For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ಬಗ್ಗೆ ರಿವೀಲ್ ಮಾಡಿದ ನಟಿ ರಶ್ಮಿಕಾ ಮಂದಣ್ಣ

  |

  ನಟಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣ ಭಾರತೀಯ ಸಿನಿಮಾಗಳ ಜೊತೆಗೆ ಬಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಒಂದು ಸಿನಿಮಾಗೆ ಸಹಿ ಮಾಡುತ್ತಿದ್ದಂತೆ ಅವಕಾಶಗಳ ಸುರಿಮಳೆಯೇ ರಶ್ಮಿಕಾ ಪಾಲಾಗಿದೆ. ತೆಲುಗು ಮತ್ತು ಹಿಂದಿಯಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಇತ್ತೀಚಿಗೆ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ.

  ಬಾಯ್ ಫ್ರೆಂಡ್ ಯಾರು ಅಂತ ಹೇಳಿದ ರಶ್ಮಿಕಾ ಮಂದಣ್ಣ!! | Filmibeat Kannada

  ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮುರಿದು ಬಿದ್ದಮೇಲೆ ರಶ್ಮಿಕಾ ಹೆಸರು ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಕೇಳಿಬಂದಿತ್ತು. ಇಬ್ಬರ ನಡುವೆ ಸಾಕಷ್ಟು ಗಾಸಿಪ್ ಹರಿದಾಡಿದರೂ ಯಾವುದಕ್ಕೂ ತಲೆಕೆಡಿಸಿಕೊಂಡವರಲ್ಲ. ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ರಶ್ಮಿಕಾ ಸದಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತಾರೆ. ಈ ನಡುವೆ ರಶ್ಮಿಕಾ ತನ್ನ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ..

  ಇನ್ಸ್ಟಾಗ್ರಾಮ್ ಲೈವ್ ಬಂದಿದ್ದ ರಶ್ಮಿಕಾ

  ಇನ್ಸ್ಟಾಗ್ರಾಮ್ ಲೈವ್ ಬಂದಿದ್ದ ರಶ್ಮಿಕಾ

  ಕಿರಿಕ್ ಸುಂದರಿ ಇನ್ಸ್ಟಾಗ್ರಾಮ್‌ನಲ್ಲಿ ಲೈವ್ ಬಂದಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ರಶ್ಮಿಕಾ ಲೈವ್ ನಲ್ಲಿ ಅಭಿಮಾನಿಗಳು ಕೇಳುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಒಂದೂವರೆ ಲಕ್ಷಕ್ಕೂ ಅಧಿಕ ಮಂದೆ ರಶ್ಮಿಕಾ ಮಂದಣ್ಣ ಲೈವ್ ವೀಕ್ಷಣೆ ಮಾಡುತ್ತಿದ್ದರು. 10 ಸಾವಿರಕ್ಕೂ ಅಧಿಕ ಕಾಮೆಂಟ್‌ಗಳು ಹರಿದುಬಂದಿವೆ.

  ಬಾಯ್ ಫ್ರೆಂಡ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

  ಬಾಯ್ ಫ್ರೆಂಡ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

  ಲೈವ್ ನಲ್ಲಿ ಅಭಿಮಾನಿಯೊಬ್ಬ ರಶ್ಮಿಕಾಗೆ, 'ನಿಮ್ಮ ಬಾಯ್ ಫ್ರೆಂಡ್ ಯಾರು..?' ಎಂದು ಕೇಳಿದ ಪ್ರಶ್ನೆಗೆ ರಶ್ಮಿಕಾ ಅಷ್ಟೆ ಕೂಲ್ ಆಗಿ ಉತ್ತರ ನೀಡಿದ್ದಾರೆ. ಕೆಲಸವೇ ನನ್ನ ಬಾಯ್ ಫ್ರೆಂಡ್ ಎಂದಿದ್ದಾರೆ. ಬೇರೆ ಯಾವುದಕ್ಕೂ ನನಗೆ ಸಮಯವಿಲ್ಲ' ಎಂದು ಹೇಳಿದ್ದಾರೆ.

  ವಿಜಯ್ ದೇವರಕೊಂಡ ಜೊತೆ ಸಿನಿಮಾ ಯಾವಾಗಾ?

  ವಿಜಯ್ ದೇವರಕೊಂಡ ಜೊತೆ ಸಿನಿಮಾ ಯಾವಾಗಾ?

  ಇನ್ನು ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುವ ವಿಚಾರವನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ ಇದನ್ನು ನೀವು ಅವರ ಬಳಿಯೇ ಕೇಳಬೇಕು ಎಂದಿದ್ದಾರೆ. ಬಳಿಕ ಉತ್ತಮ ಸ್ಕ್ರಿಪ್ಟ್ ಇದ್ದರೆ ಖಂಡಿತ ನಟನೆ ಮಾಡುತ್ತಿವೆ ಎಂದು ಹೇಳಿದ್ದಾರೆ.

  ಹಾಲಿವುಡ್‌ಗೆ ಹೋಗ್ತಾರಾ ರಶ್ಮಿಕಾ

  ಹಾಲಿವುಡ್‌ಗೆ ಹೋಗ್ತಾರಾ ರಶ್ಮಿಕಾ

  ಸದ್ಯ ರಶ್ಮಿಕಾ ಹೈದರಾಬಾದ್‌ನಲ್ಲೇ ವಾಸವಾಗಿದ್ದಾರೆ. ಮುಂಬೈನಲ್ಲಿದ್ದ ರಶ್ಮಿಕಾ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಹೈದರಾಬಾದ್ ಗೆ ವಾಪಸ್ ಆಗಿದ್ದಾರೆ. ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದಿರುವ ಕಾರಣ ಹೈದರಾಬಾದ್‌ನಲ್ಲೇ ನೆಲೆಸಿದ್ದಾರೆ. ಇದೇ ಸಮಯದಲ್ಲಿ ಹಾಲಿವುಡ್ ಸಿನಿಮಾ ಯಾವಾಗ ಎಂದು ಕೇಳಿದ ಅಭಿಮಾನಿಯ ಪ್ರಶ್ನೆಗೆ ರಶ್ಮಿಕಾ ಹಾಲಿವುಡ್ ಸಿನಿಮಾ ಮಾಡಿದಾಗ ಮಾತನಾಡೋಣ ಎಂದಿದ್ದಾರೆ.

  English summary
  Actress Rashmika Mandanna says work is her boyfriend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X