For Quick Alerts
  ALLOW NOTIFICATIONS  
  For Daily Alerts

  'ಸಿನಿಮಾ ಮುಗಿದು ಹೋದ ಅಧ್ಯಾಯ': ಅಭಿಮಾನಿಗಳ ಆಸೆಗೆ ಮತ್ತೆ ತಣ್ಣೀರೆರಚಿದ ರಮ್ಯಾ

  |

  ಮೋಹಕ ತಾರೆ ರಮ್ಯಾ ಮತ್ತೆ ಚಿತ್ರರಂಗ ಬರ್ತಾರೆ ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಉಳಿದುಕೊಂಡಿದೆ. ಪ್ರಸ್ತುತ, ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ನಟಿ ಮತ್ತೆ ಸ್ಯಾಂಡಲ್‌ವುಡ್ ಪ್ರವೇಶಿಸಬಹುದು. ಮತ್ತೆ ಬೆಳ್ಳಿತೆರೆಯಲ್ಲಿ ರಾರಾಜಿಸಬಹುದು ಎಂಬ ಸಣ್ಣ ಆಸೆ ಪ್ರತಿಯೊಬ್ಬ ಅಭಿಮಾನಿ ಮನದಲ್ಲಿ ಇದೆ.

  ಅಭಿಮಾನಿಗಳು ಏನೇ ಪ್ರಶ್ಮೆ ಕೇಳಿದ್ರೂ ಉತ್ತರ ಕೊಡ್ತಾರೆ - ರಮ್ಯಾ | Filmibeat Kannada

  ಈ ಆಸೆ ಸದ್ಯಕ್ಕೆ ಈಡೇರಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಇದು ಅಸಾಧ್ಯ ಎಂದು ಸ್ವತಃ ನಟಿಯೇ ಹೇಳಿಕೊಂಡಿದ್ದಾರೆ. ಸಿನಿಮಾ ಜಗತ್ತಿನಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ರಮ್ಯಾ ''ಸಿನಿಮಾ ಎನ್ನುವುದು ಮುಗಿದು ಹೋದ ಅಧ್ಯಾಯ'' ಎಂದು ಹೇಳುವ ಮೂಲಕ ತಮ್ಮ ಫ್ಯಾನ್ಸ್ ಆಸೆಗೆ ಮತ್ತೆ ತಣ್ಣೀರೆರಚಿದ್ದಾರೆ. ಮುಂದೆ ಓದಿ...

  ಯಾವಾಗ ಚಿತ್ರರಂಗಕ್ಕೆ ಮರಳುತ್ತೀರಾ?

  ಯಾವಾಗ ಚಿತ್ರರಂಗಕ್ಕೆ ಮರಳುತ್ತೀರಾ?

  ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ಮಾಡಿದ ನಟಿ ರಮ್ಯಾಗೆ ''ಮತ್ತೆ ಯಾವಾಗ ಸಿನಿಮಾಗೆ ವಾಪಸ್ ಆಗ್ತೀರಾ'' ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿರುವ ನಟಿ ''ಸಿನಿಮಾ ಜರ್ನಿ ಯಾವತ್ತೋ ಮುಗಿದು ಹೋಗಿದೆ'' ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.

  ಕೊನೆಯ ಕನ್ನಡ ಸಿನಿಮಾ ನೋಡಿದ ಬಗ್ಗೆ ರಮ್ಯಾ ಹೇಳಿದ್ದೇನು? ಮೋಹಕ ತಾರೆ ಲಿಸ್ಟ್ ನಲ್ಲಿರುವ ಸಿನಿಮಾಗಳಿವುಕೊನೆಯ ಕನ್ನಡ ಸಿನಿಮಾ ನೋಡಿದ ಬಗ್ಗೆ ರಮ್ಯಾ ಹೇಳಿದ್ದೇನು? ಮೋಹಕ ತಾರೆ ಲಿಸ್ಟ್ ನಲ್ಲಿರುವ ಸಿನಿಮಾಗಳಿವು

  ರಾಜಕೀಯಕ್ಕೂ ಗುಡ್ ಬೈ?

  ರಾಜಕೀಯಕ್ಕೂ ಗುಡ್ ಬೈ?

  ರಾಜಕೀಯಕ್ಕಾಗಿಯೇ ಸಿನಿಮಾ ಇಂಡಸ್ಟ್ರಿ ಬಿಟ್ಟು ಹೋದ ನಟಿ ನಂತರ ರಾಜಕೀಯದಿಂದಲೂ ದೂರ ಉಳಿದರು. ಇದೀಗ, ರಾಜಕೀಯದಲ್ಲೂ ಸಕ್ರಿಯವಾಗಿ ಕಾಣಿಸುತ್ತಿಲ್ಲ. ಈ ಬಗ್ಗೆಯೂ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ''ನೀವು ಸಕ್ರಿಯ ರಾಜಕಾರಣಕ್ಕೆ ವಾಪಸ್ ಬರಲ್ವಾ'' ಎಂದಿದ್ದಕ್ಕೆ, ''ಇಲ್ಲ, ನನ್ನ ಸಮಯ ಮುಗಿದಿದೆ'' ಎಂದು ಉತ್ತರಿಸಿದ್ದಾರೆ.

  ನೀವು ಮದುವೆ ಆಗಿ ಮೇಡಂ....

  ನೀವು ಮದುವೆ ಆಗಿ ಮೇಡಂ....

  ರಮ್ಯಾ ವಿಚಾರದಲ್ಲಿ ಸ್ಪಷ್ಟ ಉತ್ತರ ಸಿಗದ ಪ್ರಶ್ನೆ ಎಂದರೆ ಮದುವೆ. ರಮ್ಯಾ ಮತ್ತೆ ಸಿನಿಮಾ ಮಾಡ್ತಾರಾ, ರಮ್ಯಾ ಮತ್ತೆ ಸಕ್ರಿಯ ರಾಜಕಾರಣ ಮಾಡ್ತಾರಾ ಎನ್ನುವ ಪ್ರಶ್ನೆ ಜೊತೆಗೆ ರಮ್ಯಾ ಮದುವೆ ಆಗ್ತಾರಾ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ. ಈ ಪ್ರಶ್ನೆಯೂ ನಟಿಗೆ ಎದುರಾಗಿದೆ. ಆದರೆ, ಇದಕ್ಕೆ ನಗುವಿನ ಎಮೋಜಿ ಹಾಕಿ ಸುಮ್ಮನಾಗಿದ್ದಾರೆ.

  ಚೊಚ್ಚಲ ಚಿತ್ರದ ವೇಳೆ ಕ್ಲಿಕ್ಕಿಸಿದ ಮೊದಲ ಫೋಟೋ ಹಂಚಿಕೊಂಡ ರಮ್ಯಾಚೊಚ್ಚಲ ಚಿತ್ರದ ವೇಳೆ ಕ್ಲಿಕ್ಕಿಸಿದ ಮೊದಲ ಫೋಟೋ ಹಂಚಿಕೊಂಡ ರಮ್ಯಾ

  ನಿಮ್ಮಲ್ಲಿ ನೀವು ದ್ವೇಷಿಸುವ ಅಂಶವೇನು?

  ನಿಮ್ಮಲ್ಲಿ ನೀವು ದ್ವೇಷಿಸುವ ಅಂಶವೇನು?

  ''ನಿಮ್ಮಲ್ಲಿ ನೀವು ದ್ವೇಷಿಸುವ ಅಂಶವೇನು'' ಎಂಬ ಪ್ರಶ್ನೆ ರಮ್ಯಾ ಅವರಿಗೆ ಎದುರಾಗಿದೆ. ಅದಕ್ಕೆ ಉತ್ತರಿಸಿರುವ ನಟಿ ''ನನ್ನ ಭಾವನೆಗಳನ್ನು ನಿಯಂತ್ರಿಸುವಲ್ಲಿ ಅಸಮರ್ಥತೆ'' ಎಂದು ಪ್ರತಿಕ್ರಿಯಿಸಿದ್ದಾರೆ.

  ಕೊನೆಯ ಸಿನಿಮಾ...

  ಕೊನೆಯ ಸಿನಿಮಾ...

  2014ರಲ್ಲಿ ಶಿವರಾಜ್ ಕುಮಾರ್ ಜೊತೆ 'ಆರ್ಯನ್' ಸಿನಿಮಾ ಚಿತ್ರೀಕರಣ ಮುಗಿಸಿದ ರಮ್ಯಾ ಚಿತ್ರರಂಗದಿಂದ ದೂರ ಉಳಿದರು. ಅದಕ್ಕೂ ಮುಂಚೆ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ನಟಿಸಿದ್ದ 'ನಾಗರಹಾವು' ಸಿನಿಮಾ 2016ರಲ್ಲಿ ತೆರೆಕಂಡಿತ್ತು. ಹಾಗಾಗಿ, ರಮ್ಯಾ ಅವರ ಕೊನೆಯ ಚಿತ್ರ ನಾಗರಹಾವು. ಪ್ರಜ್ವಲ್ ದೇವರಾಜ್ ಜೊತೆ 'ದಿಲ್ ಕಾ ರಾಜ' ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರಕ್ಕೆ ಅರ್ಧಕ್ಕೆ ನಿಂತಿದೆ.

  English summary
  Actress Ramya confirms she will not come back to sandalwood again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X