For Quick Alerts
  ALLOW NOTIFICATIONS  
  For Daily Alerts

  ನನ್ನ ಸಿನಿ ಪಯಣ ನೀವಿಲ್ಲದೆ ಅಪೂರ್ಣ: ರಕ್ಷಿತಾಗೆ ಪ್ರೀತಿಯ ಶುಭಾಶಯ ಕೋರಿದ ರಮ್ಯಾ

  |

  ಒಂದು ಕಾಲದಲ್ಲಿ ಚಿತ್ರರಂಗವನ್ನು ಆಳಿದ ನಟಿಯರು ರಮ್ಯಾ ಮತ್ತು ರಕ್ಷಿತಾ. ಸ್ಟಾರ್ ಕಲಾವಿದರ ಚಿತ್ರಗಳಿಗೆ ಇಬ್ಬರಲ್ಲಿ ಒಬ್ಬರು ಇರಲೇ ಬೇಕಿತ್ತು. ರಮ್ಯಾ ಮತ್ತು ರಕ್ಷಿತಾ ನಡುವೆ ಸ್ಟಾರ್ ವಾರ್ ಕೂಡ ನಡೆಯುತ್ತಿದೆ ಎಂದು ಸುದ್ದಿಯಾಗಿತ್ತು. ಬಹುತೇಕ ಸ್ಟಾರ್ ನಟರೊಂದಿಗೆ ಇಬ್ಬರೂ ನಟಿಸಿದ್ದಾರೆ. ಅಷ್ಟೇ ಅಲ್ಲ, ಇಬ್ಬರೂ ತಮ್ಮದೇ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದರು.

  ರಮ್ಯಾ ಮತ್ತು ರಕ್ಷಿತಾ ನಡುವೆ ನಂಬರ್ ಒನ್ ಯಾರು ಎಂಬ ಚರ್ಚೆ ಕೂಡ ಆಗಾಗ ಚಿತ್ರರಂಗದಲ್ಲಿ ನಡೆಯುತ್ತಿತ್ತು. ಅದರಂತೆ ಇಬ್ಬರೂ ಪೈಪೋಟಿಗೆ ಬಿದ್ದವರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇದೇ ಸಮಯದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ ಎನ್ನುವುದು ಸಹ ಗುಟ್ಟಾಗಿ ಉಳಿದಿಲ್ಲ. ಆದರೀಗ ಇಬ್ಬರು ಸ್ನೇಹಿತರಾಗಿದ್ದಾರೆ. ಅಲ್ಲದೆ ಇಂದು ರಕ್ಷಿತಾ ಹುಟ್ಟುಹಬ್ಬಕ್ಕೆ ರಮ್ಯಾ ವಿಶ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮುಂದೆ ಓದಿ..

  'ನೀನು ನನ್ನ ಜೀವನದ ಉಡುಗೊರೆ': ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್'ನೀನು ನನ್ನ ಜೀವನದ ಉಡುಗೊರೆ': ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್

  ನಟನೆಯಿಂದ ದೂರ ಉಳಿದರುವ ರಮ್ಯಾ ಮತ್ತು ರಕ್ಷಿತಾ

  ನಟನೆಯಿಂದ ದೂರ ಉಳಿದರುವ ರಮ್ಯಾ ಮತ್ತು ರಕ್ಷಿತಾ

  ರಮ್ಯಾ ಮತ್ತು ರಕ್ಷಿತಾ ಇಬ್ಬರು ಈಗ ಅಭಿನಯದಿಂದ ದೂರ ಉಳಿದಿದ್ದಾರೆ. ರಕ್ಷಿತಾ ನಟನೆಯಿಂದ ನಿರ್ಮಾಣಕ್ಕೆ ಇಳಿದ್ದಾರೆ. ಇನ್ನು ರಮ್ಯಾ ಸಿನಿಮಾದಿಂದ ದೂರ ಸರಿದು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೀಗ ರಾಜಕೀಯದಲ್ಲೂ ಸಕ್ರಿಯರಾಗಿಲ್ಲ. ರಮ್ಯಾ ಮತ್ತೆ ಬಣ್ಣ ಹಚ್ಚುತ್ತಾರೆ, ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇದೆ. ಆದರ ಇದುವರೆಗೂ ಅದು ಸಾಧ್ಯವಾಗಿಲ್ಲ.

  ಇಬ್ಬರೂ ಈಗ ಫ್ರೆಂಡ್ಸ್

  ಇಬ್ಬರೂ ಈಗ ಫ್ರೆಂಡ್ಸ್

  ಚಿತ್ರರಂಗದಿಂದ ದೂರ ಇರುವ ಇವರಿಬ್ಬರೂ ಈಗ ಗೆಳತಿಯರಾಗಿದ್ದಾರೆ. ಆನ್ ಲೈನ್‌ನಲ್ಲಿ ಸ್ನೇಹಿತರಾಗಿರುವ ಇವರು ಒಬ್ಬರಿಗೊಬ್ಬರು ಲೈಕ್ಸ್ ಮತ್ತು ಕಾಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಇಂದು ನಟಿ ರಕ್ಷಿತಾ ಪ್ರೇಮ್ ಹುಟ್ಟುಹಬ್ಬ. ಜನ್ಮದಿನದ ಸಂಭ್ರಮದಲ್ಲಿರುವ ಕ್ರೇಜಿ ಕ್ವೀನ್‌ಗೆ ರಮ್ಯಾ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

  ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಪ್ರೇಮ್-ರಕ್ಷಿತಾ ದಂಪತಿತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಪ್ರೇಮ್-ರಕ್ಷಿತಾ ದಂಪತಿ

  ರಕ್ಷಿತಾಗೆ ರಮ್ಯಾ ವಿಶ್ ಮಾಡಿದ್ದು ಹೀಗೆ

  ರಕ್ಷಿತಾಗೆ ರಮ್ಯಾ ವಿಶ್ ಮಾಡಿದ್ದು ಹೀಗೆ

  ಸಾಮಾಜಿಕ ಜಾಲತಾಣದ ಮೂಲಕ ರಮ್ಯಾ ವಿಶ್ ಮಾಡಿದ್ದಾರೆ. ರಕ್ಷಿತಾ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ, ನನ್ನ ಸಿನಿ ಪಯಣ ನೀವಿಲ್ಲದೆ ಪೂರ್ಣವಾಗಲ್ಲ ಎಂದು ಬರೆದುಕೊಂಡಿದ್ದಾರೆ.

  'ಜನ್ಮದಿನದ ಶುಭಾಶಯಗಳು ರಕ್ಷಿತಾ ಪ್ರೇಮ್. ನನ್ನ ಸಿನಿ ಪಯಣ ನೀವಿಲ್ಲದೆ ಅಪೂರ್ಣ.ಅ ದಿನಗಳು ತುಂಬಾ ಫನ್ ಮತ್ತು ಡ್ರಾಮಗಳಿಂದ ತುಂಬಿತ್ತು. ಅದ್ಭುತವಾದ ದಿನ ನಿಮ್ಮದಾಗಲಿ' ಎಂದು ಬರೆದುಕೊಂಡಿದ್ದಾರೆ.

  ಮದಕರಿ ಸಿನಿಮಾಗೂ ಮುಂಚೆ ಗೋಲ್ಡ್ ರಿಂಗ್ ಮೂಲಕ ತೆರೆಮೇಲೆ ಬರಲಿದ್ದಾರೆ ಡಿ ಬಾಸ್ | Filmibeat Kannada
  ಗೆಳತಿಗೆ ಶುಭಕೋರಿದ ದರ್ಶನ್

  ಗೆಳತಿಗೆ ಶುಭಕೋರಿದ ದರ್ಶನ್

  ನಟಿ ರಕ್ಷಿತಾಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ ಮಾಡಿ, 'ಹುಟ್ಟುಹಬ್ಬದ ಶುಭಾಶಯಗಳು. ಪ್ರತಿವರ್ಷ ಜನ್ಮದಿನಗಳು ಬರುತ್ತವೆ, ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ. ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್' ಎಂದು ಟ್ವೀಟ್ ಮಾಡಿದ್ದಾರೆ. ವಿಶ್ ಜೊತೆಗೆ ರಕ್ಷಿತಾ ಜೊತೆ ಇರುವ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ.

  English summary
  Actress Ramya shares throwback picture as She wishes Rakshita on her birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X