For Quick Alerts
  ALLOW NOTIFICATIONS  
  For Daily Alerts

  ಫ್ಯಾನ್ಸ್‌ಗೆ ಸಪ್ರೈಸ್‌ ಕೊಡ್ತಾರಂತೆ ರಮ್ಯಾ: ಅಕ್ಟೋಬರ್ 5ಕ್ಕೆ ಮತ್ತೊಂದು ಗುಡ್‌ನ್ಯೂಸ್‌

  |

  ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ತೆರೆ ಕಂಡ ಅನೇಕ ಚಿತ್ರಗಳಿಗೆ ರಮ್ಯಾ ಸಾಥ್‌ ನೀಡಿದ್ದಾರೆ. ನಟಿ ರಮ್ಯಾ ಹೊಸ ಚಿತ್ರಗಳ ಪೋಸ್ಟರ್‌ , ಹಾಡುಗಳನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೇ ಚಿತ್ರ ವೀಕ್ಷಿಸಿದ ಬಳಿಕ ಚಿತ್ರಗಳ ವಿಮರ್ಶೆಗಳನ್ನು ಬರೆಯುವುದಷ್ಟೇ ಅಲ್ಲದೇ, ಸಿನಿಮಾ ವಿಚಾರಗಳಿಗೆ ಸಂಬಂಧಿಸಿದಂತೆ ರಮ್ಯಾ ಪ್ರತಿಕ್ರಿಯಿಸುತ್ತಿರುತ್ತಾರೆ.

  ರಮ್ಯಾ ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡಿರುವುದು ಅಭಿಮಾನಿಗಳಿಗೆ ಸಂತೋಷದ ವಿಚಾರವಾಗಿದೆ. ಗೌರಿ ಗಣೇಶ ಹಬ್ಬದ ದಿನದಂದು ರಮ್ಯಾ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಸಿನಿಮಾ ಕ್ಷೇತ್ರದತ್ತ ಮತ್ತೆ ಮುಖ ಮಾಡಿರುವ ರಮ್ಯಾ ಈ ಬಾರಿ ನಿರ್ಮಾಪಕಿಯಾಗಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಆಪಲ್‌ ಬಾಕ್ಸ್‌ ಸಂಸ್ಥೆಯನ್ನು ಈಗಾಗಲೇ ರಮ್ಯಾ ಎಲ್ಲರಿಗೂ ಪರಿಚಯಿಸಿದ್ದಾರೆ. ಈ ಸಂಸ್ಥೆಯ ಮೂಲಕವೇ ಮುಂದಿನ ಚಿತ್ರಗಳನ್ನು ನಿರ್ಮಿಸುವುದಾಗಿ ತಿಳಿಸಿದ್ದರು.

  ಗುರುವಾರವೇ 'ಕಾಂತಾರ' 75 ಪ್ರೀಮಿಯರ್‌ ಶೋಗಳು ಫಿಕ್ಸ್: ರಮ್ಯಾ ಎಲ್ಲಿ, ಯಾವಾಗ ಸಿನಿಮಾ ನೋಡ್ತಾರೆ?ಗುರುವಾರವೇ 'ಕಾಂತಾರ' 75 ಪ್ರೀಮಿಯರ್‌ ಶೋಗಳು ಫಿಕ್ಸ್: ರಮ್ಯಾ ಎಲ್ಲಿ, ಯಾವಾಗ ಸಿನಿಮಾ ನೋಡ್ತಾರೆ?

  ನಟಿ ರಮ್ಯಾ ನಿರ್ಮಾಣ ಮಾಡುತ್ತಿರುವ ಚಿತ್ರದ ಬಗ್ಗೆ ಸಿನಿ ಪ್ರಿಯರು ಕಾತುರರಾಗಿದ್ದು, ಈ ಬಗ್ಗೆ ಹೊಸ ಅಪ್ಡೇಟ್‌ಗಾಗಿ ಕಾಯುತ್ತಿದ್ದಾರೆ. ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ವೀಕ್ಷಣೆ ಬಳಿಕ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ತುಟಿ ಬಿಚ್ಚಿದ್ದಾರೆ. ಈಗಾಗಲೇ ತಾನು ನಿರೂಪಕಿಯಾಗಿ ಕಂಬ್ಯಾಕ್‌ ಮಾಡುತ್ತೇನೆ ಎಂದಿದ್ದ ರಮ್ಯಾ ಅಕ್ಟೋಬರ್‌ 5 ನಮ್ಮ ಚಿತ್ರದ ಬಗ್ಗೆ ಮಹತ್ತರವಾದ ವಿಚಾರವನ್ನು ಹಂಚಿಕೊಳ್ಳಲಿದ್ದೇವೆ. ಅಲ್ಲಿಯ ವರೆಗೂ ಕಾದಿರಿ ಎಂದಿದ್ದಾರೆ. ನವರಾತ್ರಿಯ ಸಮಯದಲ್ಲೇ ರಮ್ಯಾ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ.

  ನಟಿಯಾಗಿದ್ದ ರಮ್ಯಾ ಮೊದಲ ಬಾರಿಗೆ ನಿರ್ಮಾಪಕಿಯಾಗಿದ್ದು, ತಮ್ಮ ನಿರ್ಮಾಣ ಸಂಸ್ಥೆ ಆಪಲ್‌ ಬಾಕ್ಸ್‌ ಮೂಲಕ ಎರಡು ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ರಮ್ಯಾ ಅವರೇ ಹೇಳಿಕೊಂಡಿದ್ದರು. ರಮ್ಯಾ ನಿರ್ಮಾಣದ ಎರಡೂ ಚಿತ್ರಗಳು ಕೆಆರ್‌ಜಿ ಸಂಸ್ಥೆಯ ವಿತರಣೆ ಮೂಲಕ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ. ಅಲ್ಲದೇ ಆಪಲ್‌ ಬಾಕ್ಸ್‌ ಸಂಸ್ಥೆಯಿಂದ ಕನ್ನಡದಲ್ಲಿ ಓಟಿಟಿ ಫ್ಲ್ಯಾಟ್‌ ಫಾರಂ ಸಿನಿಮಾಗಳು ಹಾಗೂ ವೆಬ್‌ ಸೀರಿಸಿ್‌ಗಳು ನಿರ್ಮಾಣಗೊಳ್ಳಲಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಉತ್ತಮ ನಿರ್ಮಾಣ ಸಂಸ್ಥೆಯನ್ನು ನೀಡಲು ರಮ್ಯಾ ಮುಂದಾಗಿದ್ದಾರೆ.

  ಇನ್ನು ಹೊಂಬಾಳೆ ಫಿಲ್ಮಂ ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಮ್ಯಾ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾವನ್ನು ಪ್ರೀಮಿಯರ್‌ ಫಸ್ಟ್ ಶೋ ನೋಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಾಂತಾರ ಚಿತ್ರದ ಬಗ್ಗೆ ಮಾತನಾಡಲು ನನಗೆ ಮಾತುಗಳೇ ಬರುತ್ತಿಲ್ಲ. ಅಷ್ಟು ಅದ್ಭುತವಾಗಿದೆ ಸಿನಿಮಾ. ಚಿತ್ರದ ಕೊನೆಯ ಹತ್ತು ನಿಮಿಷದಲ್ಲಿ ರಿಷಬ್‌ ಶೆಟ್ಟಿ ಅಂತಾನೇ ಗೊತ್ತಾಗಲ್ಲ ಅಷ್ಟು ಚೆನ್ನಾಗಿ ನಟನೆ ಮಾಡಿದ್ದಾರೆ. ವಿಜಯ್‌ ಕಿರಂದೂರ್‌ ಅವರು ಕೆಜಿಎಫ್‌ ಬಳಿಕ ಮತ್ತೊಂದು ಸೂಪರ್‌ ಸಿನಿಮಾವನ್ನು ಕೊಟ್ಟಿದ್ದಾರೆ ಖಂಡಿತವಾಗಿಯೂ ಎಲ್ಲರೂ ಈ ಚಿತ್ರವನ್ನು ನೋಡಲೇ ಬೇಕು ಎಂದಿದ್ದಾರೆ. ಈ ರೀತಿಯ ಚಿತ್ರಗಳು ಹಿಂದೆ ಬಂದಿಲ್ಲ. ಮುಂದೆ ಈ ರೀತಿಯ ಚಿತ್ರಗಳನ್ನು ಮಾಡುವುದು ಕಷ್ಟ. ಅಲ್ಲದೇ ಈ ರೀತಿಯ ಕತೆಗಳು ತುಂಬಾ ವಿರಳ ಎಂದು ಕಾಂತಾರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  Sandalwood actress actress Ramya wants too share special news on October 5th with her fans.
  Friday, September 30, 2022, 14:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X