬ್ಯಾಕ್ ಯಾವಾಗಾ?

ನಟಿ ರಮ್ಯಾ ಸೋಶಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಏನೇ ವಿಚಾರ ಇರಲಿ ಅಲ್ಲಿ ರಮ್ಯಾ ಮಾತನಾಡುತ್ತಾರೆ. ಈ ಹಿಂದೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ, ಸಿನಿಮಾ ಮಾಡಲು ಆಫರ್ ಬಂದಿವೆ, ಅವುಗಳಿಗೆ ನಾನು ಓಕೆ ಹೇಳಬೇಕೋ, ಬೇಡವೋ ಎಂದು ಯೋಚನೆ ಮಾಡುತ್ತಿದ್ದೇನೆ ಎಂದಿದ್ದರು ರಮ್ಯಾ. ಆದರೆ ಈಗ ಪುನೀತ್‌ ಜೊತೆಗೆ ನಟಿಸುವ ಕನಸು ನನಸಾಗಿಲ್ಲ. ಹಾಗಾಗಿ ರಮ್ಯಾ ಮುಂದೇನು ಮಾಡ್ತಾರೆ?. ಯಾವ ಸಿನಿಮಾದ ಮೂಲಕ ಕಮ್‌ ಬ್ಯಾಕ್‌ ಮಾಡುತ್ತಾರೆ. ಅಥವಾ ಹೀಗೆ ಚಿತ್ರರಂಗದಿಂದ ದೂರ ಇರುತ್ತಾರ ಎನ್ನುವ ಕುತೂಹಲ ಮೂಡಿದೆ.

More from Filmibeat

English summary
Actress Ramya Turn 39 This Year, what special, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X