ಹುಟ್ಟುಹಬ್ಬದ ಸಂಭ್ರಮದಲ್ಲಿ ರಶ್ಮಿಕಾ ಮಂದಣ್ಣ; ನ್ಯಾಷನಲ್ ಕ್ರಶ್ ವಯಸ್ಸೆಷ್ಟು?

ರಶ್ಮಿಕಾ ಮಂದಣ್ಣ ಯಾವುದಾದರೊಂದು ಸುದ್ದಿಯಿಂದ ಪ್ರತಿನಿತ್ಯ ಟ್ರೆಂಡಿಂಗ್‌ನಲ್ಲಿರುವ ಹೆಸರು. ಅತಿ ಬೇಗನೇ ಫೇಮ್ ನೋಡಿದ ಕಲಾವಿದರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಸದ್ಯ ಮೊದಲಿನದ್ದು ಎಂದು ಹೇಳಬಹುದು. ಹೌದು, ಮೊದಲಿಗೆ ಕನ್ನಡ ಚಿತ್ರ ಕಿರಿಕ್ ಪಾರ್ಟಿಯ ಮೂಲಕ ಸಿನಿಮಾ ಕ್ಷೇತ್ರಕ್ಕೆ ಯಾವುದೇ ಯೋಜನೆ ಇಲ್ಲದೇ ಬಂದ ರಶ್ಮಿಕಾ ಮಂದಣ್ಣ ಮೊದಲ ಚಿತ್ರದ ಮೂಲಕವೇ ದೊಡ್ಡ ಮಟ್ಟದ ಹೆಸರು ಮಾಡಿದರು.

ಈ ಚಿತ್ರದ ಮೂಲಕ ನಟಿ ರಶ್ಮಿಕಾ ಮಂದಣ್ಣ ಕರ್ನಾಟಕ ಕ್ರಶ್ ಎನಿಸಿಕೊಂಡರು. ಹೀಗೆ ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಮತ್ತಷ್ಟು ಎತ್ತರಕ್ಕೆ ಬೆಳೆದರು. ತೆಲುಗು ಚಿತ್ರಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ದೇಶವ್ಯಾಪಿ ಗುರುತಿಸಿಕೊಂಡರು. ಈ ಮೂಲಕ ಕರ್ನಾಟಕ ಕ್ರಶ್ ಎಂದು ಕರೆಸಿಕೊಳ್ಳುತ್ತಿದ್ದ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂದೂ ಸಹ ಕರೆಸಿಕೊಂಡರು.

Actress Rashmika Mandanna celebrating her 27th birthday

ಹೀಗೆ ಕನ್ನಡದಿಂದ ತೆಲುಗಿಗೆ ಹೋಗಿ ದೊಡ್ಡ ಹೆಸರು ಮಾಡಿದ ರಶ್ಮಿಕಾ ಮಂದಣ್ಣ ಸಿನಿ ಪಯಣ ಬಳಿಕ ತಮಿಳು ಚಿತ್ರರಂಗಕ್ಕೂ ಸಹ ಕಾಲಿಟ್ಟರು. ಹೀಗೆ ಸೌತ್‌ನ ಬಹುತೇಕ ಇಂಡಸ್ಟ್ರಿಗಳಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ಕಳೆದೊಂದು ವರ್ಷದಲ್ಲಿ ಬಾಲಿವುಡ್ ಲೋಕಕ್ಕೂ ಸಹ ಪದಾರ್ಪಣೆ ಮಾಡಿದ್ದು, ಮೊದಲ ಚಿತ್ರದಲ್ಲಿಯೇ ಅಮಿತಾಭ್ ಬಚ್ಚನ್ ಜತೆ ತೆರೆ ಹಂಚಿಕೊಂಡಿದ್ದಾರೆ.

ಹೀಗೆ ಭಾರತದ ಬಹುತೇಕ ಎಲ್ಲಾ ಪ್ರಮುಖ ಚಿತ್ರರಂಗಗಳಲ್ಲಿಯೂ ನಟಿಸುತ್ತಾ ಸಕ್ರಿಯರಾಗಿ ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಇಂದು ( ಏಪ್ರಿಲ್ 5 ) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1996ರ ಏಪ್ರಿಲ್ 5ರಂದು ಕರ್ನಾಟಕದ ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ ಮಂದಣ್ಣ 27ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ವಿಶೇಷ ಕಾಮನ್ ಡಿಪಿಯೊಂದನ್ನು ಎಡಿಟ್ ಮಾಡಿದ್ದು, ಈ ಕಾಮನ್ ಡಿಪಿಯನ್ನು ಸೌತ್ ಇಂಡಸ್ಟ್ರಿಯ ಖ್ಯಾತ ತಾರೆ ಕೀರ್ತಿ ಸುರೇಶ್ ಟ್ವೀಟ್ ಮಾಡುವ ಮೂಲಕ ಅನಾವರಣಗೊಳಿಸಿದ್ದಾರೆ.

ಇನ್ನು ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭ ಕೋರುತ್ತಿದ್ದಾರೆ. ಒಂದೆಡೆ ಅಭಿಮಾನಿಗಳು ಹಾಗೂ ಸಿನಿ ರಸಿಕರು ವಿಶ್ ಮಾಡುತ್ತಿದ್ದರೆ, ಮತ್ತೊಂದೆಡೆ ಸಿನಿಮಾ ಕಲಾವಿದರು ಹಾಗೂ ರಶ್ಮಿಕಾ ಮಂದಣ್ಣ ಜತೆ ತೆರೆ ಹಂಚಿಕೊಂಡ ಸಹ ಕಲಾವಿದರು ರಶ್ಮಿಕಾ ಮಂದಣ್ಣ ಜತೆಗಿನ ತಮ್ಮ ಫೋಟೊಗಳನ್ನು ಹಂಚಿಕೊಂಡು ಶುಭ ಕೋರುತ್ತಿದ್ದಾರೆ.

Actress Rashmika Mandanna celebrating her 27th birthday

ಸದ್ಯ ರಶ್ಮಿಕಾ ಮಂದಣ್ಣ ಕೈನಲ್ಲಿ ಹೆಚ್ಚೇನೂ ಚಿತ್ರಗಳಿಲ್ಲ ಎಂಬ ಸುದ್ದಿ ಹಾಗೂ ಟ್ರೋಲ್ ಇತ್ತು. ಪುಷ್ಪ 2 ಹಾಗೂ ಬಾಲಿವುಡ್‌ನ ಅನಿಮಲ್ ಹೊರತುಪಡಿಸಿ ರಶ್ಮಿಕಾ ಮಂದಣ್ಣ ಯಾವ ಚಿತ್ರವನ್ನೂ ಸಹ ಹೊಂದಿಲ್ಲ ಎನ್ನಲಾಗುತ್ತಿತ್ತು. ಆದರೆ ನಿತಿನ್ ಜತೆಗೆ ಒಂದು ಸಿನಿಮಾ ಘೋಷಣೆಯಾಗಿದ್ದು, ತಾನೇ ಲೀಡ್ ರೋಲ್‌ನಲ್ಲಿ ನಟಿಸಲಿರುವ ರೈನ್‌ಬೋ ಎಂಬ ಚಿತ್ರ ಸಹ ಘೋಷಣೆಗೊಂಡಿದೆ.

ಇನ್ನು ಈ ದಿನ ಹುಟ್ಟುಹಬ್ಬವಾಗಿರುವ ಕಾರಣ ರಶ್ಮಿಕಾ ಮಂದಣ್ಣ ಗ್ರೀನ್ ಸಿಗ್ನಲ್ ನೀಡಿರುವ ಮತ್ತಷ್ಟು ಚಿತ್ರಗಳು ಇದೇ ದಿನ ಘೋಷಣೆಯಾಗುವ ಸಾಧ್ಯತೆಗಳಿವೆ.

More from Filmibeat

English summary
Actress Rashmika Mandanna celebrating her 27th birthday. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X