ಭರದಿಂದ ಸಾಗಿದೆ KGF 2 ಕೆಲಸಗಳು: ಇಲ್ಲಿದೆ ಹೊಸ ಅಪ್ಡೇಟ್!
ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. ಫೆಬ್ರವರಿ, ಮಾರ್ಚ್, ಏಪ್ರಿಲ್‌ನಲ್ಲಿ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗುತ್ತಿವೆ. ಏಪ್ರಿಲ್‌ನಲ್ಲಿ ಕೆಜಿಎಫ್ 2 ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಏಪ್ರಿಲ್ 14ಕ್ಕೆ ಚಿತ್ರ ರಿಲೀಸ್ ದಿನಾಂಕವನ್ನು ಫಿಕ್ಸ್ ಮಾಡಿಕೊಂಡಿದೆ. ಹಾಗಾಗಿ ಬಾಕಿ ಉಳಿದ ಚಿತ್ರದ ಕೆಲಸಗಳು ಭರದಿಂದ ಸಾಗಿದೆ.
ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಕೆಜಿಎಫ್ 2 ಡಬ್ಬಿಂಗ್ ಮುಗಿಸಿ, ಈ ವಿಚಾರವನ್ನು ಹಂಚಿಕೊಂಡಿದ್ದರು. ಜೊತೆಗೆ ಚಿತ್ರದ ಪ್ರಚಾರ ಕಾರ್ಯಗಳನ್ನು ಶುರು ಮಾಡುವ ಸಲುವಾಗಿ ಸಿನಿಮಾ ತಂಡ ದೇವಸ್ಥಾನಗಳಿಗೂ ಭೇಟಿ ನೀಡಿತ್ತು. ಮೂಕಾಂಬಿಕಾ, ಗಣಪತಿ, ಉಡುಪಿ ಕೃಷ್ಣನ ದರ್ಶನ ಪಡೆದಿದೆ ಕೆಜಿಎಫ್ ಚಿತ್ರ ತಂಡ.
ಸದ್ಯ ಚಿತ್ರದ ಅಂತಿಮ ಕೆಲಸಗಳು ಸಂಗೀತ ನಿರ್ದೇಶಕ ರವಿ ಬಸ್ರೂರು ಸ್ಟೋಡಿಯೋದಲ್ಲಿ ನಡೆಯುತ್ತಿದೆ. ಹಾಗಾಗಿ ಹಲವು ದಿನಗಳಿಂದ ಕೆಜಿಎಫ್ ಟೀಮ್ ಮತ್ತು ಯಶ್ ಹಲವು ದಿನಗಳಿಂದ ರವಿ ಬಸ್ರೂರು ಸ್ಟೂಡಿಯೋದಲ್ಲಿ ಬೀಡು ಬಿಟ್ಟಿದ್ದರು. ಇದೀಗ ಚಿತ್ರದ ಡಬ್ಬಿಂಗ್ ಕೆಲಸ ಹಂತ, ಹಂತವಾಗಿ ಮುಗಿಯುತ್ತಾ ಬಂದಿದೆ.

ನಟಿ ರವೀನಾ ಟಂಡನ್ ಪಾತ್ರದ ಡಬ್ಬಿಂಗ್ ಮುಕ್ತಾಯ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. '' ಕೂಲೆಸ್ಟ್ ಪ್ರೈಮ್ ಮಿನಿಸ್ಟರ್ ಅವರ ಡಬ್ಬಿಂಗ್ ಮುಗಿದಿದೆ" ಎಂದು ಬರೆದು ಫೋಟೊ ಹಂಚಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಸಿನಿಮಾ ಏಪ್ರಿಲ್ 14ಕ್ಕೆ ರಿಲೀಸ್ ಆಗಲಿದೆ. ಸದ್ಯದಲ್ಲೇ ಚಿತ್ರದ ಪ್ರಚಾರ ಕಾರ್ಯಕ್ರಮ ಆರಂಭಿಸಲಿದೆ ಚಿತ್ರ ತಂಡ. ಕನ್ನಡದ ಕೆಜಿಎಫ್ ಪ್ಯಾನ್ ಇಂಡಿಯಾ ಘರ್ಜಿಸೋಕೆ ಇನ್ನೂ ಎರಡು ತಿಂಗಳು ಮಾತ್ರ ಬಾಕಿ ಇದೆ.


Click it and Unblock the Notifications











