For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಗೆ ದೌಡಾಯಿಸಿದ ರಶ್ಮಿಕಾ: ನಟಿಗೆ ಕಾಡುತ್ತಿರುವ ಸಮಸ್ಯೆಯೇನು..?

  |

  ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಆಸ್ಪತ್ರೆಯಲ್ಲಿರುವ ಫೋಟೊ ವೈರಲ್‌ ಆಗಿದ್ದು, ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ ಧಿಡೀರನೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಿನ್ನೆವರೆಗೂ ಆರೋಗ್ಯವಾಗಿದ್ದ ನಟಿಗೆ ಏನಾಗಿದೆ ಎನ್ನುವ ಆತಂಕ ಎಲ್ಲರಲ್ಲಿದೆ.

  ರಶ್ಮಿಕಾ ಮಂದಣ್ಣಗೆ ಆರೋಗ್ಯದಲ್ಲಿ ಏರುಪೇರು ಎನ್ನುವ ಸುದ್ದಿ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ. ಆಕೆಯನ್ನು ಪರೀಕ್ಷೆಗೊಳಪಡಿಸಿದ ಬಳಿಕ ಆಸ್ಪತ್ರೆ ಮೂಲಗಳು ಸ್ಪಷ್ಟನೆ ನೀಡಿದೆ. ಮೊಣಕಾಲು ನೋವಿನಿಂದ ಬಳಲುತ್ತಿರುವ ರಶ್ಮಿಕಾ ಹೈದರಾಬಾದ್‌ನ ಜನಪ್ರಿಯ ವೈದ್ಯ ಆರ್ಥೋ ಸ್ಪೆಷಲಿಸ್ಟ್‌ ಗುರುವಾ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸದ್ಯ ಗುರುವಾ ರೆಡ್ಡಿಯವರಿಂದ ರಶ್ಮಿಕಾ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸತತವಾಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದರಿಂದ ನಟಿಗೆ ಈ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

  ಕನ್ನಡ ಡಬ್ಬಿಂಗ್‌ಗೆ ಟೈಮ್ ಇಲ್ಲ, ಆದ್ರೆ ಹಿಂದಿಗೆ? ರಶ್ಮಿಕಾ ಹೇಳಿದ್ದು ಕೇಳಿದ್ರೆ ಕೋಪ ಬರೋದು ಗ್ಯಾರೆಂಟಿ!ಕನ್ನಡ ಡಬ್ಬಿಂಗ್‌ಗೆ ಟೈಮ್ ಇಲ್ಲ, ಆದ್ರೆ ಹಿಂದಿಗೆ? ರಶ್ಮಿಕಾ ಹೇಳಿದ್ದು ಕೇಳಿದ್ರೆ ಕೋಪ ಬರೋದು ಗ್ಯಾರೆಂಟಿ!

  ಇನ್ನು ರಶ್ಮಿಕಾ ಮಂದಣ್ಣ ಜೊತೆಗಿನ ಫೋಟೊವನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಡಾಕ್ಟರ್ ಗುರುವಾ ರೆಡ್ಡಿ, ತೆಲುಗಿನಲ್ಲಿ ನಟಿಯ ಕಾಲು ನೋವಿನ ಬಗ್ಗೆ ಹಾಸ್ಯಾಸ್ಪದವಾಗಿ ಬರೆದುಕೊಂಡಿದ್ದಾರೆ. "ನೀವು ರಾ..ರಾ..ಸಾಮಿ..ಸಾಮಿ.. ಎಂದು ಮೊಣಕಾಲಿನ ಮೇಲೆ ಭಾರ ಹಾಕಿ ನೃತ್ಯ ಮಾಡುವುದೇ ಇಂತಹ ನೋವುಗಳಿಗೆ ಕಾರಣ ಎಂದು ನನ್ನ ಬಳಿ ಚಿಕಿತ್ಸೆ ಬಂದ ಶ್ರೀವಲ್ಲಿ ಅವರಿಗೆ ಹೇಳಿದೆ" ಎಂದು ರಶ್ಮಿಕಾ ಮಂದಣ್ಣನವರ ಜೊತೆ ನಡೆದ ಹಾಸ್ಯಾಸ್ಪದ ವಿಷಯವನ್ನು ಡಾಕ್ಟರ್‌ ಹೇಳಿಕೊಂಡಿದ್ದಾರೆ. ಸದ್ಯ ಈ ಸಂದೇಶದಿಂದ ರಶ್ಮಿಕಾ ಅಭಿಮಾನಿಗಳು ಆಕೆಯ ಆರೋಗ್ಯದ ಬಗ್ಗೆ ತಿಳಿದಿದ್ದು, ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ.

  ರಶ್ಮಿಕಾ ನಟನೆಗಷ್ಟೇ ಅಲ್ಲ ಡ್ಯಾನ್ಸ್‌ನಲ್ಲೂ ಎತ್ತಿದ ಕೈ. ರಶ್ಮಿಕಾ ನಟನೆಯ ಬಹುತೇಕ ಚಿತ್ರದಲ್ಲಿ ಡ್ಯಾನ್ಸ್‌ಗೆ ಪ್ರಾಮುಖ್ಯತೆ ನೀಡುವ ಒಂದಾದರೂ ಹಾಡು ಇದ್ದೇ ಇರುತ್ತದೆ. ಹೀಗಾಗಿ ನಟಿ ಮೊಣಕಾಲಿನ ಸಮಸ್ಯೆಯಿಂದ ಬೇಗ ಚೇತರಿಸಿಕೊಂಡು ಮೊದಲಿನಿಂತಾಗಲಿ ಎಂದು ಅನೇಕರು ಹಾರೈಸಿದ್ದಾರೆ.

  ಕನ್ನಡ ಚಿತ್ರರಂಗದ 'ಕಿರಿಕ್‌ ಪಾರ್ಟಿ' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಈಗ ಭಾರತೀಯ ಚಿತ್ರರಂಗದಲ್ಲೇ ಬಹುಬೇಡಿಕೆಯ ನಟಿ. ಎಂತಹ ಪಾತ್ರಕ್ಕಾದರೂ ಸೈ ಎನಿಸಿಕೊಂಡಿರುವ ರಶ್ಮಿಕಾ ಟಾಪ್‌ ನಟಿಯರ ಸ್ಥಾನದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಕ್ರಶ್‌ ಎನಿಸಿಕೊಂಡಿದ್ದ ರಶ್ಮಿಕಾ ಬೇರೆ ಭಾಷೆಗಳಲ್ಲಿ ನಟಿಸುವ ಮೂಲಕ ನ್ಯಾಷನಲ್ ಆಗಿ ಹೊರ ಹೊಮ್ಮಿದ್ದಾರೆ. ಸ್ಯಾಂಡಲ್‌ವುಡ್‌, ಟಾಲಿವುಡ್‌ನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ರಶ್ಮಿಕಾ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ. ಅನೇಕ ಬಿಗ್‌ ಬಜೆಟ್‌ ಸಿನಿಮಾಗಳೇ ರಶ್ಮಿಕಾ ಅವರನ್ನು ಅರಸಿ ಬರುತ್ತಿದ್ದು, ನಟಿ ತಮ್ಮ ಸಂಭಾವನೆಯನ್ನು 4 ಕೋಟಿ ರೂಪಾಯಿಂದ 5 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದ್ದಾರೆ.

  ರಶ್ಮಿಕಾ ನಟಿಸಿರುವ ಚಿತ್ರಗಳೆಲ್ಲವೂ ಸೂಪ್‌ ಹಿಟ್‌ ಆಗುತ್ತಿದ್ದು, ಇತ್ತೀಚಿಗೆ ದುಲ್ಕರ್‌ ಸಲ್ಮಾನ್‌ ಜೊತೆ ನಟಿಸಿದ 'ಸೀತಾ-ರಾಮನ್‌' ಚಿತ್ರ ಕೂಡ ಯಶಸ್ವಿಯಾಗಿದ್ದಾರೆ. ಸದ್ಯ ಅಲ್ಲು ಅರ್ಜುನ್‌ ನಟೆಯ 'ಪುಷ್ಟ-2' ಚಿತ್ರದ ಚಿತ್ರೀಕರಣದ ಸಿದ್ಧತೆಯಲ್ಲಿರುವ ರಶ್ಮಿಕಾ ರಾ..ರಾ ಸಾಮಿಯಂತಹ ಮತ್ತೊಂದು ಹಾಡಿಗೆ ಹೆಜ್ಜೆ ಹಾಕಲು ಸಜ್ಜಾಗುತ್ತಿದ್ದಾರೆ. ಇನ್ನು ತಮಿಳು ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ದು,'ವಾರಿಸು' ಚಿತ್ರದಲ್ಲಿ ದಳಪತಿ ವಿಜಯ್‌ ಅವರ ಜೊತೆ ಸ್ಕ್ರೀನ್ ಶೇರ್‌ ಮಾಡಿದ್ದಾರೆ. ಬಾಲಿವುಡ್‌ನಲ್ಲೂ ರಶ್ಮಿಕಾ ಮಿಂಚುತ್ತಿದ್ದು,ಈಗಾಗಲೇ ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಜೊತೆಗೆ ನಟಿಸಿರುವ 'ಗುಡ್‌ ಬೈ' ಚಿತ್ರ, ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಿರುವ 'ಮಿಷನ್‌ ಮಜ್ನು' ಚಿತ್ರ ತೆರೆ ಕಾಣಲು ಸಜ್ಜಾಗಿವೆ.

  English summary
  Rashmika Mandanna took out time to consult a top orthopaedist in Hyderabad. She has been suffering from knee pain for the last few days.
  Saturday, September 24, 2022, 17:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X