For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಬಳಗಕ್ಕೆ ಸೇರಿಕೊಂಡ ಪುಟ್ಟಗೌರಿ

  By Pavithra
  |

  ಪುಟ್ಟಗೌರಿ, ಕಿರುತೆರೆಯಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದಿರುವ ಧಾರಾವಾಹಿ. ಸೀರಿಯಲ್ ಜೊತೆಯಲ್ಲಿ ನಟಿ ರಂಜನಿ ರಾಘವನ್ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ. ಧಾರಾವಾಹಿಗಳಲ್ಲಿ ಅಭಿನಯಿಸುತ್ತಾ ಚಿತ್ರಗಳಲ್ಲೂ ಕಾಣಿಸಿಕೊಂಡ ರಂಜನಿ ಅವರಿಗೆ ಬಂಪರ್ ಆಫರ್ ಸಿಕ್ಕಿದೆ.

  ಟ್ರೋಲ್ ಪೇಜ್ ಗಳಿಗೆ ಹಾಟ್ ಫೆವರೆಟ್ ಆಗಿ ನಂತರ ಇನ್ನು ಮುಂದೆ ಟ್ರೋಲ್ ಆಗುವಂತ ಪಾತ್ರ ಮಾಡಲ್ಲ ಎಂದು ಹೇಳಿದ್ದ ರಂಜನಿ ಇನ್ನು ಮುಂದೆ ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ.

  ಮಿಸ್ ಇಂಡಿಯಾ ಸೂಪರ್ ಮಾಡೆಲ್' ಪಟ್ಟಕ್ಕೇರಿದ ಪುಟ್ಟಗೌರಿ ರಂಜನಿಮಿಸ್ ಇಂಡಿಯಾ ಸೂಪರ್ ಮಾಡೆಲ್' ಪಟ್ಟಕ್ಕೇರಿದ ಪುಟ್ಟಗೌರಿ ರಂಜನಿ

  ರಂಜನಿ ಅವರನ್ನ ಧಾರಾವಾಹಿಯ ಜೊತೆಯಲ್ಲಿ ಸಾಲು ಸಾಲು ಸಿನಿಮಾಗಳ ಆಫರ್ ಹುಡುಕಿಕೊಂಡು ಬರುತ್ತಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೌತುಕವನ್ನ ಹುಟ್ಟುಹಾಕಿರುವ ಚಿತ್ರಕ್ಕೆ ರಂಜನಿ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಹಾಗಾದರೇ ಪುಟ್ಟಗೌರಿ ಅಭಿನಯಿಸುತ್ತಿರುವ ಆ ಸಿನಿಮಾ ಯಾವುದು? ಎಷ್ಟು ಚಿತ್ರಗಳು ರಂಜನಿ ಕೈನಲ್ಲಿವೆ ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ

  ಟಕ್ಕರ್ ಕೊಡ್ತಾರೆ ಪುಟ್ಟಗೌರಿ

  ಟಕ್ಕರ್ ಕೊಡ್ತಾರೆ ಪುಟ್ಟಗೌರಿ

  ನಟಿ ರಂಜನಿ ರಾಘವನ್ ಟಕ್ಕರ್ ಚಿತ್ರದ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ದರ್ಶನ್ ಸಹೋದರ ಸಂಬಂಧಿ ಮನೋಜ್ ಅವರ ಜೋಡಿಯಾಗಿ ರಂಜಿನಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ.

  ಮನೋಜ್ ಜೊತೆ ರಜನಿ ರಾಘವನ್

  ಮನೋಜ್ ಜೊತೆ ರಜನಿ ರಾಘವನ್

  ಮನೋಜ್ ಅಭಿನಯದ ಟಕ್ಕರ್ ಸಿನಿಮಾದಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸುವಂತಹ ನಟಿ ಬೇಕಾಗಿತ್ತಂತೆ. ಇದೇ ಕಾರಣಕ್ಕೆ ನಿರ್ದೇಶಕ ರಘುಶಾಸ್ತ್ರಿ ರಜನಿ ಅವರನ್ನ ಆಯ್ಕೆ ಮಾಡಿಕೊಂಡಿದ್ದಾರೆ.

  ಉತ್ತಮ ಚಿತ್ರಗಳ ಆಯ್ಕೆ

  ಉತ್ತಮ ಚಿತ್ರಗಳ ಆಯ್ಕೆ

  ರಾಜಹಂಸ ಚಿತ್ರದ ನಂತರ ಸೂಫಿ ಎಂಬ ಹೊಸ ಚಿತ್ರಕ್ಕೆ ರಂಜನಿ ರಾಘವನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶಿವು ಜಮಖಂಡಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. 'ಜಸ್ಟ್ ಆಕಸ್ಮಿಕ' ಖ್ಯಾತಿಯ ನಟ ವಿನೋದ್ ಪಾಟೀಲ್ ಈ ಸಿನಿಮಾದ ನಾಯಕನಾಗಿದ್ದು, ರಮೇಶ್ ಅರವಿಂದ್ ಮತ್ತು ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರಂತೆ.

  ಬ್ಯುಸಿ ಆಗಿರುವ ನಾಯಕಿ

  ಬ್ಯುಸಿ ಆಗಿರುವ ನಾಯಕಿ

  ಸ್ಟಾರ್ ಫಿಲ್ಮ್ ಮೇಕರ್ಸ್ ಸ್ಕೂಲ್ ಆಫ್ ಫ್ಯಾಷನ್ ವತಿಯಿಂದ ಆಯೋಜಿತವಾಗಿದ್ದ 'ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017'ರಲ್ಲಿ ಭಾಗವಹಿಸಿದ್ದ ರಂಜನಿ ರಾಘವನ್ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಈ ವರ್ಷದ ಮಿಸ್ ಇಂಡಿಯಾ ಸೂಪರ್ ಮಾಡೆಲ್ ತಮ್ಮದಾಗಿಸಿಕೊಂಡಿದ್ದಾರೆ.

  English summary
  Puttagauri serial fame Kannada Actress Ranjini Raghavan has been selected for Takkar movie. actor Manoj acting as a hero in Takar movie, Raghushastri is directing the Takkar Cinema

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X