For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್, ಧನಂಜಯ್ 'ಮಾನ್ಸೂನ್ ರಾಗ'ಕ್ಕೆ ಧ್ವನಿಗೂಡಿಸಿದ ರಮ್ಯಾ!

  |

  'ಮಾನ್ಸೂನ್ ರಾಗ' ಸ್ಯಾಂಡಲ್‌ವುಡ್‌ನಲ್ಲಿ ಗಮನಸೆಳೆಯುತ್ತಿರುವ ಸಿನಿಮಾ ಪಟ್ಟಿಯಲ್ಲಿದೆ. ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್‌ ಇದಕ್ಕೆ ಪ್ರಮುಖ ಕಾರಣ. ಈಗಾಗಲೇ ಟ್ರೈಲರ್ ಹಾಗೂ ಥೀಮ್ ಸಾಂಗ್ ಪ್ರೇಕ್ಷಕರನ್ನು ಸೆಳೆದಿದೆ.

  'ಪುಷ್ಪಕ ವಿಮಾನ'ದಂತಹ ಕ್ಲಾಸ್ ಸಿನಿಮಾ ನಿರ್ದೇಶಿಸಿದ್ದ ಎಸ್. ರವೀಂದ್ರನಾಥ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅನೂಪ್ ಸೀಳಿನ್ ಮೆಲೋಡಿ ಮ್ಯೂಸಿಕ್ ಸಿನಿಮಾದ ಟೈಟಲ್‌ಗೆ ತಕ್ಕಂತೆ ಕಿಕ್ ಕೊಟ್ಟಿದೆ. 'ಮಾನ್ಸೂರ್ ರಾಗ' ಸಿನಿಮಾ ಕಳೆದ ತಿಂಗಳು ಆಗಸ್ಟ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳನ್ನು ನೀಡಿ, ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೇ ವಾರ ಈ ಸಿನಿಮಾ ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಂಡಿದೆ.

  ಅಪ್ಪು ಮತ್ತು ನಾನು ಈ ಚಿತ್ರ ಮಾಡುವ ಯೋಜನೆ ಹಾಕಿದ್ವಿ ಎಂದ ರಮ್ಯಾ; ಮಿಸ್ ಆಯ್ತು ದೊಡ್ಡ ಸಿನಿಮಾ!ಅಪ್ಪು ಮತ್ತು ನಾನು ಈ ಚಿತ್ರ ಮಾಡುವ ಯೋಜನೆ ಹಾಕಿದ್ವಿ ಎಂದ ರಮ್ಯಾ; ಮಿಸ್ ಆಯ್ತು ದೊಡ್ಡ ಸಿನಿಮಾ!

  'ಮಾನ್ಸೂನ್ ರಾಗ' ಸಿನಿಮಾ ಕಳೆದೊಂದು ತಿಂಗಳಿನಿಂದ ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ಸೆಪ್ಟೆಂಬರ್ 16ರಂದು ಬಿಡುಗಡೆ ಸಜ್ಜಾಗಿರುವುದರಿಂದ ಸಿನಿಮಾ ಕೊನೆಯ ಹಂತ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಈ ಮಧ್ಯೆ ಮೋಹಕತಾರೆ ರಮ್ಯಾ ಧನಂಜ್ಯ ಸೇರಿದಂತೆ ಈಡೀ ತಂಡಕ್ಕೆ ಶುಭ ಕೋರಿದ್ದಾರೆ.

  ದಿಗ್ಗಜರ ಸಮಾಗಮ

  ದಿಗ್ಗಜರ ಸಮಾಗಮ

  'ಮಾನ್ಸೂನ್ ರಾಗ' ಸಿನಿಮಾದಲ್ಲಿ ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಲೀಡ್‌ ರೋಲ್‌ನಲ್ಲಿ ನಟಿಸಿದ್ದಾರೆ. ಇವರನ್ನು ಬಿಟ್ಟು ಹಿರಿಯ ನಟಿ ಸುಹಾಸಿನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಅಚ್ಯುತ್ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಯಶಾ ಶಿವಕುಮಾರ್ ಪಾತ್ರ ಕೂಡ ಹೈಲೈಟ್. ಹೀಗಾಗಿ 'ಮಾನ್ಸೂನ್ ರಾಗ' ಸಾಕಷ್ಟು ಗಮನ ಸೆಳೆಯುತ್ತಿದೆ. ಇನ್ನು ಮೋಹಕ ತಾರೆ ರಮ್ಯಾ ಸಿನಿಮಾಗೆ ಶುಭ ಕೋರಿದ್ದು, ಚಿತ್ರತಂಡಕ್ಕೆ ಬೂಸ್ಟ್ ಬಂದಂತಾಗಿದೆ.

  ಬೆಂಗಳೂರಿನಲ್ಲಿ ಮಳೆ ಅವಾಂತರ: MLA- MPಗಳ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ ಮೇಲೆ ರಮ್ಯಾ ಟಾರ್ಗೆಟ್!

  ಚಿತ್ರತಂಡಕ್ಕೆ ರಮ್ಯಾ ಶುಭಾಶಯ

  ಚಿತ್ರತಂಡಕ್ಕೆ ರಮ್ಯಾ ಶುಭಾಶಯ

  'ಮಾನ್ಸೂನ್ ರಾಗ' ಸಿನಿಮಾದ ಪೋಸ್ಟರ್ ಅನ್ನು ಮೋಹಕತಾರೆ ರಮ್ಯಾ ಶೇರ್ ಮಾಡಿದ್ದಾರೆ. ಅಲ್ಲದೆ ರಚಿತಾ ರಾಮ್, ಧನಂಜಯ್‌ರನ್ನು ಟ್ಯಾಗ್ ಮಾಡಿ 'ಮಾನ್ಸೂನ್ ರಾಗ' ತಂಡಕ್ಕೆ ಶುಭಕೋರಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು ಮೂರು ದಿನ ಬಾಕಿ ಇರುವಾಗಲೇ ಚಿತ್ರರಂಗಕ್ಕೆ ರಮ್ಯಾ ಬೆಂಬಲ ನೀಡಿದ್ದು ಮತ್ತಷ್ಟು ಪವರ್ ಬಂದತಾಗಿದೆ.

  ಡಾಲಿ ಜೊತೆ ಗುರುತಿಸಿಕೊಂಡ ರಮ್ಯಾ

  ಡಾಲಿ ಜೊತೆ ಗುರುತಿಸಿಕೊಂಡ ರಮ್ಯಾ

  ಡಾಲಿ ಧನಂಜಯ್ ಹಾಗೂ ರಮ್ಯಾ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಡಾಲಿಯನ್ನು ಮೋಹಕ ತಾರೆ ಒಂದೆರಡು ಬಾರಿ ಭೇಟಿಯಾಗಿದ್ದಾರೆ. ಇದರಲ್ಲಿ ಸಿನಿಮಾ ಸೆಟ್ಟಿಗೆ ಹೋಗಿ ಧನಂಜಯ್ ಸಿನಿಮಾದ ಶೂಟಿಂಗ್ ಅನ್ನೂ ವೀಕ್ಷಿಸಿದ್ದಾರೆ. ಹೀಗಾಗಿ ಧನಂಜಯ್ ಸಿನಿಮಾ ಮೂಲಕವೇ ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ, ರಮ್ಯಾ ಪ್ರೊಡಕ್ಷನ್ ಹೌಸ್ ಅನೌನ್ಸ್ ಮಾಡಿ ಮತ್ತಷ್ಟು ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿದ್ದರು.

  ಬೆಂಗಳೂರಿನ ಮಳೆ ಅವಾಂತರಕ್ಕೆ ಸಿಡಿದೆದ್ದ ರಮ್ಯಾ: ಅಕ್ರಮ ಕಟ್ಟಡ ತೆರವುಗೊಳಿಸೋರಿಗೆ ವೋಟ್ ಫಿಕ್ಸ್!ಬೆಂಗಳೂರಿನ ಮಳೆ ಅವಾಂತರಕ್ಕೆ ಸಿಡಿದೆದ್ದ ರಮ್ಯಾ: ಅಕ್ರಮ ಕಟ್ಟಡ ತೆರವುಗೊಳಿಸೋರಿಗೆ ವೋಟ್ ಫಿಕ್ಸ್!

  ಪ್ರೀ ರಿಲೀಸ್ ಇವೆಂಟ್ ಗೆಸ್ಟ್ ಲಿಸ್ಟ್

  ಪ್ರೀ ರಿಲೀಸ್ ಇವೆಂಟ್ ಗೆಸ್ಟ್ ಲಿಸ್ಟ್

  'ಮಾನ್ಸೂನ್ ರಾಗ' ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಇಂದು (ಸೆಪ್ಟೆಂಬರ್ 13) ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ದುನಿಯಾ ವಿಜಯ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ರಘು ಮುಖರ್ಜಿ, ಶೃತಿ ಹರಿಹರನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಹೀಗಾಗಿ ಇಂದು ಅಂಬೇಡ್ಕರ್ ಭವನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಬಿಡುಗಡೆಗೂ ಮುನ್ನ ಕೊನೆಯ ಹಂತದ ಪ್ರಚಾರಕ್ಕೆ ತೆರೆಬೀಳಲಿದೆ.

  English summary
  Actress Ramya Wished Rachita Ram And Dhananjay Starrer Mansoon Raga, Know More.
  Tuesday, September 13, 2022, 21:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X