'ಕೆಜಿಎಫ್ 2' ತಂಡ ಸೇರಿಕೊಂಡ ರವೀನಾ ಟಂಡನ್
ಬಾಲಿವುಡ್ ನಟಿ ರವೀನಾ ಟಂಡನ್ 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ನಿಜವಾಗಿದೆ. ಇಂದು ಚಿತ್ರತಂಡವನ್ನು ಅವರು ಸೇರಿಕೊಂಡಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ರವೀನಾ ಟಂಡನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಡೀ ಚಿತ್ರತಂಡ ಅವರನ್ನು ಸ್ವಾಗತ ಮಾಡಿದೆ. 20 ವರ್ಷಗಳ ನಂತರ ರವೀನಾ ಟಂಡನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

ರವೀನಾ ಟಂಡನ್ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಚಾಪ್ಟರ್ 1 ನಲ್ಲಿ ಒಂದು ಮಹಿಳಾ ಪಾತ್ರದ ಉಲೇಖ ಮಾಡಿದ್ದು, ಪ್ರಧಾನ ಮಂತ್ರಿ ಪಾತ್ರದಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳುತ್ತಿದ್ದಾರೆ. ರವೀನಾ ಟಂಡನ್ ಪಾತ್ರದ ಹೆಸರನ್ನು ಬಹಿರಂಗೊಳಿಸಿದ್ದು, ರಮಿಕಾ ಸೇನ್ ಎಂಬ ಪಾತ್ರ ಅವರದ್ದಾಗಿದೆ.
'ಉಪೇಂದ್ರ' ಸಿನಿಮಾದ ನಂತರ 'ಕೆಜಿಎಫ್ 2' ನಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ದಶಕಗಳ ನಂತರ ಸ್ಯಾಂಡಲ್ ವುಡ್ ಗೆ ಬಂದಿದ್ದು, ತುಂಬ ಉತ್ಸುಕರಾಗಿದ್ದಾರೆ.
'ಕೆಜಿಎಫ್ 2' ಯಶ್ ನಟನೆಯ ಸಿನಿಮಾವಾಗಿದೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಕಿರಂಗದೂರು ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಇದೇ ವರ್ಷ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











