»   » ಯಶ್ ಚಿತ್ರದ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ ಮಾತಿದು

ಯಶ್ ಚಿತ್ರದ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ ಮಾತಿದು

Posted By:
Subscribe to Filmibeat Kannada
ಯಶ್ ಹಾಗು ಕೆಜಿಎಫ್ ಮೂವಿ ಟೀಸರ್ ಬಗ್ಗೆ ರಶ್ಮಿಕಾ ಮಂದಣ್ಣ ಟ್ವೀಟ್ ನೋಡಿ | Filmibeat Kannada

ಎರಡು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಎರಡು ವಿಚಾರದ ಬಗ್ಗೆಯೇ ಚರ್ಚೆ. ಒಂದು ಕಡೆ ರಾಕಿಂಗ್ ಸ್ಟಾರ್ ಬರ್ತಡೇಯ ಬಗ್ಗೆ ಜನ ಮಾತನಾಡುತ್ತಿದ್ದರೆ ಮತ್ತೊಂದು ಕಡೆ ಯಶ್ ಅಭಿನಯದ ಕೆ ಜಿ ಎಫ್ ಸಿನಿಮಾದ ಟೀಸರ್ ಮೇಕಿಂಗ್ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಸಾಕಷ್ಟು ದಿನಗಳಿಂದ ಕುತೂಹಲ ಮೂಡಿಸಿದ್ದ ಕೆ ಜಿ ಎಫ್ ಚಿತ್ರದ ಮೇಕಿಂಗ್ ವಿತ್ ಟೀಸರ್ ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಗಿದೆ. ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ನಟಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಟ್ವಿಟ್ಟ್ ಮಾಡಿದ್ದಾರೆ.

ಯಶ್ ಪ್ರತಿ ಹುಟ್ಟುಹಬ್ಬಕ್ಕೆ ಮರೆಯದೆ ಮಾಡುವ ಮೊದಲ ಕೆಲಸ ಇದು

Actress Rashmiaka mandanna has tweeted about the KGF movie teaser

"ಕೆ ಜಿ ಎಫ್ ಟೀಸರ್ ಓ ಮೈ ಗಾಡ್, ಯಶ್ ಸಾರ್ ಹ್ಯಾಪಿ ಬರ್ತಡೇ ಆಲ್ ದ ಬೆಸ್ಟ್ ಟು ಕೆಜಿಎಫ್ ಟೀಂ" ಎಂದು ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ. ಟಾಕ್ ಶೋ ಒಂದರಲ್ಲಿ ರಶ್ಮಿಕಾ ಅವರಿಗೆ ಚಿತ್ರರಂಗದಲ್ಲಿ ಬಿಲ್ಡಪ್ ಅಂದರೆ ಯಾರು ನೆನಪಾಗುತ್ತೆ ಎನ್ನುವ ಪ್ರಶ್ನೆಗೆ ಯಶ್ ಎನ್ನುವ ಉತ್ತರ ನೀಡಿ ವಿವಾದಕ್ಕೆ ಸಿಲುಕಿದ್ದರು.

Actress Rashmiaka mandanna has tweeted about the KGF movie teaser

ಅದಷ್ಟೇ ಅಲ್ಲದೆ ಮೊದ ಮೊದಲಿಗೆ ಯಶ್ ಅಭಿನಯದ 'ರಾಣ' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎನ್ನುವ ಸುದ್ದಿಗಳು ಹರಿದಾಡಿತ್ತು. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಜೊತೆ ಅಭಿನಯಿಸುತ್ತಿರುವ ರಶ್ಮಿಕಾ ಯಶ್ ಜೊತೆಗೂ ಅಭಿನಯಿಸುವ ಸಾಧ್ಯತೆಗಳು ಇವೆ. ಆದರೆ ಅದಕ್ಕಾಗಿ ಸಾಕಷ್ಟು ದಿನಗಳು ಕಾಯಬೇಕು.

English summary
Kannada Actress Rashmiaka mandanna has tweeted about the KGF movie teaser. and also rashmika birthday wish to rocking star yash

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X