'ಡಿಯರ್ ಕಾಮ್ರೇಡ್'ನಲ್ಲಿ ರಶ್ಮಿಕಾಗೆ ಕಷ್ಟ ಆಗಿದ್ದು 5 ರಿಂದ 10 ನಿಮಿಷದ ಈ ದೃಶ್ಯ
Recommended Video
ಸಿನಿಮಾದ ಕೆಲವು ಪಾತ್ರಗಳಿಗಾಗಿ, ಕೆಲವು ದೃಶ್ಯಗಳಿಗಾಗಿ ಕಲಾವಿದರು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಅದೇ ರೀತಿ ನಟಿ ರಶ್ಮಿಕಾ ಮಂದಣ್ಣ ಕೂಡ ತುಂಬ ಕಷ್ಟ ಪಟ್ಟು ಒಂದು ಪಾತ್ರಕ್ಕೆ ಸಿದ್ಧವಾಗಿದ್ದರು. ಅದೇ 'ಡಿಯರ್ ಕಾಮ್ರೇಡ್' ಚಿತ್ರದ ಲಿಲ್ಲಿ ಪಾತ್ರ.
ರಶ್ಮಿಕಾ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಲಿಲ್ಲಿ ಪಾತ್ರದಲ್ಲಿ ನಡೆಸುತ್ತಿದ್ದಾರೆ. ವಿಶೇಷ ಅಂದರೆ, ಇದು ಕ್ರಿಕೆಟ್ ಆಟಗಾರ್ತಿಯ ರೋಲ್. ಸಿನಿಮಾದಲ್ಲಿ ಲಿಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿ ಆಗಿರುತ್ತಾಳೆ. ಈ ಪಾತ್ರಕ್ಕಾಗಿ ರಶ್ಮಿಕಾ ಕ್ರಿಕೆಟ್ ಕಲಿತಿದ್ದಾರೆ.

ಬ್ಯಾಟ್ ಹೇಗೆ ಹಿಡಿಯುವುದು ಅಂತ ತಿಳಿಯದೆ ಇದ್ದ ರಶ್ಮಿಕಾ ಈಗ ಬೌಂಡರಿ ಬಾರಿಸುತ್ತಾರಂತೆ. ಅದಕ್ಕೆ ಕಾರಣ 'ಡಿಯರ್ ಕಾಮ್ರೇಡ್' ಸಿನಿಮಾ. ಚಿತ್ರದಲ್ಲಿ ಕ್ರಿಕೆಟ್ ದೃಶ್ಯ ಬರೀ 5 ರಿಂದ 10 ನಿಮಿಷ ಇದೆ. ಆದರೆ, ಆ ದೃಶ್ಯಕ್ಕಾಗಿ ರಶ್ಮಿಕಾ ಸಾಕಷ್ಟು ಶ್ರಮ ಹಾಕಿದ್ದಾರೆ.

ನಾಲ್ಕೈದು ತಿಂಗಳುಗಳ ಕಾಲ ಬೆಳಗ್ಗೆ 5 ಗಂಟೆಗೆ ಎದ್ದು, ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ಚಿತ್ರದಲ್ಲಿ ಕ್ರಿಕೆಟ್ ನ ಸೀನ್ ಕಡಿಮೆ ಇದ್ದರೂ ಅದು ಸರಿಯಾಗಿ ಬರಬೇಕು ಎಂದು ಸಾಕಷ್ಟು ತಯಾರಿ ಮಾಡಿದ್ದರಂತೆ. ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿ ಪಾತ್ರ ಆಗಿರುವ ಕಾರಣ ಕ್ರಿಕೆಟ್ ನ ಪ್ರತಿ ಅಂಶ ಕೂಡ 100% ಇರಬೇಕಾಗಿತ್ತಂತೆ.


Click it and Unblock the Notifications











