»   » 'ಕರ್ಣ-ಸಾನ್ವಿ'ಯ ಮದುವೆ: ರಶ್ಮಿಕಾ ಕಡೆಯಿಂದ ಡೌಟ್ ಕ್ಲಿಯರ್

'ಕರ್ಣ-ಸಾನ್ವಿ'ಯ ಮದುವೆ: ರಶ್ಮಿಕಾ ಕಡೆಯಿಂದ ಡೌಟ್ ಕ್ಲಿಯರ್

Posted By:
Subscribe to Filmibeat Kannada

ಸದ್ಯ, ಸ್ಯಾಂಡಲ್ ವುಡ್ ನಲ್ಲಿ 'ಕಿರಿಕ್' ಜೋಡಿಯ ಮದುವೆಯದ್ದೇ ಸಮಾಚಾರ. ಎಲ್ಲಿ ನೋಡಿದ್ರು ಇವರಿಬ್ಬರು ಮದುವೆ ಆಗ್ತಿದ್ದಾರೆ. ಇಬ್ಬರು ಲವ್ ಮಾಡ್ತಿದ್ದಾರೆ ಎನ್ನುವ ಗುಸು ಗುಸುಗಳು ಕೇಳಿ ಬರುತ್ತಿದೆ. ಈ ಸುದ್ದಿಯನ್ನ ಯಾರು ಹರಿದಾಡುಸುತ್ತಿದ್ದರೋ ಗೊತ್ತಿಲ್ಲ. ಆದ್ರೆ, ಅಂತವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್.

ಹೌದು, ನಟ ರಕ್ಷಿತ್ ಶೆಟ್ಟಿ ಹಾಗೂ 'ಕಿರಿಕ್ ಪಾರ್ಟಿ' ನಾಯಕಿ ರಶ್ಮಿಕಾ ಮಂದಣ್ಣ ಮದುವೆ ಆಗ್ತಿದ್ದಾರೆ ಎಂಬ ವಿಷಯಕ್ಕೆ ಖುದ್ದು ನಟಿಯ ತಾಯಿಯೇ ಬ್ರೇಕ್ ಹಾಕಿದ್ದಾರೆ.['ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ-ರಶ್ಮಿಕಾ ಮದುವೆ ಅಂತೆ!]

ಹಾಗಾದ್ರೆ, ಮದುವೆ ಸುದ್ದಿ ಬಗ್ಗೆ ರಶ್ಮಿಕಾ ತಾಯಿ ಏನ್ ಹೇಳಿದರು ಅಂತ ಮುಂದೆ ಓದಿ....

ಮದುವೆ ಎನ್ನುವುದು ಸುಳ್ಳು ಸುದ್ದಿ!

ರಕ್ಷಿತ್ ಶೆಟ್ಟಿ ಅವರ ಜತೆ ಮದುವೆಯಾಗುತ್ತಿದ್ದೇನೆ ಎಂಬುದು ಸುಳ್ಳು ಸುದ್ದಿ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ' ಎಂದು ಸ್ವತಃ ರಶ್ಮಿಕಾ ಅವರ ತಾಯಿ ಸ್ಪಷ್ಟಪಡಿಸಿದ್ದಾರೆ.[ಏಪ್ರಿಲ್ 14 ರಿಂದ ಶುರುವಾಗಲಿದೆ ರಶ್ಮಿಕಾ ಜೊತೆ ಗಣೇಶ್ 'ಚಮಕ್']

ಮದುವೆಯ ಆಲೋಚನೆ ಖಂಡಿತ ಇಲ್ಲ!

''ಇದರ ಬಗ್ಗೆ ಏನೂ ಗೊತ್ತಿಲ್ಲ. ಮದುವೆಯ ಆಲೋಚನೆ ಖಂಡಿತ ಇಲ್ಲ. ಮದುವೆ ಎಂಬುದು ತುಂಬ ಗಂಭೀರವಾದ ವಿಷಯ. ಅದರ ಬಗ್ಗೆ ನಾವಿನ್ನೂ ಆಲೋಚನೆ ಮಾಡಿಲ್ಲ. ಸದ್ಯಕ್ಕೆ ರಶ್ಮಿಕಾ ವೃತ್ತಿ ಜೀವನದತ್ತ ಗಮನವನ್ನು ಕೇಂದ್ರೀಕರಿಸಿದ್ದೇವೆ' ಎಂದಿದ್ದಾರೆ.[ಸೆಟ್ಟೇರಿತು 'ಕಿರಿಕ್' ಹುಡುಗಿಯ ಚೊಚ್ಚಲ ತೆಲುಗು ಚಿತ್ರ]

ಮದುವೆ ಬಗ್ಗೆ ಯೋಚಿಸಿಲ್ಲ ಎಂದ ರಕ್ಷಿತ್

ಇನ್ನು ಮತ್ತೊಂದೆಡೆ ನಟ ರಕ್ಷಿತ್ ಶೆಟ್ಟಿ ಕೂಡ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ಇದೆಲ್ಲ ಸುಳ್ಳು ಎಂದಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ, ಇನ್ನು ಎರಡು ವರ್ಷಗಳ ಕಾಲ ಮದುವೆ ಬಗ್ಗೆ ಪ್ರಸ್ತಾವನೆ ಇಲ್ಲ ಎಂದಿದ್ದಾರೆ.[ ವಿಡಿಯೋ: ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ 'ಕಿರಿಕ್ ಪಾರ್ಟಿ' ಹಾಡು.. 'ಅಲೆಲೆಲೆ..']

ಎಲ್ಲ ವದಂತಿ ಅಂತೆ!

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ವಿವಾಹ ಸಂಬಂಧಕ್ಕೆ ಇಬ್ಬರ ಮನೆಯವರೂ ಒಪ್ಪಿಗೆ ನೀಡಿದ್ದು, ಇದೇ ತಿಂಗಳು ನಿಶ್ಚಿತಾರ್ಥ ನಡೆಯಲಿವೆ ಎಂದು ಸುದ್ದಿ ಗಾಂಧಿನಗರದಲ್ಲಿ ಹರಡಿತ್ತು. ಅದೆಲ್ಲವೂ ಹಾಗಾದ್ರೆ ವದಂತಿಯೇ?

ಆಪ್ತರು ನಿಜ ಎನ್ನುತ್ತಿದ್ದಾರೆ!

ಆದ್ರೆ, ಈ ಸುದ್ದಿಯನ್ನ ರಕ್ಷಿತ್ ಶೆಟ್ಟಿ ಆಪ್ತರು ನಿಜ ಎನ್ನುತ್ತಿದ್ದಾರೆ. ಇಬ್ಬರು ಲವ್ ಮಾಡ್ತಿರುವುದು ನಿಜಾ, ಈಗಾಗಲೇ ಮನೆಯವರು ನಿರ್ಧರಿಸುವುದು ನಿಜಾ ಎನ್ನುತ್ತಿದ್ದಾರೆ. ಆದ್ರೆ, ಇದನ್ನ ಇಬ್ಬರು ಅಲ್ಲೆಗಳೆಯುತ್ತಿದ್ದಾರೆ. ಸದ್ಯಕ್ಕೆ ಇದು ಅಂತೆ-ಕಂತೆಯಾಗಿಯೇ ಉಳಿದಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.

English summary
Kannada Actress Rashmika Mandanna Gives Clarity On Her Marriage

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada