»   » ಕಿರುತೆರೆಯ 'ಪುಟ್ಟಗೌರಿ'ಯ ಹೊಸ ಸಿನಿಮಾ ಶುರು

ಕಿರುತೆರೆಯ 'ಪುಟ್ಟಗೌರಿ'ಯ ಹೊಸ ಸಿನಿಮಾ ಶುರು

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ 'ಪುಟ್ಟಗೌರಿ ಮದುವೆ' ಧಾರಾವಾಹಿಯ ನಟಿ ರಂಜನಿ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದೆ 'ರಾಜಹಂಸ' ಸಿನಿಮಾದಲ್ಲಿ ನಟಿಸಿದ್ದ ರಂಜನಿ ಈಗ ಮತ್ತೆ ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದಿದ್ದಾರೆ.

ಟ್ರೋಲ್ ಮಾಡುವವರಿಗೆ ತನ್ನ ಮಾತಿನಲ್ಲೇ ಪೆಟ್ಟು ಕೊಟ್ಟ ಪುಟ್ಟಗೌರಿ!

ರಂಜನಿ ಈಗ 'ಸೂಫಿ' ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಶಿವು ಜಮಖಂಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ವಿಜಯ್ ರಾಘವೇಂದ್ರ ನಟನೆಯ 'ನನ್ನ ನಿನ್ನ ಪ್ರೇಮ ಕಥೆ' ಚಿತ್ರವನ್ನು ಶಿವು ನಿರ್ದೇಶನ ಮಾಡಿದ್ದರು. ಇನ್ನು ಸೂಫಿ ಎಂಬ ಹೆಸರಿಗೆ ತಕ್ಕಂತೆ ಸೂಫಿ ಸಂತರ ಬದುಕು, ಬರಹ ಮತ್ತವರ ಸಂದೇಶಗಳು ಈ ಹೊಸ ಚಿತ್ರದಲ್ಲಿ ಇದೆಯಂತೆ.

Actress Ranjani lead role in Sufi kannada movie

'ಜಸ್ಟ್ ಆಕಸ್ಮಿಕ' ಖ್ಯಾತಿಯ ನಟ ವಿನೋದ್ ಪಾಟೀಲ್ ಈ ಸಿನಿಮಾದ ಹೀರೋ ಆಗಿದ್ದಾರೆ. ವಿಶೇಷ ಅಂದರೆ ನಟ ರಮೇಶ್ ಅರವಿಂದ್ ಮತ್ತು ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರಂತೆ. 'ರಾಜಹಂಸ' ಸಿನಿಮಾದ ನಂತರ ತುಂಬ ಅವಕಾಶಗಳು ಬಂದರು ಇಷ್ಟಪಡದ ನಟಿ ರಂಜನಿ ಈ ಚಿತ್ರದ ಕಥೆಯನ್ನು ಒಪ್ಪಿಕೊಂಡಿದ್ದಾರೆ. ಸದ್ಯ 'ಪುಟ್ಟಗೌರಿ ಮದುವೆ' ಮೂಲಕ ದೊಡ್ಡ ಜನಪ್ರಿಯತೆ ಗಳಿಸಿರುವ ರಂಜನಿ ಈಗ ಚಿತ್ರರಂಗದಲ್ಲಿ ಹಂತ ಹಂತವಾಗಿ ಮುಂದುವರೆಯುತ್ತಿದ್ದಾರೆ.

English summary
'Puttagowri Maduve' serial actress Ranjani playing lead role in 'Sufi' a new kannada movie. The movie is directed by Shivu Jamakhandi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X