ಸ್ಟಾರ್ ಆದ ಮೇಲೂ ಸ್ನೇಹಿತೆಯರನ್ನು ಮರೆಯದ ರಶ್ಮಿಕಾ: ಗೆಳತಿ ಮದುವೆಯಲ್ಲಿ ಕಂಡಿದ್ದು ಹೀಗೆ!

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲೂ ಸದ್ದು ಮಾಡುವ ಮೂಲಕ ನ್ಯಾಶನಲ್ ಕ್ರಶ್ ಆಗಿದ್ದಾರೆ. ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಗಳಲ್ಲೇ ಹೆಚ್ಚಾಗಿ ಮಿಂಚುತ್ತಿರುವ ರಶ್ಮಿಕಾ ಬಹುಬೇಡಿಕೆಯ ನಟಿಯಾಗಿದ್ದಾರೆ.

ಟಾಲಿವುಡ್‌ ಸಿನಿಮಾಗಳಲ್ಲಿ ಹೆಚ್ಚು ಖ್ಯಾತಿ ಗಳಿಸಿದ ಬಳಿಕ ಈಗ ಬಾಲಿವುಡ್‌ನಲ್ಲೂ ತಮ್ಮ ಕರಾಮತ್ತು ತೋರಲು ಮುಂದಾಗಿದ್ದಾರೆ. ಬಾಲಿವುಡ್‌ನ ಎರಡೂ ಮೂರು ಸಿನಿಮಾಗಳಲ್ಲಿ ನಟಿ ರಶ್ಮಿಕಾ ನಟಿಸುತ್ತಿದ್ದು, ಬ್ಯುಸಿಯಾಗಿದ್ದಾರೆ.

ಇಷ್ಟೆಲ್ಲಾ ಬ್ಯುಸಿ ಶೆಡ್ಯೂಲ್ ಇದ್ದರೂ ಸಹ ನಟಿ ರಶ್ಮಿಕಾ ಫ್ಯಾಮಿಲಿ, ಫ್ರೆಂಡ್ಸ್‌ಗಾಗಿ ಕೊಂಚ ಬಿಡುವು ಮಾಡಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾಗಿದ್ದ ನಟಿ ರಶ್ಮಿಕಾ ಈಗ ಬೆಂಗಳೂರಿನಲ್ಲಿರುವ ಮತ್ತೊಬ್ಬ ಸ್ನೇಹಿತೆಯ ಮದುವೆಗೆ ಆಗಮಿಸಿ ವಧು-ವರರಿಗೆ ಶುಭಕೋರಿದ್ದಾರೆ.

 ಸ್ನೇಹಿತೆಯ ಮದುವೆಗೆ ಬೆಂಗಳೂರಿಗೆ ಆಗಮಿಸಿದ್ದ ರಶ್ಮಿಕಾ

ಸ್ನೇಹಿತೆಯ ಮದುವೆಗೆ ಬೆಂಗಳೂರಿಗೆ ಆಗಮಿಸಿದ್ದ ರಶ್ಮಿಕಾ

ನಿನ್ನೆ (ಮೇ 25) ನಟಿ ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಆಗಮಿಸಿದ್ದರು. ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಆಪ್ತ ಸ್ನೇಹಿತೆಯ ಮದುವೆಗೆ ಆಗಮಿಸಿ ನವ ವಧು-ವರರಿಗೆ ಶುಭಾಶಯ ಕೋರಿದ್ದಾರೆ. ಎಷ್ಟೇ ಬ್ಯುಸಿ ಶೆಡ್ಯೂಲ್‌ ಇದ್ದರೂ ಫ್ಯಾಮಿಲಿ, ಸ್ನೇಹಿತರಿಗೆ ಮಾತ್ರ ತಮ್ಮ ಸಮಯವನ್ನು ಮೀಸಲಿಟ್ಟಿರುತ್ತಾರೆ. ಹಾಗೆಯೇ ಬೆಂಗಳೂರಿಗೆ ಬಂದು ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾಗಿ ಮತ್ತೆ ಅಲ್ಲಿಂದ ಕರಣ್ ಜೋಹರ್ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.

 ಸ್ನೇಹಿತೆಯ ಮದುವೆ ಬಗ್ಗೆ ರಶ್ಮಿಕಾ ಮಾತು

ಸ್ನೇಹಿತೆಯ ಮದುವೆ ಬಗ್ಗೆ ರಶ್ಮಿಕಾ ಮಾತು

ಬೆಂಗಳೂರಿನಲ್ಲಿ ನಿನ್ನೆ (ಮೇ 25) ರಂದು ರಶ್ಮಿಕಾ ಸ್ನೇಹಿತೆಯ ಮದುವೆ ಅದ್ಧೂರಿಯಾಗಿ ನಡೆದಿದೆ. ಈ ಮದುವೆಯಲ್ಲಿ ರಶ್ಮಿಕಾ ಕೂಡ ಆಗಮಿಸಿ ಶುಭಾಶಯ ಕೋರಿದ್ದಾರೆ. ಬಳಿಕ ಮದುವೆಯಲ್ಲಿ ಭಾಗಿಯಾದ ಪೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. "ನೀವು ಭೇಟಿಯಾದ ದಿನದಿಂದ, ನೀವು ಸ್ನೇಹಿತರಾಗುವ ದಿನದವರೆಗೆ ಮತ್ತು ನೀವು ಡೇಟಿಂಗ್ ಮಾಡಿದ ದಿನದಿಂದ ಮದುವೆ ಆಗುವವರೆಗೂ ಸಾಕ್ಷಿಯಾಗಿದ್ದೇನೆ. ನಾನು ನಿಮ್ಮಿಬ್ಬರನ್ನು ಪ್ರೀತಿಸುತ್ತೇನೆ. ನೀವು ನನ್ನ ಜೀವನದಲ್ಲಿ ಇರುವುದು ಖುಷಿಯ ವಿಚಾರ," ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಸದ್ಯ ರಶ್ಮಿಕಾ ಎಷ್ಟೇ ಬ್ಯುಸಿಯಿದ್ದರೂ ಹಳೆಯ ಸ್ನೇಹಿತರನ್ನು ಮರೆಯದೇ ಪ್ರತಿಯೊಬ್ಬರ ಸಂಭ್ರಮದಲ್ಲಿ ಭಾಗಿಯಾಗುತ್ತಿರುವುದು ಅಭಿಮಾನಿಗಳಿಗೂ ಖುಷಿ ತಂದಿದೆ.

 ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ್ದ ರಶ್ಮಿಕಾ

ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ್ದ ರಶ್ಮಿಕಾ

ಇತ್ತೀಚಿಗಷ್ಟೇ ಕೊಡಗಿನ ಕುವರಿ ರಶ್ಮಿಕಾ ತಮ್ಮ ಬಾಲ್ಯ ಸ್ನೇಹಿತೆ ರಾಗಿಣಿಯ ಮದುವೆಗಾಗಿ ತಮ್ಮ ಹುಟ್ಟೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಕುಟುಂಬಸ್ಥರು ಹಾಗೂ ತನ್ನ ಹಳೆಯ ಎಲ್ಲಾ ಸ್ನೇಹಿತೆಯರ ಜೊತೆ ರಶ್ಮಿಕಾ ಮದುವೆಯಲ್ಲಿ ಮಿಂಚಿದ್ದರು. ಕೊಡಗು ಶೈಲಿಯಲ್ಲಿ ಸೀರೆಯುಟ್ಟು ಕಂಗೊಳಿಸಿದ್ದರು. ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ರಶ್ಮಿಕಾ ಸೀರೆ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.

 ರಶ್ಮಿಕಾ ಮುಂಬರುವ ಸಿನಿಮಾಗಳು ಇವೆನೇ

ರಶ್ಮಿಕಾ ಮುಂಬರುವ ಸಿನಿಮಾಗಳು ಇವೆನೇ

ನಟಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯಾಗಿದ್ದು, ಟಾಲಿವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 'ಪುಷ್ಪ' ಸಕ್ಸಸ್‌ನಲ್ಲಿರುವ ನಟಿ ರಶ್ಮಿಕಾ ಈಗ ಬಾಲಿವುಡ್‌ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯಿಸಿರುವ 'ಮಿಷನ್ ಮಜ್ನು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದ ಬಳಿಕ 'ಗುಡ್ ಬೈ', ಹಾಗೂ ಅಮಿತಾಭ್ ಬಚ್ಚನ್ ಜೊತೆಗೂ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು ಟಾಲಿವುಡ್‌ನಲ್ಲಿ 'ಪುಷ್ಪ 2' ಚಿತ್ರ ತಯಾರಾಗುತ್ತಿದ್ದು, ಆ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Actress Rashmika Mandanna Visit Bangalore For Friend Marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X